ಬಳ್ಳಾರಿ: ಬೈಕ್ ರೈಡ್ ವೇಳೆ ತುಂಗಭದ್ರಾ ಜಲಾಶಯದ ಹಿನ್ನೀರಿನ ಕಂದಕಕ್ಕೆ ಬಿದ್ದು ಯುವಕ ಸಾವನ್ನಪ್ಪಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಹೊಸಪೇಟೆ ಹೊರ ವಲಯದಲ್ಲಿ ನಡೆದಿದೆ.
ಇಳಕಲ್ ಮೂಲದ ಜಗದೀಶ್ (28) ಮೃತಪಟ್ಟರೆ, ಶಶಾಂಕ್ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಇಳಕಲ್ಗೆ ಇವರಿಬ್ಬರು ಬೈಕ್ನಲ್ಲಿ ತೆರಳುತ್ತಿದ್ದರು.
ವೇಗದಲ್ಲಿದ್ದ ಬೈಕ್ ತುಂಗಭದ್ರಾ ಜಲಾಶಯದ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನೊಂದಿಗೆ ಇವರು ಕೆಳಗಡೆ ಬಿದ್ದಿದ್ದಾರೆ.
ಗಾಯಾಳುವನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.