ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಡಿ,೨೫: ತಾಲೂಕಿನ ಗಡಿ ಗ್ರಾಮವಾದ ಕೆ. ವೀರಾಪುರದಲ್ಲಿ ಇಂದು ೭೭ನೇ ವರ್ಷದ ಶ್ರೀ ಹೊನ್ನೂರುಸ್ವಾಮಿಗಳವರ ಉರುಸು ಮಹೋತ್ಸವ ವೈಭವವಾಗಿ ನಡೆಯಲಿದೆ. ಈ ಉರುಸು ಹಿಂದೂ-ಮುಸ್ಲಿAರಿಗೆ ಭಾವಕೈತೆಗೆ ಪ್ರತೀಕ. ಆಂಧ್ರದ ಅನಂತಪುರ ಜಿಲ್ಲೆಯ ಹೊನ್ನೂರು ಗ್ರಾಮದಲ್ಲಿ ಸ್ವತಂತ್ರ ಪೂರ್ವದಿಂದಲೂ ನಡೆಯುತ್ತಿರುವ ಉರುಸು ಮಾದರಿಯಲ್ಲೇ ಗ್ರಾಮದಲ್ಲಿ ಸತತ ೭೭ ವರ್ಷದಿಂದ ನಿರಂತರವಾಗಿ ಉರುಸು ನಡೆಯುತ್ತಿದೆ, ಗ್ರಾಮದ ತಲ್ಲಬಂಡ್ಲ ಕೆಂಚಪ್ಪನವರು ೧೩-೩-೧೯೭೪ರಂದು ಗ್ರಾಮದ ಮಧ್ಯ ಭಾಗದಲ್ಲಿ ನಿರ್ಮಿಸಿದ ದರ್ಗಾವನ್ನು ಜನರು ಇಂದಿಗೂ ಪೂಜಿಸುತ್ತಿದ್ದಾರೆ. ಇಲ್ಲಿ ಭಕ್ತರ ಇಷ್ಟಾರ್ಥಗಳನ್ನು ನೇರವೇರಿಸಿರುವ ಹಲವು ಉದಾಹರಣೆಗಳಿವೆ.
ಹೊನ್ನಲ್ಲಿ ಲಕ್ಷಮ್ಮ, ತಲ್ಲಬಂಡ್ಲ ಕುಟುಂಬದಿAದ ಪ್ರಾರಂಭವಾದ ಉರುಸು ಮಹೋತ್ಸವವು ಕಾಲ ಕ್ರಮೇಣ ತಂಬ್ರಲ್ಲಿ ಕುಟುಂಬದವರು ಸಹ ಕೈಜೋಡಿಸುವ ಮೂಲಕ ಉರುಸು ನಿರಂತರವಾಗಿ ಸಾಗುತ್ತಲಿದೆ.
ಮುಖ್ಯವಾಗಿ ದಿ.ಲಿಂಗಯ್ಯ, ದಿ.ಪೆದ್ದಅಂಜಿನಯ್ಯ, ದಿ.ಪುಲ್ಲಣ್ಣ, ದಿ. ಸತ್ತಾರಪ್ಪ, ದಿ.ತಲ್ಲಬಂಡ್ಲ ಹೊನ್ನೂರಪ್ಪ, ದಿ.ಕೆಂಚಪ್ಪ, ದಿ.ಹನುಮಂತಪ್ಪ, ದಿ. ಸಿದ್ದಿರಪ್ಪ, ದಿ.ಭೀಮಣ್ಣ, ದಿ.ತಂಬ್ರಲ್ಲಿ ಚಿನ್ನ ವೀರಪ್ಪ, ದಿ.ಆನಂದಪ್ಪರಿAದ ವಂಶಪಾರAರ್ಯವಾಗಿ ಈಗಿನ ವೆಂಕಟರಮಣ,ಹನುಮAತಪ್ಪ, ಟಿ. ರುದ್ರಪ್ಪ, ಟಿ.ಭಾಸ್ಕರ್, ಟಿ.ಸೋಮಶೇಖರ್, ಟಿ.ಚೆನ್ನಪ್ಪ, ಟಿ.ಗೋಪಾಲ್, ಹೊನ್ನೂರಪ್ಪ, ಶರ್ಮಸ್ ವಲಿ, ಟಿ. ಈರಪ್ಪ, ದಿವಾಕರ್ ರೆಡ್ಡಿ, ವೀರಾರೆಡ್ಡಿ, ಮತ್ತಿತರಿಂದ ಕೂಡಿದ ೮೦ ಜನ ಸದಸ್ಯರು ಶಿಸ್ತುಬದ್ಧವಾಗಿ ಹಿರಿಯರ ಹಾದಿಯಲ್ಲಿ ನಡೆದುಕೊಂಡು ಬಂದಿದ್ದಾರೆ. ಈ ದಿಶೆಯಲ್ಲಿ ಉರುಸು ಮೊದಲನೇ ದಿನ ಗ್ರಾಮದ ಮೇಟಿ ಗೌಡರ ಮನೆಯಂದ ಮೆರವಣಿಗೆ ಮುಖಾಂತರ ಗಂಧವನ್ನು ತರುವುದು, ಸ್ವಸ್ತಿ ಶ್ರೀ ಶುಭಕೃತ ಸಂವತ್ಸರ ಮಾರ್ಗಶಿರ ಶುದ್ಧ ಪೌರ್ಣಮಿಯ ರಾತ್ರಿ ೧.