ಸುವರ್ಣವಾಹಿನಿ ಸುದ್ದಿ
ಹೊಸಪೇಟೆ,ಡಿ,೨೨: ಹೊಸಪೇಟೆ ತಾಲ್ಲೂಕಿನ ರೈತರು ತಮ್ಮಲ್ಲಿರುವ ಹೆಚ್ಚುವರಿ ಮೇವು ಲಭ್ಯತೆಯ ಮಾಹಿತಿ ಸಲ್ಲಿಸುವಂತೆ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ತಹಶೀಲ್ದಾರ ವಿಶ್ವಜಿತ್ ಮೆಹ್ತಾ ಅವರು ತಿಳಿಸಿದ್ದಾರೆ.
ಹೊಸಪೇಟೆ ತಾಲ್ಲೂಕನ್ನು ಈಗಾಗಲೇ ಬರ ಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದ್ದು, ಜಾನುವಾರುಗಳಿಗೆ ಅಗತ್ಯವಿರುವ ಮೇವು ಖರೀದಿ ಮಾಡಬೇಕಾಗಿರುತ್ತದೆ. ಹೊಸಪೇಟೆ ತಾಲ್ಲೂಕಿನ ರೈತರ ಬಳಿ ಇರುವ ಮೇವಿಗೆ ಒಂದು ಟನ್ ಭತ್ತ ಅಥವಾ ರಾಗಿ ಹುಲ್ಲಿಗೆ (ಸಾಗಾಣಿಕೆ ವೆಚ್ಚ ಸೇರಿದಂತೆ) ೬,೦೦೦ ರೂ.ಗಳು ನಿಗದಿಯಾಗಿರುತ್ತದೆ.
ಆಸಕ್ತ ರೈತರು ತಮ್ಮ ಮೇವು ಲಭ್ಯತೆ ಮಾಹಿತಿಯೊಂದಿಗೆ ಹೊಸಪೇಟೆ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಸವರಾಜ ಬೆಣ್ಣಿ ಮೊ.ಸಂ: ೯೪೪೮೧೨೭೮೪೮, ಇವರನ್ನು ಸಂಪರ್ಕಿಸಬಹುದಾಗಿದೆ.