ಬಳ್ಳಾರಿ ತಾ ಬೆಣಕಲ್ಲು ಗ್ರಾಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೋಕದ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ 14 ರಂದು ರಾತ್ರಿ 9.00 ಘಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಣಕಲ್ಲು ಹೊಸ ಬಡಾವಣೆಯ ಶಾಲೆಯ ಆವರಣದಲ್ಲಿ ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರಾಧಿಕಾರಿಗಳು ಮತ್ತು ಶಿಬಿರಾರ್ಥಿಗಳು ಸೇರಿ ಭಾರತ ನಕಾಶೆ ಮತ್ತು ಯೋಧರ ತುಫಾಕಿ ಮತ್ತು ಟೋಪಿಯ ಚಿತ್ರಗಳನ್ನು ರಂಗೋಲಿಯಿಂದ ಬಿಡಿಸಿ ಅಲಂಕರಿಸಿದರು.
ಈ ಕಾರ್ಯಕ್ರಮಕ್ಕೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕಂಡೇಗೌಡ್ರು ಚೆನ್ನನಗೌಡರು ಮೇಣದ ದೀಪವನ್ನು ಬೆಳಗಿಸಿ ಅವರಿಂದ ಎಲ್ಲಾ ಶಿಬಿರಾರ್ಥಿಗಳು ಒಬ್ಬರಿಂದೊಬ್ಬರು ದೀಪ ಬೆಳಗಿಸಿಕೊಂಡು ಒಂದು ನಿಮಿಷ ಮೌನಾಚರಣೆ ಮಾಡಿ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.
ನಂತರ ಒಬ್ಬೊರಾಗಿ ಬಂದು ಮೇಣದ ದೀಪಗಳನ್ನು ಭಾರತದ ನಕಾಶೆಯ ಸುತ್ತ ಸ್ಥಾಯಿಗೊಳಿಸಲಾಯಿತು.
ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ಬಕಾಡೆ ಪಂಪಾಪತಿ, ಸಹ ಶಿಬಿರಾಧಿಕಾರಿಗಳಾದ ಶ್ರೀನಿವಾಸ.ವಿ ಹಾಗೂ ನಮ್ಮ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾದ ಶಿವಾಚಾರಿ ಹಾಗೂ ಗ್ರಾಮದ ಯುವಕರು, ಶಾಲೆಯ ಮಕ್ಕಳು ಪಾಲ್ಗೊಂಡು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.