ಸುವರ್ಣವಾಹಿನಿ ಸುದ್ದಿ
ಕೊಟ್ಟೂರು,ಜ,೧೯: ಪಟ್ಟಣದ ತಾಲೂಕು ಕಛೇರಿ, ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ವೇಮನಯೋಗಿಯವರ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರರಾದ ಅಮರೇಶ.ಜಿ.ಕೆ. ರವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಯವ್ವನದಲ್ಲಿ ಸೋಮಾರಿ, ಸ್ವೇಚ್ಛಾಚಾರಿಯಾಗಿದ್ದ ವೇಮನರೆಡ್ಡಿ ತನ್ನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ನೀಡಿದ ಮುತ್ತಿನ ಮೂಗುತಿಯಿಂದ ಮುಕ್ತಿಯ ಮಾರ್ಗವನ್ನು ಕಂಡುಕೊAಡು ಬದಲಾವಣೆಯಾದರು. ವೇಮನ ರೆಡ್ಡಿ ವೇಮನ ಯೋಗಿಯಾಗಿ, ಜನರ ಕಣ್ಣಿಗೆ ಹುಚ್ಚರಂತೆ ಕಾಣುತ್ತಾ, ಸಮಾಜದ ಅಂಕು-ಡೊAಕುಗಳನ್ನು ತಿದ್ದಿ ಸಮಾಜ ಸುಧಾರಕರಾಗಿ, ದಾರ್ಶನಿಕರಾಗಿ ಬದುಕಿದರು. ಪ್ರತಿಯೊಬ್ಬ ಮಾನವ ತಪ್ಪು ಮಾಡುವುದು ಸಹಜ, ಆದರೆ ತನ್ನ ತಪ್ಪಿನ ಅರಿವನ್ನು ತಿಳಿದು ತಿದ್ದಿ ನಡೆದರೆ ಮಹಾ ಮಾನವನಾಗಬಹುದು ಎನ್ನುವುದಕ್ಕೆ ವೇಮನರು ಸಾಕ್ಷಿಯಾಗಿದ್ದಾರೆ. ಎಲ್ಲರೂ ಇಂತಹ ಮಹಾತ್ಮರು ಮನುಕುಲದ ಏಳಿಗೆಗೆ ನೀಡಿದ ಸಂದೇಶವನ್ನು ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.ಕೊಟ್ಟೂರು ತಾಲೂಕು ರೆಡ್ಡಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ಕೆ ರಾಮನಗೌಡ ನಿವೃತ್ತ ಶಿಕ್ಷಕರು ತಮಿಳಿನಲ್ಲಿ ತಿರುವಳ್ಳರು, ಕರ್ನಾಟಕದಲ್ಲಿ ಸರ್ವಜ್ಞರಂತೆ ಆಂದ್ರದಲ್ಲಿ ವೇಮರೆಡ್ಡಿ ಪ್ರಸಿದ್ಧರಾಗಿದ್ದಾರೆ. ತಮ್ಮ ಗುರುಗಳಾದ ಅಭಿರಾಮಚಾರ್ಯರ ಅಭಿಮಾನದಿಂದ ‘ವಿಶ್ವರಾಭಿರಾಮ ಕೇಳು ವೇಮ’ ಎಂದು ಕೊನೆಗೊಳ್ಳುವ ಪಧ್ಯಗಳನ್ನು ರಚಿಸಿದ್ದು, ಇವು ನಮ್ಮ ಬಾಳಿಗೆ ಮಾರ್ಗದರ್ಶನವನ್ನು ನೀಡುತ್ತವೆ. ಗುರುಗಳ ಮಾರ್ಗದರ್ಶನದಿಂದ ಅರಿವು ಬಂದ ಕಾರಣ ಮೈಲಿನ ಅರಿವೆಗಳನ್ನು ಕಿತ್ತೊಗೆದು ದಿಗಂಬರಾಗಿ ಸಂಚರಿಸಿ ಆಧ್ಯಾತ್ಮಿಕ ವ್ಯಕ್ತಿಗಳಾಗಿ ಬಾಳಿದ್ದಾರೆ. ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜದ ಉಪಾಧ್ಯಕ್ಷರಾದ ಕೆ.ದೇವೇಂದ್ರಗೌಡ, ಜಿ.ಮಲ್ಲಿಕಾರ್ಜುನ, ಖಜಾಂಚಿ ಎಸ್ ಕೊಟ್ರೇಶ್, ಮಂಜುನಾಥ ಕೆ (ಸೀಡ್ಸ್), ಗುರುಬಸವರಾಜ, ಬಿ ಮಲ್ಲಿಕಾರ್ಜುನ ಮಂಗಳ ಟೆಕ್ಸ್ಟೈಲ್ಸ್, ಬಿ ಕೊಟ್ರೇಶ್ ಕುಡುತಿನಮಗ್ಗಿ ಇವರು ಭಾಗವಹಿಸಿದ್ದರು. ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು. ಕಛೇರಿ ಸಿಬ್ಬಂದಿಯಾದ ಅನ್ನದಾನೇಶ್ ಶಿರಸ್ತೇದಾರ್, ಹಾಲಸ್ವಾಮಿ ಕಂನಿ, ಸಿರಾಜ ವುದ್ದೀನ್, ಹನಮಂತ, ಮಂಗಳ ಪಿ.ವಿ, ಮಂಜಮ್ಮ, ದ್ಯಾವಮ್ಮ, ಪುಟಾಣಿ ವಿಜಯಕುಮಾರ, ಹರೀಷ್ ಗ್ರಾ.ಆ.ಅ. ಹಾಗೂ ಇತರರು ಹಾಜರಿದ್ದರು.