ಬಳ್ಳಾರಿ,ಸೆ.26: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಪ್ರಥ ಮ ಕಾಲೇಜ್ (ಸ್ವಾಯತ್ತ)ನ `ಜ್ಞಾನ ಸಿಂಚನ’ ಹಳೆ ವಿದ್ಯಾರ್ಥಿಗಳ ಸಂಘ (ರಿ) ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಪ್ರಸ್ತುತ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸದರಿ ಕಾಲೇಜ್ನ ಹಳೇ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಸೆ.29ರಂದು ಬೆ.10.30 ಗಂಟೆಗೆ ಜರುಗಲಿದೆ.
ಬಳ್ಳಾರಿ ನಗರ ಶಾಸಕರು ಹಾಗೂ ಸದರಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ನಾರಾ ಭರತ್ರೆಡ್ಡಿ ಉದ್ಘಾಟಿಸುವ ಈ ಸಮಾರಂಭದ ಅಧ್ಯಕ್ಷತೆಯನ್ನು `ಜ್ಞಾನ ಸಿಂಚನ’ ಹಳೆ ವಿದ್ಯಾರ್ಥಿಗಳ ಸಂಘ (ರಿ)ದಅಧ್ಯಕ್ಷರು, ಕೆಪಿಸಿಸಿ ವಕ್ತಾರರೂ ಆದ ವೆಂಕಟೇಶ್ ಹೆಗಡೆ ವಹಿಸುವರು. ಸಮಾರಂಭದಲ್ಲಿ `ಜ್ಞಾನ ಸಿಂಚನ’ ಹಳೆ ವಿದ್ಯಾರ್ಥಿಗಳ ಸಂಘ (ರಿ)ದ ಗೌರವಾಧ್ಯಕ್ಷರು ಹಾಗೂ ಸದರಿ ಕಾಲೇಜಿನ ಪ್ರಾಂಶುