ಬಳ್ಳಾರಿ: ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಪೀಠಾಧಿಪತಿಗಳಾದ ಪರಮಪೂಜ್ಯ ೧೦೦೮ ಶ್ರೀ ಡಾ.ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ನಾಳೆ ಜು.೧೮ ರಂದು ಬಳ್ಳಾರಿ ನಗರಕ್ಕೆ ದಯಮಾಡಿಸಲಿದ್ದಾರೆ.
ನಗರದ ಶ್ರೀ ಸತ್ಯನಾರಾಯಣಪೇಟೆಯ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಬೆಳಿಗ್ಗೆ ೮-೩೦ಕ್ಕೆ ಶ್ರೀ ಸುದರ್ಶನ ಹೋಮ ನೆರವೇರಿಸಲಿದ್ದಾರೆ. ನಂತರ ಸದ್ಭಕ್ತರಿಗೆ ತಪ್ತ ಮುದ್ರಧಾರಣೆ ಮಾಡಲಿದ್ದಾರೆ.
ಎಸ್.ಎನ್.ಪೇಟೆ ೧ನೇ ಅಡ್ಡ ರಸ್ತೆಯಲ್ಲಿರುವ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಈ ಕಾರ್ಯಕ್ರಮ ನೆರವೇರಲಿದ್ದು ಸಕಲ ಸದ್ಭಕ್ತರು ಶ್ರೀಗಳ ದರ್ಶನಾಶೀರ್ವಾದ ಪಡೆದು ಧನ್ಯತೆ ಹೊಂದುವ0ತೆ ಶ್ರೀಮಠದ ಸಂಘಟಕರು ತಿಳಿಸಿದ್ದಾರೆ.