೧೦ಕ್ಕೆ ದಿ. ಸೇದಪ್ಪ ತಾತನವರ ಮನೆಯಿಂದ ಅಲಂಕಾರಗೊAಡ ಕುದುರೆಯ ಉತ್ಸವವು ಸರ್ವ ಮಂಗಳ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಪ್ರಾರಂಭವಾಗಿ, ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡುವ ಮುಖಾಂತರ ಬೆಳಿಗ್ಗೆ ೭ಗಂಟೆ ಸುಮಾರಿಗೆ ದರ್ಗಾವನ್ನು ತಲುಪಲಿದೆ. ಗ್ರಾಮದ ಮುಖ್ಯದ್ವಾರದಲ್ಲಿ ಹಿರಿಯ ವೈದ್ಯರು ಟಿ.ಸಿ. ರುದ್ರಪ್ಪ ಸುಮಾರು ೫ ಲಕ್ಷ ವೆಚ್ಚದಿಂದ ನಿರ್ಮಿಸಿದ ಹೊನ್ನೂರುಸ್ವಾಮಿ ಮುರ್ತಿಯನ್ನು ಹೊಂದಿದ ಮುಖ್ಯ ದ್ವಾರ ವಿಶೇಷವಾಗಿದೆ. ಆದ ಕಾರಣ ಸದಭ್ಕಕ್ತರೆಲ್ಲರು ತಾತನವರ ಕೃಪಾರ್ಶಿವಾದದಿಂದ ಪುನೀತರಾಗಬೇಕೆಂದು ಮತ್ತು ಈ ಕಾರ್ಯಕ್ರಮಕ್ಕೆ ಗ್ರಾಮದ ಜನರಿಗಾಗಿ ಹೋಗಿ ಬರಲು ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು ಹಾಗೂ ಪ್ರಸಾದ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ ಎಂದು ಕೆ.ವೀರಾಪುರ ಗ್ರಾಮಸ್ಥರು ತಿಳಿಸಿದರು.
ಉರುಸು ಮಹೋತ್ಸವವು ಶಾಂತಿ ರೀತಿಯಲ್ಲಿ ಆಚರಿಸಿ
ಉರುಸು ಮಹೋತ್ಸವವು ಶಾಂತಿ ರೀತಿಯಲ್ಲಿ ಆಚರಿಸಿ
ಕೆ. ವೀರಾಪುರ ಗ್ರಾಮದಲ್ಲಿ ೨ ದಿನಗಳ ಕಾಲ ನಡೆಯುವ ಹೊನ್ನುರು ಸ್ವಾಮಿ ಮಹೋತ್ಸವವು ಶಾಂತಿಯೂತವಾಗಿ ಆಚರಿಸ ಬೇಕೆಂದು ಪರಮದೇವನಹಳ್ಳಿ ಪಿ.ಎಸ್.ಐ ಶಶಿಧರ್ ವೈ ತಿಮ್ಮಪ್ಪ ಗ್ರಾಮಸ್ಥರಿಗೆ ಮನವಿ ಮಾಡುದರು. ಗ್ರಾಮದ ದರ್ಗಾ ಆವರಣದಲ್ಲಿ ಎ. ಎಸ್.ಐ ಉಮೇಶ್, ನರಸಿಂಹ ಸಿಬ್ಬಂದಿ, ಮತ್ತಿತರ ಗ್ರಾಮದ ಮುಖಂಡರ ಜೊತೆ ಪೂರ್ವಭಾವಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪಿ.ಎಸ್.ಐ ಶಶಿಧರ್ ಮಾತನಾಡಿ ಗ್ರಾಮದಲ್ಲಿ ಸತತ ೭೭ ವರ್ಷಗಳಿಂದ ಆಚರಣೆ ಮಾಡುತ್ತಿರುವ ಉರುಸು ಮಹೋತ್ಸವದಲ್ಲಿ ಜನರು ಶಾಂತಿ ರೀತಿಯಾಗಿ ನಡೆದುಕೊಳ್ಳಬೇಕೆಂದು ಅದೇ ರೀತಿ ಗ್ರಾಮದಲ್ಲಿ ಮದ್ಯಪಾನ ನಿಷೇಧಿಸಲಾಗಿದೆ ಎಂದು ಪಿ.ಎಸ್.ಐ ಶಶಿಧರ್ ಮಾಹಿತಿ ನೀಡಿದರು. ಗಡಿಭಾಗ ಆಗಿರುವದರಿಂದ ಉರುಸುನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮನ್ನೇಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪಿ.ಎಸ್.ಐ ಶಶಿಧರ್ ತಿಳಿಸಿದರು..