ಬಳ್ಳಾರಿ, ಮೇ.10: ಜಿಲ್ಲೆಯ ತೋರಣಗಲ್ಲಿನ ಉಕ್ಕು ಕಾರ್ಖಾನೆಯಲ್ಲಿ ನಿನ್ನೆ ಮಧ್ಯಾಹ್ನ ಅವಘಡ ಸಂಭವಿಸಿ ಮೂರು ಜನ ನೌಕರರು ಸಾವನ್ನಪ್ಪಿದ್ದಾರೆ.
ಹೊಸಪೇಟೆ ತಾಲೂಕಿನ ಭುವನಳ್ಳಿಯ ಗಂಟೆ ಜಡೆಪ್ಪ(31) ಚೆನ್ನೈನ ಆಸಿಸ್ಟಂಟ್ ಮ್ಯಾನೇಜರ್ ಶಿವಮಹಾದೇವ ಎಂ(22) ಮತ್ತು ಬೆಂಗಳೂರಿನ ಸಿವಿಲ್ ಇಂಜಿನೀಯರ್, ಸುಶಾಂತ ಕೃಷ್ಣ ನೈನಾರು(23)
ಸಾವನ್ನಪ್ಪಿದ್ದಾರೆ
ಕಾರ್ಖಾನೆಯ ಹೆಚ್.ಎಸ್.ಎಂ-3 ಘಟಕದಲ್ಲಿ ಸರಬರಾಜು ಆಗದ ಕಾರಣ, ಸಿವಿಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೃತರು. ವಾಟರ್ ಟ್ಯಾಂಕ್ ಹತ್ತಿರ ಪರಿಶೀಲಿಸಲು ಹೋದಾಗ ದಿಢೀರ್ ಆಗಿ ದೊಡ್ಡ ಪ್ರಮಾಣದ ನೀರು ಘಟಕದಿಂದ ಬಿಟ್ಟಿದ್ದರಿಂದ ನೀರಿನ ರಭಸಕ್ಕೆ ಮೂರು ಜನರು. ದೊಡ್ಡ ಕೊಳವೆ ಮೂಲಕ ಕೊಚ್ಚಿಕೊಂಡು ಹೋಗಿ ಸುಮಾರು 70 ರಿಂದ 80 ಅಡಿ ಆಳದ ಟ್ಯಾಂಕ್ ನಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಮೃತದೇಹಗಳನ್ನು ವಿಮ್ಸ್ ಶವಾಗಾರದಲ್ಲಿ ಇಡಲಾಗಿದೆ.
ತೋರಣಗಲ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದೆ.