ಬಳ್ಳಾರಿ,ಸೆ.21: ಬಳ್ಳಾರಿ ಬ್ರೂಸ್ ಪೇಟೆ ಪೊಲೀಸರಿಂದ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಇತ್ತೀಚೆಗೆ ನಗರದಲ್ಲಿ ನಡೆದ ದರೋಡೆ ಪ್ರಕರಣವೊಂದು ಭೇದಿಸಿ ಹೆಡ್ ಕಾನ್ಸ್ ಟೇಬಲ್, ಹೋಂ ಗಾರ್ಡ್ ಸಹಿತ ಏಳು ಜನ ಡಕಾಯಿತರನ್ನು ಬಂಧಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಗರದ ಗಂಗಪ್ಪ ಜಿನ್ ಸರ್ಕಲ್ ನಲ್ಲಿ ಬಂಗಾರದ ವ್ಯಾಪಾರಿ ರಘು ಎಂಬುವರಿಗೆ
ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ಶೈಲಿಯಲ್ಲಿ ಪೊಲೀಸನ ನೆರವಿನಿಂದ ನಡೆದ ದರೋಡೆ ಪ್ರಕರಣ ಬಯಲಿಗೆಳೆಯಲಾಗಿದ್ದು, ತಮ್ಮ ಇಲಾಖೆಯ ಸಿಬ್ಬಂದಿಯೇ ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿದ್ರು ಬಿಡದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದಾರೆ ಎಂದು ಬಳ್ಳಾರಿ ಎಸ್ಪಿ ಶೋಭಾರಾಣಿ ತಿಳಿಸಿದ್ದಾರೆ.
ಇದರಿಂದ ಅಕ್ರಮ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಇಡೀ ಬಳ್ಳಾರಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ಸಂದೇಶ ನೀಡಿದಂತಾಗಿದೆ. ಕಳ್ಳರ ಜೊತೆಗೆ ಸೇರಿಕೊಂಡು ಪೊಲೀಸಪ್ಪ ಡಾಕಾಯಿತಿ ಮಾಡಿರೋ ಪ್ರಕರಣ ಬಯಲಿಗೆಳೆದ ಎಸ್ಪಿ ಶೋಭಾ ರಾಣಿ, ಬ್ರೂಸ್ ಪೇಟೆ ಪೋಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಹಾಗೂ ಹೋಂ ಗಾರ್ಡ್ ನಿಂದ ಲಕ್ಷಾಂತರ ರೂಪಾಯಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಪ್ರಕರಣ ಹಿನ್ನೆಲೆ: ರಘು ಎನ್ನುವ ಬಂಗಾರ ಅಂಗಡಿ ಮಾಲೀಕ ಕಳೆದ 12ನೇ ತಾರೀಖು ಬೆಳಿಗಿನ ಜಾವ ಬೈಕ್ ಮೇಲೆ 22 ಲಕ್ಷ 99 ಸಾವಿರ ನಗದು ಹಣ ಮತ್ತು 318 ಗ್ರಾಂ ಬಂಗಾರ ತೆಗೆದುಕೊಂಡು ಹೋಗುತ್ತಿದ್ದರು.
ನಗರದ ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗ್ತಿರುವಾಗ ಅವರ ಕಣ್ಣಿಗೆ ಕಾರದ ಪುಡಿ ಎರಚಿ ಹಣ ಒಡೆವೆ ಸೇರಿದಂತೆ ಲಕ್ಷಾಂತರ ರೂಪಾಯಿಗಳನ್ನು ದರೋಡೆ ಮಾಡಲಾಗಿತ್ತು. ಪ್ರಮುಖ ಆರೋಪಿಗಳಾದ ತೌಸೀಫ್ ಜಾವೀದ್, ಖಲಂದರ್, ಮುಸ್ತಕ್ ಅಲಿ ರೆಹಮಾನ್, ಆರೀಫ್ ಎಂಬ ಖದೀಮರು ಸಿನಿಮೀಯ ರೀತಿ ದರೋಡೆ ಮಾಡಿದ್ದರು. ಈ ಕಳ್ಳರು ಸೆರೆ ಸಿಕ್ಕಾಗ ಈ ಕಳ್ಳತನಕ್ಕೆ ಬ್ರೂಸ್ ಪೇಟ್ ಠಾಣೆಯ ಹೆಡ್ ಕಾನ್ಸಟೇಬಲ್ ಸಾಥ್ ನೀಡಿದ್ದ ಸತ್ಯ ತನಿಖೆ ವೇಳೆ ಬಯಲಾಗಿತ್ತು. ಹೆಡ್ ಕಾನ್ಸಟೇಬಲ್ ಮಹಬೂಬ್ ಪಾಷ ಮತ್ತು ಪ್ರಮುಖ ಆರೋಪಿ ಆರೀಫ್ ಆತ್ಮೀಯ ಗೆಳೆಯರಾಗಿದ್ದು. ಆ ಸಲುಗೆಯಿಂದಲೇ ದರೋಡೆ ಮಾಡುವ ಪ್ಲಾನ್ ಮಾಡಲಾಗಿತ್ತು. ಆರೋಪಿಗಳನ್ನು ಬಂಧಿಸಿದಾಗ ಹೆಡ್ ಕಾನ್ಸಟೇಬಲ್ ಪಾತ್ರ ಇರೋದು ಬಯಲಿಗೆ ಬಂದಿದೆ. ದರೋಡೆ ಹಣದಲ್ಲಿ ಹೆಡ್ ಕಾನ್ಸಟೇಬಲ್ ಮೆಹಬೂಬ್ ಒಂಭತ್ತು ಲಕ್ಷ ಹಣವನ್ನು ಪಡೆದಿದ್ದಾರೆ. ಸದ್ಯ15 ಲಕ್ಷ 91ಸಾವಿರ ನಗದು, 116 ಗ್ರಾಂ ರಿಕವರಿ ಮಾಡಲಾಗಿದೆ.
ಪ್ರಮುಖ ಆರೋಪಿ ಆರೀಫ್ ಮತ್ತು ಹೆಡ್ ಕಾನ್ಸಟೇಬಲ್ ಮೆಹಬೂಬ್ ಸೇರಿ ಏಳು ಜನರ ಖದೀಮರು ಅರೆಸ್ಟ್ ಮಾಡಿದ್ದಾರೆ. ಆರೀಪ್ ಈ ಮೊದಲು ಹೋಮ್ ಗಾರ್ಡ್ ಕೆಲಸ ಮಾಡ್ತಿರುತ್ತಾರೆ, ಹೀಗಾಗಿ ಇಬ್ಬರ ಮಧ್ಯೆ ಗೆಳೆತನ ಇದ್ದು. ಹೆಡ್ ಕಾನ್ಸಟೇಬಲ್ ಮೆಹಬೂಬ್ ಪಾಷ ಅಮಾನತ್ತು ಮಾಡಿದ್ದಷ್ಟೇ ಅಲ್ಲದೇ ಎಲ್ಲಾ ಏಳು ಜನ ಡಕಾಯಿತರನ್ನು ಬಂಧಿಸಲಾಗಿದೆ.