ಬಳ್ಳಾರಿ,ಏ.9: ಭಾರತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಕೆಆರ್ಎಸ್ ಪಕ್ಷ ಇದೇ ಮೊದಲ ಬಾರಿಗೆ `ಭೀಮೋತ್ಸವ’ ಹೆಸರಿನಲ್ಲಿ ಆಚರಿಸುತ್ತಿದ್ದು, ಏಪ್ರಿಲ್
14ರಂದು ಬೆಳಿಗ್ಗೆ 10.30ಕ್ಕೆ ಬಳ್ಳಾರಿ ನಗರದ ರಾಘವ ಕಲಾಮಂದಿರದಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಪಕ್ಷದ ಎಸ್.ಸಿ., ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಪ.ಯ. ಗಣೇಶ್
ಮಾಹಿತಿ ನೀಡಿದರು. ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ
ಅವರು ಮಾತನಾಡಿ, “ಅಂಬೇಡ್ಕರ್ ಅವರ ಆದರ್ಶಗಳನ್ನು ಕೇವಲ ಭಾಷಣಗಳಲ್ಲಿ ಸೀಮಿತಗೊಳಿಸದೇ,
ಅನುಸರಿಸಿ ಬದುಕುವ ಮೂಲಕ ನಿಜವಾದ ಗೌರವವನ್ನೆ ಸಲ್ಲಿಸಬಹುದು. ಕೆಆರ್ಎಸ್ ಪಕ್ಷ ಕಳೆದ ಐದೂವರೆ ವರ್ಷಗಳಿಂದ ಸಂವಿಧಾನ ಮತ್ತು ಕಾನೂನುಗಳ ಪರಿಪೂರ್ಣ ಅನುಷ್ಠಾನಕ್ಕಾಗಿ ಹೋರಾಟ ನಡೆಸುತ್ತಿದೆ.
ಜನಪರ, ಪ್ರಾಮಾಣಿಕ ಮತ್ತು ಸ್ವಚ್ಛ ಆಡಳಿತಕ್ಕಾಗಿ ನಮ್ಮ ಪಕ್ಷ ಬದ್ಧವಾಗಿದೆ” ಎಂದರು.
ತುಂಬಾ ಸಣ್ಣ ವಿಷಯಗಳನ್ನು ರಾಜಕೀಯವನ್ನಾಗಿ ಮಾಡಿ ಬುದ್ಧಿಜೀವಿಗಳು, ಹೋರಾಟಗಾರರು, ಪಕ್ಷಗಳು ಜನಮನವನ್ನು ವಿಭಜಿಸುತ್ತಿರುವುದನ್ನು ಅವರು ಟೀಕಿಸಿದರು. “ದೇವಸ್ಥಾನಗಳಿಗೆ ಪರಿಶಿಷ್ಟ ಜಾತಿಯವರ ಪ್ರವೇಶವನ್ನು ನಿರಾಕರಿಸುವಂಥ ಘಟನೆಗಳು ಇಂದು ಸಹ ನಡೆಯುತ್ತಿರುವುದು ದುರಂತ.
ಯಾವುದೇ ಹಳ್ಳಿಯಲ್ಲಿ ಅಸ್ಪöÈಶ್ಯತೆ ಆಚರಣೆ ನಡೆದರೆ, ಕೆಆರ್ಎಸ್ ಪಕ್ಷ ಆ ಹಳ್ಳಿಯಲ್ಲಿ ಹೋರಾಟ ಹಮ್ಮಿಕೊಳ್ಳುತ್ತದೆ. ಕರ್ನಾಟಕವನ್ನು ಅಸ್ಪöÈಶ್ಯತೆ ಮುಕ್ತ ರಾಜ್ಯವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ’’ ಎಂದು ಹೇಳಿದರು.
ಮಾತುಗಳನ್ನು ಉಲ್ಲೇಖಿಸಿದ ಅವರು, “ಬದುಕಲು ರಾಜಕೀಯಕ್ಕೆ ಬಾರದು, ಜನರ ಬದುಕು ಬದಲಾಯಿಸಲು ಬನ್ನಿ’’ ಎಂಬ ಮಾತನ್ನು ಪಕ್ಷದ ತತ್ವವನ್ನಾಗಿ ಮಾಡಿಕೊಂಡು
ನಾವು ಕೆಲಸ ಮಾಡುತ್ತಿದ್ದೇವೆ ಎಂದರು. ಸಮಾವೇಶಕ್ಕೂ ಮುನ್ನ ನೂರಾರು ಬೈಕುಗಳಲ್ಲಿ ಕೆಆರ್ಎಸ್ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ರ?ಯಾಲಿ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಸಿ., ಎಸ್.ಟಿ. ಘಟಕದ ರಾಜ್ಯ ಉಪಾಧ್ಯಕ್ಷ ಹೆಚ್.ವಿ. ಸಂತೋಷ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ಲಗುಂದಿ ಪಿ. ಪ್ರಕಾಶ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಡಾ. ಕೆ.ಎಸ್.ಮಂಜುನಾಥ್ ಉಪಸ್ಥಿತರಿದ್ದರು.