ಬಳ್ಳಾರಿ,ಏ. 13; ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದು ರೈತಪರ ಯೋಜನೆಯನ್ನುಜಾರಿಗೊಳಿಸಿಲ್ಲ, ಕಳೆದ ಅವದಿಯಲಿದ್ದ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಆರು ಸಾವಿರ ರೂಪಾಯಿಗಳ ಜೊತೆಗೆ ರಾಜ್ಯದಿಂದ ನಾಲ್ಕು ಸಾವಿರ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುತ್ತಿದ್ದರು, ರೈತ ಮಹಿಳೆಯರಿಗೆ ಹಾಲಿ ಪ್ರೋತ್ಸಾಹ ಧನವೆಂದು ಒಂದು ಲೀಟರ್ ಹಾಲಿಗೆ ಐದು ರೂಪಾಯಿಗಳಂತೆ ಹೈನುಗಾರಿಕೆ ಕುಟುಂಬಕ್ಕೆ ಜಮೆ ಮಾಡಲಾಗುತ್ತಿತ್ತು ಕಾಂಗ್ರೆಸ್ ಸರ್ಕಾರ ಇದನ್ನು ಸಹ ಸರಿಯಾದ ರೀತಿಯಲ್ಲಿ ರೈತರಿಗೆ ನೀಡುತ್ತಿಲ್ಲ ಒಟ್ಟಾರೆಯಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ಎಂದು ಬಿ.ಜೆ.ಪಿ ರಾಜ್ಯ ರೈತ ಮೋರ್ಚದ ಅಧ್ಯಕ್ಷ ಎ.ಎಸ್ ನಡಹಳ್ಳಿ ಆರೋಪಿಸಿದರು.
ಅವರು ನಗರದ ವಾಜಪೇಯಿ ಬಡಾವಣೆಯಲ್ಲಿರುವ ಬಿ.ಜೆ.ಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ರೈತರ ಪಂಪ್ ಸೆಂಟ್ ವಿದ್ಯುತ್ ಸಂಪರ್ಕ ಬಿ.ಎಸ್.ವೈ ಅವದಿಯಲ್ಲಿ ರೂ ಐವತ್ತರಿಂದ ಹದಿನೈದು ಸಾವಿರ ರೂಪಾಯಿಗಳವರೆಗೆ ವೆಚ್ಚವಾಗುತ್ತಿತ್ತು, ಆದರೆ ಈಗ ಎರಡು ಮೂರು ಲಕ್ಷ ರೂಪಾಯಿಗಳಾಗುತ್ತಿದೆ, ಅದು ಸಹ ರೈತರೆ ಈ ವೆಚ್ಚವನ್ನು ಭರಿಸಬೇಕಾಗಿದೆ, ಡಿಸೆಲ್ ಪಂಪ್ ಸೆಟ್ ಬಳಸುವ ರೈತರಿಗಾಗಿ ಸಬ್ಸಿಡಿಯಲ್ಲಿ ಡಿಜೆಲ್ ಪೂರೈಸಲಾತ್ತಿತ್ತು ಅದನ್ನು ಸಹ ಈಗಿನ ಸರ್ಕಾರ ತೆಗೆದು ಹಾಕಿದೆ ಇದರಿಂದ ರೈತರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ, ಕಾಂಗ್ರೆಸ್ ಸರ್ಕಾರ ಬರಿ ಭರವಸೆಗಳ ಸರ್ಕಾರ ರೈತರಿಗಾಗಿ ಒಂದು ಯೋಜನೆಯನ್ನು ಇದುವರೆಗೂ ಜಾರಿಗೆ ತರಲಾಗುತ್ತಿಲ್ಲ, ರೈತರ ವಿಷಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ರಾಜ್ಯದಲ್ಲಿ ಮಳೆಯ ಅಭಾವದಿಂದ ಈಗ ಬರಗಾಲ ಪರಿಸ್ಥಿತಿ ಇದೆ ಯಾವೊಬ್ಬ ಸಚಿವರಾಗಲಿ ಶಾಸಕರಾಗಲಿ ಹಳ್ಳಿಗಳಿಗೆ ಹೋಗಿ ಬರ ಅಧ್ಯಯನ ಮಾಡುತ್ತಿಲ್ಲ, ಜಾನುವಾರುಗಳಿಗೆ ಮೇವು ನೀರು ನೀಡುತ್ತಿಲ್ಲ, ಜನಗಳಿಗೆ ಸಹ ಕುಡಿಯುವನ ನೀರಿನ ಅಭಾವ ಎದುರಾಗಿದ್ದು ಇದನ್ನು ಪರಿಹರಿಸಲು ಸಹ ಮುಂದಾಗಿಲ್ಲಿ ಇದರಿಂದಾಗಿ ಹಳ್ಳಿಗಳಲ್ಲಿ ರೈತರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ, ಕಳೆದ ಬಿ.ಜೆ.ಪಿ ಸರ್ಕಾರದ ಅವದಿಯಲ್ಲಿ ಎನ್.ಡಿ.ಆರ್.ಎಫ್ ಯೋಜನೆಯ ಹಣದಿಂದ 23 ಲಕ್ಷ ಹೆಕ್ಟರ್ಗೆ 28 ಸಾವಿರ ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ನೀಡಲಾಗಿತ್ತು, ರಾಜ್ಯ ಸರ್ಕಾರ ನಿರ್ವಹಣೆ ಸಾಧ್ಯವಾಗದೆ ಅದು ಕೊಟ್ಟಿಲ್ಲ ಇದು ಕೊಟ್ಟಿಲ್ಲ ಎಂದು ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ, ಸಿದ್ದರಾಮಯ್ಯನವರಿಗೆ ಸರ್ಕಾರ ನಡೆಸಲು ಬಾರದೆ ಕೇಂದ್ರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಈ ಎಲ್ಲಾ ಕಾರಣಗಳಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಉಪಾಧ್ಯಕ್ಷ ವಿ.ಕೆ ಬಸಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಐನಾಥರೆಡ್ಡಿ, ರಾಜ್ಯ ಉಪಾಧ್ಯಕ್ಷ ಗುರುಲಿಂಗನಗೌಡ, ಮಾಜಿ ಅಧ್ಯಕ್ಷ ಮುರಹರಿಗೌಡ, ಸುಮಾರೆಡ್ಡಿ, ಮದಿರೆ ಕುಮಾರಸ್ವಾಮಿ ಸೇರಿದಂತೆ ಹಲವಾರು ರೈತ ಮುಖoಡರಿದ್ದರು.