ಬೆಂಗಳೂರು, ಮಾರ್ಚ್ 16: 2024ರ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ ಹಿನ್ನೆಲೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ಮಾಡಿದ್ದು, ಕರ್ನಾಟಕದಲ್ಲಿ ಒಟ್ಟು 5,42,8,088 ಮತದಾರರು ಇದ್ದಾರೆ. 2,71,21,407 ಪುರುಷ ಮತದಾರರು, 2,70,81,748 ಮಹಿಳಾ ಮತದಾರರು ಕರ್ನಾಟಕದಲ್ಲಿ 4,933 ತೃತೀಯ ಲಿಂಗ ಮತದಾರರಿದ್ದಾರೆ. ರಾಜ್ಯದಲ್ಲಿ 18-19 ವರ್ಷದೊಳಗಿನ 11,24,622 ಯುವ ಮತದಾರರಿದ್ದಾರೆ. ರಾಜ್ಯದಲ್ಲಿ 5 ಎಸ್ಸಿ ಮೀಸಲು ಕ್ಷೇತ್ರ, 2 ಎಸ್ಟಿ ಮೀಸಲು ಕ್ಷೇತ್ರಗಳಿವೆ. ಮೂರನೇ ಹಂತದ ಚುನಾವಣೆಯಲ್ಲಿ ಸುರಪುರ ಕ್ಷೇತ್ರದ ಬೈ ಎಲೆಕ್ಷನ್ ನಡೆಯಲ್ಲಿದೆ ಎಂದು ಮಾಹಿತಿ ನೀಡಿದರು.
- ಕರ್ನಾಟಕದಲ್ಲಿ 85 ವರ್ಷ ಮೇಲ್ಪಟ್ಟ 5,70,168 ಮತದಾರರಿದ್ದಾರೆ
- ದಿವ್ಯಾಂಗ ಮತದಾರರು-6,12,154, ಬುಡಕಟ್ಟು ಮತದಾರರು-38,794
- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 31,74,098 ಮತದಾರು.
- ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 15,72,958 ಮತದಾರರು.
- ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 7,33,313 ಮತದಾರರು.
- ಚಿಕ್ಕಮಗಳೂರಿನ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 1,68,084 ಮತದಾರರು.
- ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಒಟ್ಟು ಮತಗಟ್ಟೆಗಳ ಸಂಖ್ಯೆ-58,834
- ಕರ್ನಾಟಕದಲ್ಲಿ ನಗರ ಪ್ರದೇಶಗಳಲ್ಲಿರುವ ಮತಗಟ್ಟೆಗಳ ಸಂಖ್ಯೆ -21,595
- ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಮತಗಟ್ಟೆಗಳ ಸಂಖ್ಯೆ-37,239
ನಮ್ಮ ರಾಜ್ಯದ ಸುತ್ತ ಆರು ರಾಜ್ಯಗಳ ಗಡಿ ಇದೆ. ಹಾಗಾಗಿ ಚೆಕ್ ಪೋಸ್ಟ್ಗಳನ್ನ ರಚಿಸಲಾಗಿದೆ. 29 ಜಿಲ್ಲೆಗಳ ಜೊತೆ ಬಾರ್ಡರ್ ಬರಲಿದೆ. ಎಲ್ಲಾ ಕಡೆ ಚೆಕ್ ಪಾಯಿಂಟ್ ಹಾಕಿದ್ದೇವೆ. ಕಳೆದ ಆರು ತಿಂಗಳಿಂದ ವಿಜಿಲೆನ್ಸ್ ಸ್ಟಾರ್ಟ್ ಮಾಡಿದ್ದೇವೆ.
532 ಕೋಟಿ ರೂ. ಹಣವನ್ನ ಸೀಜ್ ಮಾಡಲಾಗಿದೆ. ಆಗಸ್ಟ್ನಿಂದ ಮಾರ್ಚ್ವರೆಗೆ ಸೀಜ್ ಮಾಡಲಾಗಿದೆ. 42 ಕೋಟಿ ರೂ. ಲಿಕ್ಕರ್, 26 ಕೋಟಿ ರೂ. ಮೌಲ್ಯದ ಡ್ರಗ್ಸ್, 71 ಕೋಟಿ ರೂ. ಮೌಲ್ಯದ ಗೋಲ್ಡ್ ಸೀಜ್ ಮಾಡಿದ್ದೇವೆ. ಇಲ್ಲಿಯವರೆಗೆ 531 ಕೋಟಿ ರೂ. ಸೀಜ್ ಮಾಡಿದ್ದೇವೆ ಎಂದರು.
