ಮಹಾಶಿವರಾತ್ರಿಯಂದು ಬಡವರಿಗೆ ವಸ್ತ್ರದಾನ ಮಾಡುವುದರಿಂದ ನಿಮ್ಮ ಜೀವನದಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಋಣ ಪರಿಹಾರ ದೊರೆಯುತ್ತದೆ. ಶಂಕರನ ಕೃಪೆಯೂ ಸಿಗುತ್ತದೆ.
ಮಹಾ ಶಿವರಾತ್ರಿ (Maha Shivratri 2024) ಹಿಂದೂಗಳಿಗೆ ವಿಶೇಷ ಹಬ್ಬ. ಈ ವರ್ಷ ಮಹಾ ಶಿವರಾತ್ರಿ ಹಬ್ಬವನ್ನು 8 ಮಾರ್ಚ್ 2024 ರಂದು ಪ್ರತಿವರ್ಷದಂತೆ ವೈಭವದಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಶಿವ ಪಾರ್ವತಿಯರ ವಿವಾಹದ ದಿನವನ್ನು ಮಹಾಶಿವರಾತ್ರಿ (Festival) ಎಂದು ಕರೆಯಲಾಗುತ್ತದೆ. ಮಹಾ ಶಿವರಾತ್ರಿಯ ದಿನ ಮಾಡುವ ಕೆಲವು ಕ್ರಮಗಳು ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ತರಬಲ್ಲದು. 2024 ರಲ್ಲಿ ಮಹಾ ಶಿವರಾತ್ರಿಯಂದು ಸರ್ವಾರ್ಥ ಸಿದ್ಧಿ ಯೋಗ ನಡೆಯುತ್ತಿದೆ. ಸರ್ವಾರ್ಥ ಸಿದ್ಧಿ ಯೋಗವು ಆರ್ಥಿಕ ಲಾಭ ಮತ್ತು ಕಾರ್ಯ ಸಾಧನೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮಾಘ ಮಾಸದ ಕೃಷ್ಣ ಪಕ್ಷ ಚತುರ್ದಶಿ ತಿಥಿಯಂದು ಬರುವ ಮಹಾ ಶಿವರಾತ್ರಿಯಂದು ನೀವು ಯಾವ ವಸ್ತುಗಳನ್ನು ದಾನ ಮಾಡಬಹುದು?- ಯಾವ ರೀತಿಯ ದಾನಕ್ಕೆ ವಿಶೇಷ ಫಲ ಸಿಗುತ್ತದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ. ಮಹಾ ಶಿವರಾತ್ರಿಯಂದು ಈ 4 ವಸ್ತುಗಳನ್ನು ದಾನ ಮಾಡಿ
ತುಪ್ಪವನ್ನು ದಾನ ಮಾಡಿ: ಮಹಾಶಿವರಾತ್ರಿಯಂದು ತುಪ್ಪದ ಅಭಿಷೇಕವು ಶಿವನನ್ನು ಮೆಚ್ಚಿಸುತ್ತದೆ. ಇದಲ್ಲದೆ ಈ ದಿನದಂದು ತುಪ್ಪವನ್ನು ದಾನ ಮಾಡುವುದರಿಂದ ಜೀವನದಲ್ಲಿನ ಸಮಸ್ಯೆಗಳನ್ನು ದೂರ ಮಾಡಬಹುದು. ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಅಥವಾ ನಕಾರಾತ್ಮಕ ಶಕ್ತಿ ಇದ್ದರೆ, ಅದನ್ನು ಸಹ ತೆಗೆದುಹಾಕಲಾಗುತ್ತದೆ.
ಹಾಲು ದಾನ ಮಹಾಶಿವರಾತ್ರಿಯ ದಿನದಂದು ಶಿವನಿಗೆ ಹಾಲಿನ ಅಭಿಷೇಕ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದರೆ ಮಹಾಶಿವರಾತ್ರಿಯ ದಿನ ಹಾಲನ್ನು ದಾನ ಮಾಡುವುದರಿಂದ ಜಾತಕದಲ್ಲಿ ಚಂದ್ರ ಬಲಗೊಂಡು ಮಾನಸಿಕ ನೆಮ್ಮದಿ ಸಿಗುತ್ತದೆ.
ಕಪ್ಪು ಎಳ್ಳನ್ನು ದಾನ ಮಾಡಿ ಮಹಾಶಿವರಾತ್ರಿಯಂದು ಕಪ್ಪು ಎಳ್ಳನ್ನು ದಾನ ಮಾಡಿ. ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ. ಪಿತೃ ದೋಷವೂ ನಿವಾರಣೆಯಾಗುತ್ತದೆ. ಈ ದಿನ ಕಪ್ಪು ಎಳ್ಳನ್ನು ದಾನ ಮಾಡಿ.
ವಸ್ತ್ರದಾನ ಮಾಡಿ ಮಹಾಶಿವರಾತ್ರಿಯಂದು ಬಡವರಿಗೆ ವಸ್ತ್ರದಾನ ಮಾಡುವುದರಿಂದ ನಿಮ್ಮ ಜೀವನದಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಮನೆಯಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಋಣ ಪರಿಹಾರ ದೊರೆಯುತ್ತದೆ. ಶಂಕರನ ಕೃಪೆಯೂ ಸಿಗುತ್ತದೆ.
ಈ ವಸ್ತುಗಳಿಂದ ಶಿವನಿಗೆ ಅಭಿಷೇಕ ಮಹಾಶಿವರಾತ್ರಿಯ ದಿನ ಪೂಜೆ ಮಾಡುವಾಗ ಶಿವಲಿಂಗಕ್ಕೆ ಜೇನುತುಪ್ಪದ ಅಭಿಷೇಕ ಮಾಡುವುದು ತುಂಬಾ ಶ್ರೇಯಸ್ಕರ. ಹೀಗೆ ಮಾಡುವುದರಿಂದ ಭಕ್ತನ ಜೀವನದಲ್ಲಿ ಎಲ್ಲಾ ಕಷ್ಟಗಳು ದೂರವಾಗಿ ಶಿವನ ಕೃಪೆಯು ಅಖಂಡವಾಗಿ ಉಳಿಯುತ್ತದೆ. ಶಿವರಾತ್ರಿಯ ದಿನ ಮೊಸರಿನಿಂದ ಶಂಕರನಿಗೆ ರುದ್ರಾಭಿಷೇಕ ಮಾಡುವುದರಿಂದ ಆರ್ಥಿಕ ಕ್ಷೇತ್ರದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಕಬ್ಬಿನ ರಸದಿಂದ ಶಿವನಿಗೆ ಅಭಿಷೇಕ ಮಾಡುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ. ಜೀವನದಲ್ಲಿ ಎಂದೂ ಹಣದ ಕೊರತೆ ಇಲ್ಲ. ಶಿವನನ್ನು ಪ್ರತಿಷ್ಠಾಪಿಸುವಾಗ ‘ಓಂ ಪಾರ್ವತಿಪತ್ಯೇ ನಮಃ’ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಯಾವುದಕ್ಕೂ ಕೊರತೆಯಿಲ್ಲ.