ಬಳ್ಳಾರಿ,ಜು.೭: ಇದೇ ತಿಂಗಳು ಜುಲೈ ೨೭ ರಂದು ಚಿತ್ರದುರ್ಗದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿಯವರ ದೀಕ್ಷಾ ರಜತ ಮಹೋತ್ಸವ ಹಾಗೂ ಭೋವಿ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮದ ಅಂಗವಾಗಿ ದೇಶದೆಲ್ಲಡೆ ನೆಲೆಸಿರುವ ಭೋವಿ ಸಮಾಜವನ್ನು ಸಂಘಟಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತದೆ,
ಬಳ್ಳಾರಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಮರ್ಚೇಡ್ ರೆಸಿಡೆನ್ಸಿ (ಮಯೂರ ಹೋಟಲ್ ಎದುರುಗಡೆ) ಬಳ್ಳಾರಿಯಲ್ಲಿ ಆಯೋಜಿಸಲಾಗಿದೆ. ಈ ಸಭೆಗೆ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿಯವರು ಹಾಗು ಕರ್ನಾಟಕ ರಾಜ್ಯ ಭೋವಿ ನಿಗಮದ ಅಧ್ಯಕ್ಷರಾದ ರವಿಕುಮಾರ್ ಮತ್ತಿತರರೇ ಸಮಾಜದ ಹಿರಿಯ ಮುಖಂಡರು ಆಗಮಿಸಲಿದ್ದಾರೆ. ಅದುದರಿಂದ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಸಮಾಜದ ಮುಖಂಡರು, ಬಂಧುಗಳು ತಪ್ಪದೇ ಹಾಜರಾಗಬೇಕಾಗಿ ಬಳ್ಳಾರಿ ಜಿಲ್ಲಾ ಭೋವಿ (ವಡ್ಡರ)ಸಂಘದ ಜಿಲ್ಲಾಧ್ಯಕ್ಷರು ವಿ.ರಾಮಾಂಜನೇಯಲು, ಸಂಘದ ಪ್ರಧಾನ ಕಾರ್ಯದರ್ಶಿ ವಿ.ಗಾದಿಲಿಂಗ, ಸಂಘಟನಾ ಕಾರ್ಯದರ್ಶಿ ಜಲಾಲ್ಕುಮಾರ್ ಅವರು ಮನವಿ ಮಾಡಿದ್ದಾರೆ.