ಬಳ್ಳಾರಿ,ಫೆ,11; ನಗರದ ಆರಾಧ್ಯದೈವ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ರಥೋತ್ಸವ ನಾಳೆ ಸಂಜೆ 4 ಗಂಟೆಗೆ ನಗರದ ತೇರು ಬೀದಿಯಲ್ಲಿ ಜರುಗಲಿದೆ. ನಗರದ ತೇರು ಬೀದಿಯಲ್ಲಿ ಪ್ರತಿ ವರ್ಷದಂತೆ ಈ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ ಫೆ,4 ರಿಂದಲೇ ಕೋಟೆ
ಮಲ್ಲೇಶ್ವರ ಸ್ವಾಮಿಯ ರಥೋತ್ಸವದ ವಿಧಿ ವಿಧಾನಗಳು ಆರಂಭಗೊAಡಿದ್ದು, ಫೆ,4 ರಿಂದಲೇ ವಾಹನೋತ್ಸವಗಳು ನಡೆಯುತ್ತಿವೆ. ನಿನ್ನೆ ಸಂಜೆ 6 ಗಂಟೆಗೆ ಕೋಟೆ ಮಲ್ಲೇಶ್ವರ ಹಾಗೂ
ಪಾರ್ವತಿ ದೇವಿಯ ಕಲ್ಯಾಣೋತ್ಸವ ನಡೆದಿದ್ದು ಆದಾದ ಬಳಿಕ ಗಜವಾಹನೋತ್ಸವ ನೇರವೇರಿತು. ಇಂದು ಸಂಜೆ 6 ಗಂಟೆಗೆ ವೃಷಭವಾಹನೋತ್ಸವ ಮತ್ತು ಮರಿಸ್ವಾಮಿ ಮಠ ಗರಡಿ ಸಂಘದ ಭಕ್ತರಿಂದ ಲಾಟಿ ಪ್ರರ್ದಶನ ನಡೆಯಲಿದೆ ಎಂದ ಹನುಮಂತಪ್ಪ ,ನಾಳೆ ಬೆಳಿಗ್ಗೆ 10:30 ಕ್ಕೆ ಮಡಿತೇರು ಏಳೆಯಲಿದ್ದು, ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವ ನಗರದ ತೇರು ಬೀದಿಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಬಳ್ಳಾರಿ ಜಾತ್ರೆಯ ಅಂಗವಾಗಿ ನಾಳೆ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುವ ಸಾಧ್ಯತೆಯಿಂದ ಸಂಚಾರಿ ಠಾಣೆಯ ಪೋಲಿಸರು ಮುಂಜಾಗ್ರತಾ ಕ್ರಮವಾಗಿ ನಾಳೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ವಾಹನಗಳ ಪಾರ್ಕಿಂಗ್ ಗಾಗಿ ವಾರ್ಡಾ್ಲ ಕಾಲೇಜು ಮೈದಾನ, ಎಸ್.ಆರ್.ಆರ್ ಥೀಯೆಟರ್, ಹಾಗೂ ಸಣ್ಣ ಮಾರುಕಟ್ಟೆ ಬಳಿ ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 1 ಗಂಟೆಯಿAದ ಬೆಂಗಳೂರು ರಸ್ತೆಯ ಕಾಳಮ್ಮ ಬೀದಿಯಿಂದ ಹೋಗುವ ವಾಹನಗಳು ಹಾಗೂ ಮೋತಿಯಿಂದ ತೇರು ಬೀದಿಗೆ ಸಂಚ[1]ರಿಸುವ ವಾಹನ ಸಂಚಾರ ಸಂಪೂರ್ಣವಾಗಿ ನಿಷೇದಿಸಿದ್ದು, ತೇರು ಏಳೆಯುವ ಎರಡು ಗಂಟೆ ಮುಂಚೆಯೇ ವಾಹನ ದಟ್ಟಣೆಯನ್ನು ಕ್ಲಿಯರ್ ಮಾಡಿ ತೇರು ಏಳೆಯಲು ಅನುವು ಮಾಡಲಾಗುತ್ತದೆ ಎಂದು ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಐಯ್ಯನಗೌಡ ಪಾಟೀಲ್ ತಿಳಿಸಿದ್ದಾg