ಬಳ್ಳಾರಿ, ಏ.8: ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರು ಅತ್ಯಮೂಲ್ಯ ಅಗತ್ಯಕ್ಕೆ ತಕ್ಕಂತೆ ಬಳಸಿ ಎಂದು ಜನತೆಗೆ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಕರೆ ನೀಡಿದರು.
ಅವರು ತಾಲೂಕಿನ ಹಲಕುಂದಿ ಗ್ರಾಮದ ಎಸ್ಟಿ ಸಮುದಾಯವೇ ವಾಸವಾಗಿರುವ ಪೆದ್ದಮ್ಮ ಗುಡಿ ಹತ್ತಿರ ವಿಧಾನ ಪರಿಷತ್ ಸದಸ್ಯರ 2023- 24ನೇ ಸಾಲಿನ ಕರ್ನಾಟಕ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಯಡಿ ಅಂದಾಜು 11.13 ಲಕ್ಷ ರೂ ಗಳಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಪ್ರದೇಶದ ಜನ ಕುಡಿಯುವ ನೀರಿನ ಸಮಸ್ಯೆ ಎದಿರಿಸುತ್ತಿದ್ದರು. ಈ ಹಿಂದೆ ಗ್ರಾಮಕ್ಕೆ ಬಂದಾಗ ಈ ಸಮಸ್ಯೆ ಗಮನಕ್ಕೆ ತಂದಿದ್ದರಿಂದ ಇದನ್ನು ನಿರ್ಮಿಸಿ ಜನತೆಗೆ ಇಂದು ನೀರು ದೊರೆಯುವಂತೆ ಮಾಡಿದೆಂದರು.
ಈ ವೇಳೆ ಬಿಜೆಪಿಯ ಗ್ರಾಮಾಂತರ ಮಂಡಲದ ಮತ್ತು ಗ್ರಾಮಪಂಚಾಯ್ತಿಯ ಮಾಜಿ ಅಧ್ಯಕ್ಷ ಹೆಚ್.ಆರ್ ಮಲ್ಲಿಕಾರ್ಜುನಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುವರ್ಣ ಹೊನ್ನೂರ್ ಸ್ವಾಮಿ, ಮುಖಂಡರಾಗಳಾದಪ್ಪ, ಭೀಮರೆಡ್ಡಿ, ಸೋಮನಗೌಡ ಮೊದಲಾದವರು ಉಪಸ್ಥಿತರಿದ್ದರು.
ನೀರು ಅಮೂಲ್ಯ ಅಗತ್ಯಕ್ಕೆ ತಕ್ಕಂತೆ ಬಳಸಿ: ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್
