ಬಳ್ಳಾರಿ,ಏ.10: ಕೃಷಿ ಹೊಂಡದಲ್ಲಿ ಈಜಾಡಲು ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ತಾಲೂಕಿನ ಶಿಡಿಗಿನಮೋಳ ಗ್ರಾಮದಲ್ಲಿ ನಡೆದಿದೆ.
ಮಸ್ತಾನ ಪುತ್ರ ರಾಜೇಶ್ (13) ದ್ಯಾವಮ್ಮ ಮಗನಾದ ಶಂಕರ್(13) ಎoಬುವರು ಒಂದೆ ಕುಟುಂಬದವರು ಎಂದು ತಿಳಿದಿದೆ. ಇಬ್ಬರೂ 5ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗುತ್ತದೆ.
ಶಾಲೆಗಳಿಗೆ ಬೆಸಿಗೆ ರಾಜೆ ಇರುವುದರಿಂದ ಸುಮಾರು ೯ ಗಂಟೆಗೆ ಸಮಯದಲ್ಲಿ ಕ್ರಿಕೆಟ್ ಆಟ ಆಡಲೂ ಹೋಗಿದರೆ ಬಿಸಿಲಿನ ತಾಪಕ್ಕೆ ಅಲ್ಲೆ ಪಕ್ಕದಲ್ಲಿರುವ ಶ್ರೀನಿವಾಸರೆಡ್ಡಿಯವರ ಕೃಷಿ ಹೊಂಡ ನೀರಿನಲ್ಲಿ ಈಜಾಡಲು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಊರಿನ ಅವರ ಸಹಾಯದಿಂದ.ಕೃಪಿ ಹೊಂಡದಲ್ಲಿ ಮೃತ ಬಾಲಕರ ಶವಗಳನ್ನು ಹೊರತೆಗೆದರು. ಮೃತಪಟ್ಟವರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ಜನರೂ ಮಕ್ಕಳ ಮೃತದೇಹಗಳನ್ನು ನೋಡಿ, ದುಃಖದಲ್ಲಿ ಮುಳುಗಿದ್ದರು.
ಇಡೀ ಶಿಡಿನಮೋಳ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ್, ಸಿಪಿಐ ಎಲ್.ರುದ್ರಪ್ಪ, ಪಿಎಸ್ಐ ನಾಗಭೂಷಣ . (ಕ್ರೈಂ ) ಪಿಎಸ್ಐ ಪರಮೆಶ್ವರಪ್ಪ, ಪ್ರಭಾಕರ್ ರೆಡ್ಡಿ, ಹನುಮೇಶ್, ಕುಮಾರಸ್ವಾಮಿ, ಅಗ್ನಿಶಾಮಕದಳದ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಘಟನೆ ಪಿಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.