ಬಳ್ಳಾರಿ.ಮಾ. 4: ಜಿಲ್ಲಾ ಕುರುಬರ ಸಂಘ (ರಿ)ದ ಈ ಹಿಂದಿನ ಅಧ್ಯಕ್ಷರು ಕಾನೂನು ಬಾಹಿರವಾಗಿ ತಮ್ಮ ಆಧಿಕಾರ ಅವಧಿಯನ್ನು ಇನ್ನೂ 3 ವರ್ಷಗಳ ವರೆಗೆ ವಿಸ್ತರಿಸಿಕೊಂಡಿದ್ದು ಕಾನೂನು ಬಾಹಿರ ಕೃತ್ಯವನ್ನು ಪರಿಗಣನೆಗೆ ತೆಗೆದುಕೊಂಡು ಕರ್ನಾಟಕ ಸರ್ಕಾರವು ನಮ್ಮ ಸಂಘಕ್ಕೆ ಆಡಳಿತಾಧಿಕಾರಿಯನ್ನುನೇಮಕ ಮಾಡಿದ್ದು, ಸದರಿ ಆಡಳಿತಾಧಿಕಾರಿಗಳು ಕರ್ನಾಟಕ ಸಂಘಗಳ ಅಧಿನಯಮ-1960 ರ ಅಡಿಯಲ್ಲಿ ಚುನಾವಣ ಅಧೀಕಾರಿಯನ್ನು ನೇಮಕ ಮಾಡಿ ಸದರಿ ಕಾನೂನಿನ ನಿಯಮಗಳ ಅನುಸಾರ ಸಂಘದ ಅಜೀವ ಸದಸ್ಯರ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ,
ನಮ್ಮ ಸಂಘಕ್ಕೆ ಚುನಾವಣೆಯನ್ನು ಘೋಷಣೆ ಮಾಡಿ, ಚುನಾವಣಾ ವೇಳಾ ಪಟ್ಟಿಯನ್ನು (Calendar of Events) ತಯಾರಿಸಿ ನಮ್ಮ ಸಂಘದ ನಿದೇರ್ಶಕರ ಸ್ಥಾನಕ್ಕಾಗಿ 2023 ರ
ಅಕ್ಟೋಬರ್-ನವೆಂಬರ್ ಮಾಹೆಯಲ್ಲಿ ಚುನಾವಣೆಯನ್ನು ನಡೆಸಿದ್ದು, ಸದರಿ ಚುನಾವಣೆಯಲ್ಲಿ ಚುನಾಯಿತರಾದಂತಹ ನಿದೇರ್ಶಕರಲ್ಲಿ. ಸಂಘದ ಪಧಾದಿಕಾರಿಗಳ ಸ್ಥಾನಕ್ಕಾಗಿ ಮತ್ತೊಮ್ಮೆ ಚುನಾವಣೆಯನ್ನು ನಡೆಸಿದ್ದು, ಸದರಿ
ಚುನಾವಣೆಯಲ್ಲಿ ಪಿ.ಎಲ್ ಗಾದಿಲಿಂಗನಗೌಡ ಅಧ್ಯಕ್ಷರಾಗಿ, ಕೆ.ನಾಗರಾಜ ಉಪಾಧ್ಯಕ್ಷರಾಗಿ, ಕೆ.ಮೋಹನ್. ಮಹಾಪ್ರಧಾನ ಕಾರ್ಯದರ್ಶಿಗಳಾಗಿ ಮತ್ತಿತರು ಇನ್ನಿತರ ಸ್ಥಾನಗಳಿಗೆ ಪಧಾಧಿಕಾರಿಗಳಾಗಿ ಆಯ್ಕೆಯಾಗಿದ್ದು,
ಸದರಿ ಪಧಾಧಿಕಾರಿಗಳ ಕಾರ್ಯಾವಧಿ 2026 ರ ನವೆಂಬರ್ ವರೆಗೆ ಇರುತ್ತದೆ, ಆದರೆ ಮಾಜಿ ಅಧ್ಯಕ್ಷರು ಮತ್ತು ಇತರ ಸಮಾಜದ ಮುಖಂಡರು ಸೇರಿಕೊಂಡು ಈಗಲೂ ನಾನೇ ಅಧ್ಯಕ್ಷ ನಾವೇ ಪದಾಧಿಕಾರಿಗಳೆಂದು ಹೇಳಿಕೊಂಡು ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ ಇವರ ವಿರುದ್ಧ ಶೀಘ್ರದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಘದ ಹಾಲಿ ಅಧ್ಯಕ್ಷ ಗಾದಿಲಿಂಗನಗೌಡ ತಿಳಿಸಿದ್ದಾರೆ.
