ಕೊಟ್ಟೂರು.ಫೆ. 27: ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಕಸವಿಲೆವಾರಿ ವಾಹನಗಳಲ್ಲಿ ಅಳವಡಿಸಿದ ಧ್ವನಿರ್ವರ್ಧಕಗಳ ಮೂಲಕ ಸಾರ್ವಜನಿಕರಿಗೆ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕಿಂತ ಮುಂಚೆ ಮತ್ತು ನಂತರ ನೀರನ್ನು ಮಿತವಾಗಿ ಬಳಸುವಂತೆ ಮುಖ್ಯಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಕೃತಿ ಮುನಿಸಿಕೊಂಡರೇ ಏನೆಲ್ಲಾ ಆಗಬಹುದು ಅನ್ನುವುದಕ್ಕೆ ಈ ವರ್ಷ ನಮ್ಮ ಮುಂದೆ ಇರುವ ಬರಗಾಲವೇ ಕಾರಣ, ಈ ಪರಿಸ್ಥಿತಿ ಕೇವಲ ಕೊಟ್ಟೂರು ಪಟ್ಟಣಕ್ಕೆ ಮಾತ್ರ ಸೀಮಿತವಾಗಿಲ್ಲ ಇಡೀ ರಾಜ್ಯದ ಸ್ಥಿತಿಯೇ ಕುಡಿಯುವ ನೀರಿನ ಸಮಸ್ಯೆ ಹೀಗಿರುವಾಗ ಮುಖ್ಯಾಧಿಕಾರಿ ಮಾತ್ರ ಏನು ಮಾಡಲು ಸಾಧ್ಯ, ಕೊಟ್ಟೂರು ರಥೋತ್ಸವದಲ್ಲಿ ಮೂಲಸೌಕರ್ಯಗಳ ತೊಂದರೆ ಇಲ್ಲದಂತೆ ಸುಸೂತ್ರವಾಗಿ ಮುಗಿಸಿದರೆ ಸಾಕಪ್ಪಾ ಅನ್ನುವ ಒಳಮನಸ್ಥಿತಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಇರಬಹುದೇನೋ, ಎನ್ನುವ ಸುದ್ದಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸರ್ಕಾರ ನೀರಿಗಾಗಿ ಎಷ್ಟೇ ಹಣ ಸುರಿದರು “ಗಂಗಾಮಾತೆ” ದೊರೆಯಬೇಕಲ್ಲಾ ? ಎಂಬುವುದೆ ಒಂದು ದೊಡ್ಡ ಪ್ರಶ್ನೆಯಾಗಿದೆ. ಅದ್ದರಿಂದ ಸಾರ್ವಜನಿಕರು ಪಟ್ಟಣ ಪಂಚಾಯಿತಿ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಿದರೆ. ಜಾತ್ರೆ ಸಂದರ್ಭ ಹಾಗೂ ಇತರೆ ಬಿಡಿ ದಿನಗಳಲ್ಲಿ ನೀರನ್ನು ಮಿತವಾಗಿ ಬಳಸಬೇಕು ಎನ್ನುವುದು ಪ.ಪಂ.ಮುಖ್ಯಾಧಿಕಾರಿ ಎ.ನಸರುಲ್ಲಾ ರವರ ಸಾರ್ವಜನಿಕ ಪ್ರಕಟಣೆಯಾಗಿದೆ.
ಕೊಟ್ಟೂರು ಪಟ್ಟಣಕ್ಕೆ ನಿತ್ಯ ನೀರು ಸರಬರಾಜು ಆಗುವ ಬನ್ನಿಗೋಳು ಜಾಕ್ಟಲ್ ನಲ್ಲಿ ನೀರಿನ ಸಂಗ್ರಹ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ಕಂಡುಬಂದಿದ್ದರಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರು ಪಟ್ಟಣದ ಪ್ರತಿ ವಾರ್ಡ್ ಗಳಲ್ಲಿ “ನೀರನ್ನು ಮಿತವಾಗಿ ಬಳಸಿ, ಜಾತ್ರೆ ಯಶಸ್ವಿಗೊಳಿಸಿ” ಎಂಬುವಂತೆ ನಿತ್ಯ ಕಸವಿಲೆವಾರಿ ವಾಹನಗಳ ಮೂಲಕ ನೀಡುವ ಪ್ರಕಟಣೆ ಕಂಡುಬಂದಿದೆ ಎಂದ ಸಾರ್ವಜನಿಕರು.
ಅದು ಏನೇ ಇರಲಿ ಶ್ರೀ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಮನೆಗೆ ಅಥಿತಿಗಳು ಬಂದು ಹೋಗುವುದು ಸರ್ವೇ ಸಾಮಾನ್ಯ ನಾವು ಅತಿಥಿಗಳಿಗೆ ನೀಡುವ ಎಲ್ಲಾ ಸೌಲಭ್ಯಕ್ಕಿಂತ ಅವರಿಗೆ ನೀರಿನ ಸೌಲಭ್ಯ ಒದಗಿಸಿ ಕೊಡುವುದು ಬಹಳ ಮುಖ್ಯ. ಪ.ಪಂ. ಪ್ರಕಟಣೆ ನಿತ್ಯ ಕೇಳಿದ ಜನರು ರಥೋತ್ಸವ ಸಂದರ್ಭದಲ್ಲಿ ನಮಗೆ ನೀರಿನ ತಾಪತ್ರಯ ತಪ್ಪಿದ್ದಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುವ ಸನ್ನಿವೇಶ ಕಂಡುಬಂದ ಬಿಸಿ ಬಿಸಿ ಸುದ್ದಿಯಾಗಿದೆ ಎಂದ ಸಾರ್ವಜನಿಕರು.