ಬಳ್ಳಾರಿ: ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು, ಯಾವುದೇ ಕಾರಣಕ್ಕೂ ಕಳಪೆಯಾಗಿರುವುದು ಕಂಡು ಬಂದರೆ, ದೂರುಗಳು ಬಂದಲ್ಲಿ ಸುಮ್ಮನಿರೋಲ್ಲ
ಎಂದು ಸoಸದ ಕರಡಿ ಸಂಗಣ್ಣ ಅವರು ಎಚ್ಚರಿಸಿದರು.
ಸಿರುಗುಪ್ಪ ಸಮೀಪದ ಬೂದಿಹಾಳ ಕ್ಯಾಂಪ್ ಬಳಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಹಾಗೂ ಸೇತುವೆ ನರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಾಮಗಾರಿ ನಿಗಧಿತ ಅವಧಿಯಲ್ಲೇ ಪರ್ಣಗೊಳಿಸಬೇಕು, ನಾನಾ ನೆಪ ಹೇಳುವಂತಿಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು. ಅವಧಿಯಲ್ಲಿ ನನ್ನ ಕ್ಷೇತ್ರದ ಜನರಿಗೆ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸುವೆ, ಅವಧಿಯಲ್ಲಿ ಕೋಟ್ಯಂತರ ರೂ.ಅನುದಾನ ಕ್ಷೇತ್ರಕ್ಕೆ ಹರಿದು ಬಂದಿದ್ದು, ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ನನ್ನ ಕ್ಷೇತ್ರದ ಜನರೇ ನನ್ನ ಉಸಿರು, ಅವರ ಸೇವೆಯೇ ನನ್ನ ಸೌಭಾಗ್ಯ, ಪುಣ್ಯ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವ್ಯಕ್ತಿಯಲ್ಲ, ಅವರೊಬ್ಬ ದೇಶದ ಶಕ್ತಿ, ಇಲ್ಲಿವರೆಗೆ ಅವರು ದೇಶದ ಅಭವೃದ್ಧಿಗಾಗಿ ಬಿಡುವಿಲ್ಲದೆ ಹಗಲಿರುಳು ಶ್ರಮಿಸಿದ್ದಾರೆ, ಇಲ್ಲಿವರೆಗೂ ಅವರ ಮೇಲೆ ಸಣ್ಣ ಆರೋಪವೂ ಇಲ್ಲದೇ ಮಾದರಿ ಕೆಲಸ ನರ್ವಹಿಸಿ ಇಡೀ ವಿಶ್ವಾಸಕ್ಕೆ ಮಾದರಿಯಾಗಿದ್ದಾರೆ. ಇಂತವರು ನಮ್ಮ ದೇಶದ ಪ್ರಧಾನ ಮಂತ್ರಿಯಾಗುವುದು ನಮ್ಮ ಬಹುದೊಡ್ಡ ಪುಣ್ಯ, ಮೋದಿ ಅವರು, ದೇಶದ ಅಭಿವೃದ್ಧಿಗಾಗಿ ಕೈಗೊಂಡ ಕ್ರಮಗಳನ್ನು ಇಡೀ ವಿಶ್ವವೇ ಕೊಂದಾಡುತ್ತಿದೆ. ಎಲ್ಲ ರ್ಗದವರಿಗೂ ಕನಿಷ್ಟ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಮಾದರಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದ್ದಾರೆ ಎಂದರು.
ಈ ಸಂರ್ಭದಲ್ಲಿ ಕನಕಗಿರಿಯ ಮಾಜಿ ಶಾಸಕ ಬಸವರಾಜ್ ಧಡೆಸ್ಗೂರ್, ಹಿರಿಯ ಮುಖಂಡರಾದ ಕೆ.ಕರಿಯಪ್ಪ, ಮಸ್ಕಿ, ಸಿರುಗುಪ್ಪ, ಸಿಂಧನೂರು ಕ್ಷೇತ್ರದ ಮುಖಂಡರು, ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.