ಅವರು ಇಂದು ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ನಮ್ಮ ಸಂಘದ ಚುನಾವಣೆಯಲ್ಲಿ ಪರಾಜಿತರಾದಂತಹ ಅಭ್ಯರ್ಥಿಗಳು ಸಂಘದ ಹೆಸರನ್ನು ಹೇಳಿಕೊಂಡು ರಾಜಕೀಯ ಪಕ್ಷಗಳಲ್ಲಿ ಮತ್ತು ರಾಜಕೀಯ ಮುಖಂಡರಿಂದ ಹಲವಾರು ಸವಲತ್ತಗಳನ್ನು ಪಡೆದಿರುವ ಕೆ.ಮಹಾಲಿಂಗನಗೌಡ, ಎಸ್.ಸಿದ್ದನಗೌಡ, ಕೆರಕೋಡಪ್ಪ ಮತ್ತಿತರು. ಪ್ರಸ್ತುತ ಸಂಘದ ಅಧ್ಯಕ್ಷರಾದ ಪಿ.ಎಲ್ ಗಾದಿಲಿಂಗನಗೌಡರು ಹಾಗೂ ಸಂಘದ ಮಹಾ
ಪ್ರಧಾನ ಕಾರ್ಯದರ್ಶಿಗಳಾದ ಕೆ.ಮೋಹನ್ ಮತ್ತು ಇತರೆ ಪದಾಧಿಕಾರಿಗಳು ಹಾಗೂ ನಿರ್ದೇಶಕರು ನೊಳಗೊಂಡು
ಸಂಘವನ್ನು ಅಭಿವೃದ್ಧಿ ಮಾಡುತ್ತಿರುವುದನ್ನು ತಾಳಲಾರದೇ ಹೊಟ್ಟೆ ಕಿಚ್ಚುನಿಂದ ರೂಪ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಕುರುಬ ಸಮಾಜದಲ್ಲಿ ಆಶಾಂತಿಯನ್ನು ಉಂಟು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ.
ಈಗ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳು ಘೋಷಣೆಯಾಗಲಿದ್ದು ಸದರಿ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಹಾಗೂ ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಮುಖಂಡರಿಂದ ಹಣವನ್ನು ಕೊಳ್ಳೆ-ಹೊಡೆಯಲು ಸಂಚು ರೂಪಿಸುತ್ತಿದ್ದಾರೆ. ಹೀಗೆ ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಸಮಜದ ಕಾನೂನು
ಸಲಹೆಗಾರರೊಂದಿಗೆ ಚರ್ಚಿಸಿ ಮಾಜಿ ಅಧ್ಯಕ್ಷರು ನಡೆಸಿರುವ ಅಕ್ರಮದ ದಾಖಲೆಗಳನ್ನು ಸಂಗ್ರಹಿಸಿ ಅವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಅತಿ ಶೀಘ್ರದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಗಾದಿಲಿಂಗನಗೌಡ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ದಾರದಮಿಲ್ ಮೋಹನ್ ಮತ್ತು ಖಜಾಂಚಿ ಇದ್ದರು.