ಬಳ್ಳಾರಿ,ಸೆ.17 : ಕಲಬುರಗಿಯ ರೌಡಿಪಟಾಲಂಗಳು ಸೇರಿ ಸುಳ್ಳು ಸಾಕ್ಷಿ ಸೃಷ್ಟಿಸಿ, ದಲಿತ ಸಮಾಜದ ಪ್ರತಿಷ್ಠಿತ ವ್ಯಕ್ತಿ ಹಾಗೂ ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಹನುಮಂತ ಜಿ.ಯಳಸಂಗಿರವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿರುವುದು ಖಂಡನೀಯ ಎಂದು ದಲಿತ ಸೇನೆಯ ಮುಖಂಡರುಗಳು ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಅವರಿಗೆ ಪ್ರತಿಭಟನೆ ಮೆರವಣಿಗೆಯ ಮೂಲಕ
ಅಪರ ಜಿಲ್ಲಾಧಿಕಾರಿಗಳಿಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಸವಿವರವಾದ ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಕಟ್ಟೆ ಸ್ವಾಮಿ ಮಾತನಾಡಿ.ಅಮಾಯಕರ ಮೇಲೆ ಸುಳ್ಳು ದೂರು ದಾಖಲಿಸಿ ಅಟ್ಟಹಾಸ ಮೆರೆಯುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಅಗ್ರಹಿಸಿದರು. ಹನುಮಂತ ಜಿ.ಯಳಸಂಗಿಯವರ ತೇಜೋವಧೆ ಮಾಡಲು ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರುತ್ತೆ. ಸುಳ್ಳು ಪ್ರಕರಣ ದಾಖಲಿಸಿರುವುದು . ಸುಳ್ಳು ದೂರು ನೀಡಿರುವವರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸಬೇಕು ಹನುಮಂತ ಜಿ.ಯಳಸಂಗಿಯವರು ಒಬ್ಬ ವಕೀಲರು ಹಾಗೂ ದಲಿತ ಸಮಾಜದ ಶಕ್ತಿ ಅಂತಹ ವ್ಯಕ್ತಿಯ ಮೇಲೆ ಇಲ್ಲಸಲ್ಲದ ಅರೋಪಗಳನ್ನ ಮಾಡಿ ವಿನಕಾರಣ ಪ್ರಕರಣದಲ್ಲಿ ಸಿಲುಕಿಸಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಸಮಾಜಘಾತುಕ ಶಕ್ತಿಗಳು ಮಾಡುತ್ತಿವೆ ಎಂದು ಅಕ್ರೋಶ ಹೊರ ಹಾಕಿದರು. ದಲಿತ ಸೇನೆಯು ಈ ದೇಶದ ಸಮಾಜಿಕ ಚಳುವಳಿಯಾಗಿದ್ದು ಪದ್ಮಭೂಷಣ ಪ್ರಶಸ್ತಿ ಪಡೆದ ರಾಮ್ ವಿಲಾಸ್ ಪಾಸ್ವಾನ್ ರವರು ಕಟ್ಟಿ ಬೆಳೆಸಿದ ಸಂಘಟನೆಯಾಗಿದ್ದು, ಪುಲೆ, ಶಾಹು, ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆಯಲ್ಲಿ ಸಾಮಾಜಿಕ
ಸಾಮಾನತೆಗಾಗಿ ಅನ್ಯಾಯ, ಅತ್ಯಾಚಾರ, ಸಮಾಜಿಕ ಬಹಿಷ್ಕಾರ, ದಲಿತರ ಕೊಲೆ, ಭ್ರಷ್ಟಾಚಾರದಂತಹ ಸಾಮಾಜಿ ಅನಾಚಾರಗಳ ವಿರುದ್ಧ ರಾಷ್ಟ್ರದ್ಯಾಂತ ಹೋರಾಟ ಮಾಡುತ್ತಿದೆ. ಇಂತಹ ಹಿನ್ನೆಲೆಯುಳ್ಳ ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಹನುಮಂತ ಜಿ.ಯಳಸಂಗಿ ಯವರ ಮಾರ್ಗದರ್ಶನದಲ್ಲಿ ಚಳುವಳಿಗಳನ್ನ ರೂಪಿಸುತ್ತ ಈ ರಾಜ್ಯದ ಯುವ ಸಮೂಹದ ಸ್ವಾಭಿಮಾನಿ ಸಂಘಟನೆಯಾಗಿದೆ. ಇಂತಹ ಸಂಘಟನೆಯ ನಾಯಕರ ವಿರುದ್ಧ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೆಯ ಈ ಪ್ರಕರಣವನ್ನು ಸರಕಾರ ರದ್ದುಗೊಳಿಸಬೇಕು ಪ್ರಕರಣ ರೂವಾರಿ ರೌಡಿಶೀಟರ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಮುರಳಿ ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಯ್ಯ, ಉಪಾಧ್ಯಕ್ಷ ಮಾನಪ್ಪ, ರಾಜು ಕುರುವಳ್ಳಿ, ರಾಜ್ಯ ಉಪಾಧ್ಯಕ್ಷ ಮೆಹೆಬೂಬ್ ಸಿಂದೇಕರ್, ಸಂಡೂರು ತಾಲೂಕ ಅಧ್ಯಕ್ಷ ರಾಜೇಶ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಪ್ರಸಾದ್, ಕನ್ನಡ ಪರ ಸಂಘಟನೆಯ ಮುಖಂಡರಾದ ಪಿ.ಶೇಖರ್ ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.