ಅವ್ಯವಹಾರ ನಡೆಯುತ್ತಿದ್ದರೆ ಗಮನಕ್ಕೆ ತರಬಹುದು. ಸುವಿದಾ ಆ್ಯಪ್ ಕ್ಯಾಂಡಿಡೇಟ್ಸ್ಗೆ ನೀಡಲಾಗಿದೆ. ಅವರಿಗೆ ಯಾವುದಕ್ಕೆ ಅನುಮತಿ ಬೇಕು, ಅದಕ್ಕೆ ನಾವು ಅನುಮತಿ ಕೊಡುತ್ತೇವೆ. ರ್ಯಾಲಿ, ಲ್ಯಾಂಡಿಂಗ್, ವೆಹಿಕಲ್ಗೆ ಅನುಮತಿ ಪಡೆಯಬೇಕು. ಸುವಿದಾ ಆ್ಯಪ್ ಮೂಲಕವೇ ಅರ್ಜಿ ಹಾಕಬೇಕು. ಇದು ಪಕ್ಷ, ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.
ಇವಿಎಂ, ವಿವಿಪ್ಯಾಟ್ ಬಗ್ಗೆ ಎರಡು ದೂರಗಳನ್ನ ಸುಪ್ರೀಂ ವಜಾಗೊಳಿಸಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಇವಿಎಂ, ವಿವಿಪ್ಯಾಟ್ಗಳ ಬಗ್ಗೆ ಡೌಟ್ ಬೇಡ. ಎಲ್ಲಾ ಬೂತ್ಗಳಲ್ಲಿ ವಿವಿಪ್ಯಾಟ್ ಇರಲಿದೆ ಎಂದರು. ಹಣ ವ್ಯವಹಾರ ಮಾಡುತ್ತಾರೆ. ಕಿಂಗ್ ಪಿನ್ ಯಾರು ಅದರ ಮೇಲೆ ನಿಗಾ ಇರಿಸಿದ್ದೇವೆ. ಇಂದಿನಿಂದ ಬಾರ್ಡರ್ಗಳಲ್ಲಿ ನಿಗಾ ವಹಿಸುತ್ತೇವೆ. ಅಭ್ಯರ್ಥಿಗಳ ಹಣದ ಖರ್ಚು ವೆಚ್ಚ ಅರಿಯುತ್ತೇವೆ. ಸಾಗರೋತ್ತರ ಮತದಾರರು ತಮ್ಮ ಮತ ಇರುವಲ್ಲೇ ಮತ ಹಾಕಬೇಕು ಎಂದರು.
1808 ಥೀಮ್ ಬೇಸ್ಡ್ ಮತಗಟ್ಟೆ
ಈ ವರ್ಷವೂ ಯೂಥ್ಸ್ ಮತ್ತು ಮಹಿಳಾ ಮತಗಟ್ಟೆ ಇರಲಿದೆ. 1808 ಥೀಮ್ ಬೇಸ್ಡ್ ಮತಗಟ್ಟೆ ಇರಲಿದೆ. ಜನವರಿಯಿಂದ 13982 ದೂರು ನಮಗೆ ಬಂದಿದ್ದು, ಪರಿಹರಿಸುವ ಕೆಲಸ ಮಾಡಿದ್ದೇವೆ. ಮಾಡಲ್ ಪೂಲಿಂಗ್ ಸ್ಟೇಷನ್ ಮಾಡುತ್ತೇವೆ. 1120 ಸಖಿ ಬೂತ್ಗಳು ಮತ್ತು ಟ್ರೈಬ್ಸ್ಗಾಗಿ ಪ್ರತ್ಯೇಕ ಬೂತ್ ರಚನೆ ಮಾಡುತ್ತೇವೆ ಎಂದಿದ್ದಾರೆ.
ಮತದಾನ ಮಾಡುವಂತೆ ಜನತೆಗ ಮನವಿ ಮಾಡಿದ ಮನೋಜ್ ಕುಮಾರ್ ಮೀನಾ
ನಾಮಿನೇಷನ್ ಕೊನೆಯ 10 ದಿನದವರೆಗೆ ಹೆಸರು ಸೇರಿಸಬಹುದು. ಮತದಾರರ ಹೆಸರಲ್ಲಿ ಇಲ್ಲದಿದ್ದರೆ ಮಾರ್ಚ್ ಒಳಗೆ 18 ವರ್ಷ ಆಗುತ್ತೆ ಎನ್ನುವುದಾರೆ ಫಾರಂ 8 ರಲ್ಲಿ ತಮ್ಮ ಹೆಸರನ್ನ ಮತದಾರರ ಪಟ್ಟಿಗೆ ಸೇರಿಸಬಹುದು ಎಂದಿದ್ದಾರೆ. ಕಳೆದ ಬಾರಿ ಕೆಲಕಡೆ ಮತ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ವೋಟು ಹೆಚ್ಚಳಕ್ಕೆ ವಿಶೇಷ ಪ್ರಯತ್ನ ಮಾಡುತ್ತೇವೆ. ಏಪ್ರಿಲ್ 26 ಮತ್ತು ಮೇ 7 ರಂದು ಹೆಚ್ಚಿನ ಮತದಾನ ಮಾಡಿ ನಮ್ಮ ರಾಜ್ಯಕ್ಕೆ ಗೌರವ ತಂದು ಕೊಡಿ ಎಂದು ರಾಜ್ಯದ ಜನರಿಗೆ ಮನೋಜ್ ಕುಮಾರ್ ಮೀನಾ ಮನವಿ ಮಾಡಿದ್ದಾರೆ.