ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೦೨: ಕೈಮಗ್ಗ ಜವಳಿ ಮಂತ್ರಾಲಯ ಭಾರತ ಸರ್ಕಾರ ನವದೆಹಲಿ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ( ನಿ )ಕಾವೇರಿ ಹ್ಯಾಂಡ್ ಲೂಮ್ಸ್ ಬೆಂಗಳೂರು ಕೈಮಗ್ಗ ಜವಳಿ ಇಲಾಖೆ ಜಿಲ್ಲಾ ಪಂಚಾಯತ್ ಬಳ್ಳಾರಿ,ಇವರ ಸಂಯುಕ್ತ ಆಶ್ರಯದಲ್ಲಿ ಹೊಸ ವರ್ಷದ ಮತ್ತು ಮಕರ ಸಂಕ್ರಾAತಿ ಹಬ್ಬದ ಪ್ರಯುಕ್ತ, ಮಂಗಳವಾರ ರಿಂದ ದಿನಾಂಕ ೧೫ ರವರಿಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಜ್ಯೋತಿ ಬೆಳಗಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ರಾಜ್ಯಮಟ್ಟದ ಹತ್ ಖರ್ಗ ವಿಶೇಷ ಕೈಮಗ್ಗ ಮೇಳ ವಸ್ತ್ರ ಸಿರಿ -೨೦೨೪ ಕಾರ್ಯಕ್ರಮದ ಅಡಿಯಲ್ಲಿ ಕೈಮಗ್ಗ ಉತ್ಪಾದನೆಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮದಲ್ಲಿ ಸಚಿವರು ಮತ್ತು ಶಾಸಕರು ಸೇರಿದಂತೆ ಹಾಗೂ ಜಿಲ್ಲಾ ಜನಪ್ರತಿನಿಧಿಗಳು ಗೈರಾಜರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಶಾಸಕರಿಗೆ ಆಹ್ವಾನಿಸುವವರಲ್ಲಿ ಮನವರಿಕೆ ಮಾಡುವುದರಲ್ಲಿ ಕೈ ಮಗ್ಗ ಅಧಿಕಾರಿಗಳು ವಿಫಲರಾದರೆ? ಅಹ್ವಾನ ಪತ್ರಿಕೆಯಲ್ಲಿ, ೨ ಸಚಿವರು ಸೇರಿದಂತೆ ೨೫ ಜನ ಗಣ್ಯರ ಹೆಸರುಗಳಿದ್ದು ಕೇವಲ ಎಂಟು ಜನ ಮಾತ್ರ ಹಾಜರಾಗಿದ್ದರು, ಇದರಿಂದ ಹಲವಾರು ಜಿಲ್ಲೆಗಳಿಂದ ಮಾರಾಟಕ್ಕಾಗಿ ಬಂದ ಮಳಿಗೆಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ, ದೇಶದಲ್ಲೇ ರಾಜ್ಯಮಟ್ಟದ ಮೊದಲನೇ ಕಾರ್ಯಕ್ರಮ ಯಶಸ್ವಿ ಗೊಳಿಸುವುದರಲ್ಲಿ, ಕೈಮಗ್ಗ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಕಾರಣ ಆಗಿರಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ೫೨,೦೦೦ ಕೈ ಮಗಳ ನೇಕಾರರ,ಇದ್ದು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಮಾರಾಟ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಮಾರಾಟಗಾರರಿಗೆ ನೀಡಿದ್ದು. ಬಳ್ಳಾರಿಯಲ್ಲಿ ಮೊದಲನೇ ದಿನವೇ ಯಾವ ರೀತಿ ಸ್ಪಂದನೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಕೈ ಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷö್ಯದ ಕಾರಣದಿಂದ, ಮುಂದಿನ ದಿನಗಳಲ್ಲಾದರೂ ನನ್ನ ಕೈಮಗ್ಗ ನನ್ನ ಹೆಮ್ಮೆಯ ಕಾರ್ಯಕ್ರಮ ಯಶಸ್ವಿ ಕಾಣಬಹುದೇ ಎಂದು ಮಾರಾಟಗಾರರು ಆಶಯ ಇಟ್ಟುಕೊಂಡಿದ್ದಾರೆ.