ಬಳ್ಳಾರಿ,ಜುಲೈ. 28: ವಿರೋಧ ಪಕ್ಷಗಳು ಆಳುವ ಪಕ್ಷದ ವಿರುದ್ಧ ಕೇಳುವ ಪಕ್ಷವಾಗಬೇಕೆ ಹೊರತು ಕುತಂತ್ರದಿಂದ ಕೂಡಿರಬಾರದು ಎಂದು ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ
ಕಿಡಿಗಾರಿದರು.
ಅವರು ಇಂದು ಸ್ನೇಹ ಸಂಪುಟದಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿ ಸರ್ಕಾರದ ದೋಷಪೂರಿತ ಅಥವಾ ಕಣ್ತಪ್ಪಿನಿಂದ ಆದ ಅಚತುರ್ಯವನ್ನು ನೆಪ ಮಾಡಿಕೊಂಡು ರುತ ಆರೋಪವನ್ನು ಮಾಡುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಸಂಗತಿ ಮೂಡ 50 ಅನುಪಾತದಲ್ಲಿ ನಿವೇಶನಗಳನ್ನು ಮಂಜೂರು ಮಾಡುತ್ತದೆ ಹೊರತು ಯಾರಿಗೂ ಹೆಚ್ಚಿನ ನಿವೇಶನಗಳನ್ನು ನೀಡಿರುವುದಿಲ್ಲ ಇದು ಈಗಿನದಲ್ಲ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಸಚಿವರು ಮಾಡಿರುವ ವಿಷಯವಾಗಿದೆ ಇದನ್ನು ಬಿಜೆಪಿ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಮುಖ್ಯಮಂತ್ರಿ ಇದ್ದಾಗಲೇ ಯಡಿಯೂರಪ್ಪನವರು ಜಿಂದಾಲ್ ಕಂಪನಿಯಿಂದ ಇಪ್ಪತ್ತು ಕೋಟಿ ರೂಪಾಯಿ ಚೆಕ್ಕನ್ನು ಪಡೆದುಕೊಂಡು ಹೇಲಿಗೆ ಹೋಗಿದ್ದರು ಇದು ಅದಕ್ಕಿಂತ ದೊಡ್ಡದಲ್ಲ ಇದು ಕೇವಲ ರಾಜಕೀಯ ಪಿತೂರಿ ಹೊರತು ಬೇರೆ ಯಾವುದೂ ಅಲ್ಲ ಎಂದು ಕಲ್ಲು ಕಂಬ ಪಂಪಾಪತಿ ಆರೋಪಿಸಿದರು.
ಬಿಜೆಪಿ ನಾಯಕ ವಿಜಯೇಂದ್ರನಿಗೆ ಸಾರ್ವಜನಿಕರ ಬಗ್ಗೆ ಕಳಕಳಿ ಇಲ್ಲ ಸಾರ್ವಜನಿಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದ ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅವರು ಎಂದಿಗೂ ಅವರಪ್ಪನ ತರ ಹಗರಣ ಮಾಡಿರುವುದಿಲ್ಲ, ನಾನು ಬಾಲಕ ವಿಜೇಂದ್ರ ನಿಗೆ ಹೇಳುತ್ತೇನೆ ರಾಜ್ಯದಲ್ಲಿ ಹಲವಾರು ಸಾರ್ವಜನಿಕ ಸಮಸ್ಯೆಗಳಿವೆ. ಅದರ ಕುರಿತು ನೀನು ಮಾತನಾಡಬೇಕೆ ಹೊರತು ಸಿಎಂ ವಿರುದ್ಧವಲ್ಲ ನೀವು ಮತ್ತು ನಿಮ್ಮ ಕುಟುಂಬ ಹಗರಣ ಕುಟುಂಬವಾಗಿದೆ ಎಂದು ರಾಜ್ಯದ ಎಲ್ಲರಿಗೂ ಗೊತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನಿಗೆ ರಾಜ್ಯದ ಬಗ್ಗೆ ಕಳಕಳಿ ಇದ್ದರೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ನಿಮ್ಮ ಪಕ್ಷದ ಸಂಸದರದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡು ರಾಜ್ಯಕ್ಕೆ ನ್ಯಾಯ ಒದಗಿಸಿಕೊಡು ಆಗ ನೀನು ನಾಯಕನಾಗುತ್ತೀಯಾ ಸುಳ್ಳು ಆರೋಪಗಳಿಂದ ನೀನು ನಾಯಕನಾಗಲಾರೆ ಬಾಲಕ ವಿಜೇಂದ್ರ ಎಂದು ವಿಜಯೇಂದ್ರನ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ವಿಷಯವಾಗಿ ರಾಜ್ಯದ ಮಾಜಿ ಅಧ್ಯಕ್ಷರಾದ ಯಡಿಯೂರಪ್ಪನವರು ಸುಮ್ಮನಿದ್ದಾರೆ ಬಾಲಕ ವಿಜೇಂದ್ರ ನೀನು ಅಹಿಂದ ಜನಾಂಗದ ಅಜಾತಶತ್ರುವಾದ ಸಿದ್ದರಾಮಯ್ಯನ ವಿರುದ್ಧ ಮಾತನಾಡುತ್ತಿದ್ದೀಯ ಎಚ್ಚ ಎಂದು ಎಚ್ಚರಿಕೆಯನ್ನು ನೀಡಿದರು.
ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿ ರಾಜ್ಯದ ವೈಟ್ ಪೇಪರ್ ಮುಖ್ಯಮಂತ್ರಿ ಎಂದು ಹೆಸರಾದ ಸಿದ್ದರಾಮಯ್ಯನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರೆ ನಿನ್ನ ವಿರುದ್ಧ ಅಹಿಂದ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಸಿದರು
ಈ ಸಂದರ್ಭದಲ್ಲಿ ಮಹಮ್ಮದ್ ಗೌಸ್, ನಾರಾ ಪ್ರತಾಪ್ ರೆಡ್ಡಿ, ಕುರುಬ ಸಂಘದ ಅಧ್ಯಕ್ಷ ಗಾದಿಲಿಂಗನಗೌಡ, ಎಲ್ ಮಾರಣ್ಣ ಸೇರಿದಂತೆ ಇತರರಿದ್ದರು.