ಸುವರ್ಣವಾಹಿನಿ ಸುದ್ದಿ
ಕುರುಗೋಡು,ಜ,೧೭: ಕೆರೆ ಪರಂಬೊಕು ಎಂಬ ಪದವನ್ನು ತೆಗೆದು ಸರ್ಕಾರ ಎಂದು ತಿದ್ದುಪಡಿ ಮಾಡಲು ಹಾಗೂ ಸಾಗುವಳಿ ಚೀಟಿ ನೀಡಲು ಒತ್ತಾಯಿಸಿ ಕುರುಗೋಡು ತಹಶೀಲ್ದಾರರ ಕಚೇರಿ ಆವರಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುವ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ೫೬ ನೇ ದಿನಕ್ಕೆ ಕಾಲಿಟ್ಟಿದೆ.
ಸರ್ಕಾರಗಳ ನೀತಿಗಳು ಬಡವರು, ದಲಿತರಿಗೆ ಭೂಮಿಯನ್ನು ಕೊಡಲು ಕರ್ನಾಟಕ ಭೂಸುಧಾರಣಾ ಕಾಯ್ದೆಯ ಆಶೆಯಕ್ಕೆ ವಿರುದ್ಧವಾಗಿ ಭೂಮಿಯನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಪಿತೂರಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ಉಳುವವನೇ ಭೂಮಿಯ ಒಡೆಯನನ್ನಾಗಿಸುವುದರ ಬದಲಾಗಿ ರೈತರನ್ನು ಮರೆತು ಉಳ್ಳುವರಿಗೆ ಭೂಮಿ ನೀಡಲು ಸರ್ಕಾರದ ಕಾನೂನುಗಳನ್ನೇ ಬದಲಾಯಿಸುವ ಸರ್ಕಾರಗಳು ಬಡವರಿಗೆ ಭೂಮಿನೀಡಲು ಕಾನೂನನ್ನು ಯಾಕೆ ಬದಲಾಯಿಸಲು ಸಾಧ್ಯವಿಲ್ಲ ಎಂದು ರೈತರು ಕೇಳುತ್ತಿದ್ದಾರೆ.
ಕುರುಗೋಡು ಗ್ರಾಮದ ಮೂರು ತಲೆಮಾರುಗಳಿಂದ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಧಿಕಾರಿಗಳು ಪಹಣಿಯಲ್ಲಿ ಸರ್ಕಾರ ಎಂದು ನಮೋದಾಗಿದ್ದರೂ ಕೂಡ ಅಧಿಕಾರಿಗಳು ಸರ್ಕಾರವನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಮತ್ತು ರೈತರಿಗೆ ಇದು ಮಲ್ಲಪ್ಪನ ಕೆರೆ ಭೂಮಿ ಎಂದು ನಂಬಿಸಿ ತಾವು ಭೂಮಿಯಿಂದ ಹೊರಗೆ ಓಗಬೇಕು ಇಲ್ಲವಾದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್ ನೀಡಿ ರೈತರನ್ನು ಬೆದರಿಸಿ ಭೂಮಿಯಿಂದ ವಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಆದ ಕಾರಣ ಸರ್ಕಾರವನ್ನು ತಪ್ಪು ದಾರಿಗೆ ಎಳೆದಿರುವ ಮತ್ತು ರೈತರಿಗೆ ತಪ್ಪು ಸಂದೇಶದ ಮೂಲಕ ಬೆದರಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ವಿಚಾರಣೆಗೊಳಪಡಿಸಿ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಬೇಕೆAದು ಕರ್ನಾಟಕ ಪ್ರಾಂತ ರೈತ ಸಂಘ ಕುರುಗೋಡು ತಾಲೂಕು ಸಮಿತಿ ವಿನಂತಿಸುತ್ತದೆ. ಸಮಸ್ಯೆ ಪರಿಹಾರವಾಗುವವರೆಗೂ ಧರಣಿಯನ್ನು ಮುಂದುವರೆಸುವುದಾಗಿ ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.