ಬಳ್ಳಾರಿ, ಆಗಸ್ಟ್.06:ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆ ಪರವಾನಿಗೆಗಳ ನವೀಕರಣ ಮತ್ತು ಹೊಸದಾಗಿ ಪರವಾನಿಗೆಯನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಲು ನಗರದ ಹಳೇ ಮುನಿಸಿಪಲ್ , ಪಾಲಿಕೆಯ ಕಚೇರಿ, ಸಭಾಪತಿ ಬೀದಿ, ಹಜರತಿ ಬೀದಿಯಲ್ಲಿ ಆಗಸ್ಟ್ 6 ರಿಂದ ದಿ 09 ರವರೆಗೆ ಟ್ರೇಡ್ ಲೈಸೆನ್ಸ್ ಕ್ಯಾಂಪನ್ನು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಸುಮಾರು 10000 ಕ್ಕೂ ಹೆಚ್ಚು ವರ್ತಕರು ವ್ಯಾಪಾರ ಉದ್ಯಮಿಗಳನ್ನು ನಡೆಸುತ್ತಿದ್ದಾರೆ ಆದರೆ ಇವರಲ್ಲಿ ಕೇವಲ 6,000 ಉದ್ದಿಮೆದಾರರು ಮಾತ್ರ ಪರವಾನಿಗೆಯನ್ನು ಪಡೆದು ವ್ಯಾಪಾರ ಮಾಡುತ್ತಿದ್ದಾರೆ, ಇನ್ನುಳಿದವರಿಗೆ ಅನುಕೂಲವಾಗುವ ದೃಷ್ಟಿಯಿಂದ ಮಹಾನಗರ ಪಾಲಿಕೆವತಿಯಿಂದ ಮೇಲ್ಕಂಡ ಮೂರು ಸ್ಥಳಗಳಲ್ಲಿ ಟ್ರೇಡ್ ಲೈಸೆನ್ಸ್ ಕ್ಯಾಂಪ್ ಗಳನ್ನೂ ಹಮ್ಮಿಕೊಳ್ಳಲಾಗಿದೆ. ಉದ್ದಿಮೆ ಪರವಾನಿಗೆಯನ್ನು ಪಡೆಯುವುದರಿಂದ ವರ್ತಕರು ವ್ಯಾಪಾರವನ್ನು ಯಾವುದೇ ತೊಂದರೆ ಇಲ್ಲದೆ ಮುಂದುವರಿಸಿಕೊಂಡು ಹೋಗಬಹುದು ಮತ್ತು ಅವರ ಉದ್ದಿಮೆಯನ್ನು ವಿಸ್ತರಿಸಿಕೊಳ್ಳಲು ಹಣಕಾಸಿನ ಸಂಸ್ಥೆಗಳಿಂದ ಸಾಲವನ್ನು ಸಹ ಪಡೆಯಲು ಈ ಪರವಾನಿಗೆ ಅನುಕೂಲಕರವಾಗಲಿದೆ ತಪ್ಪದೇ ವರ್ತಕರು ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಅವಧಿಯಲ್ಲಿ ವ್ಯಾಪಾರಿಗಳು ಬೆಳಿಗ್ಗೆ 10.00 ರಿಂದ ಸಂಜೆ 5.30 ವರೆಗೆ ಹೊಸ ಪರವಾನಿಗೆ ಪಡೆಯಲು ಮತ್ತು ಈಗಾಗಲೇ ಇರುವ ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳಲುಅರ್ಜಿಗಳನ್ನು ಸಲ್ಲಿಸಬಹುದು, ಅರ್ಜಿಯೊಂದಿಗೆ ವರ್ತಕರು ಈ ಸಂದರ್ಭದಲ್ಲಿ ಕಟ್ಟಡದ ಸಂಬಂಧಿಸಿದ ದಾಖಲೆಗಳೊಂದಿಗೆ ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಪಾವತಿಸಿದಲ್ಲಿ ಪರವಾನಿಗೆಗಳನ್ನು ನೀಡಲಾಗುವುದು ಮತ್ತು ಹಳೆ ಪರವಾನಿಗೆ ನವೀಕರಣ ಮಾಡಿಕೊಡಲಾಗುವುದು ವರ್ತಕರು ಈ ಕ್ಯಾಂಪನ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಪೌರ ನಂದೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.