ಕನಕಗಿರಿ,ಸೆ.14 : ಕನಕಗಿರಿ ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದ ಮುಂಭಾಗದಲ್ಲಿ ಇರುವ ಸರಸ್ವತಿ ದೇವಿಗೆ ಹಾಗೂ ವಿಘ್ನ ವಿನಾಯಕನಿಗೆ ಪೂಜೆ ಇಲ್ಲದಂತಹಾಗಿದೆ.
ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರ ಕೃಷ್ಣ ದೇವರಾ ಕಾಲದಲ್ಲಿ ನಿರ್ಮಾಣದಗೂಂಡ ದೇವಸ್ಥಾನಗಳು, ಸರಸ್ವತಿ ದೇವಿ, ಮತ್ತು ವಿಘ್ನ ವಿನಾಯಕ ದಿನನಿತ್ಯ ಪೂಜೆ ಮಾಡಬೇಕೆಂಬ ಆದೇಶ ಇದ್ದರು, ಅರ್ಚಕರು.. ಹಬ್ಬಗಳಾದ ದಸಾರ,ದೀಪವಾಳಿ,ಯುಗಾದಿ. ಶ್ರಾವಣ ಮಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಚರಣೆ ಮಾಡುವಾಗ ಮಾತ್ರ ಪೂಜೆ ಸಲ್ಲಿಸುವುದು, ಬಿಡುವಿನ ದಿನದಲ್ಲಿ ದೇವಿಗೆ ಪೂಜೆ ಅಲಂಕಾರ ಇಲ್ಲದೇ ಭಕ್ತಾಧಿಗಳು ಆಕ್ರೋಶ ವ್ಯಕ್ತಪಡಸಿದ್ದಾರೆ.
ಈ ಕುರಿತ ದೇವಸ್ಥಾದ ವ್ಯವಸ್ಥಾಪಕ ಸಿದ್ದಲಿಂಗಯ್ಯ ಸ್ವಾಮಿ ಮಾತನಾಡಿ ದೇವಸ್ಥಾನ ಒಳಾಂಗಣದಲ್ಲಿ ಇರುವ ಮೂರ್ತಿಗಳಿಗೆ ನಿತ್ಯ ಪೂಜೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಮಾಡುತ್ತೇವೆ, ಗಣೇಶ ಮೂತಿಗೆ ಮತ್ತು ಸರಸ್ವತಿ ಮೂರ್ತಿ ಆದಷ್ಟು ಬೇಗನೆ ನಾಮಫಲಕ ವ್ಯವಸ್ಥೆ ಮತ್ತು ದೇವಿ ವಾರದ ದಿನ ಮತ್ತು ಗಣೇಶ ವಾರದ ದಿನ ಇನ್ನೂ ನಿತ್ಯ ಪೂಜೆ ಸಲ್ಲಿಸುತ್ತೆವೆ ಎಂದು ಹೇಳಿದರು.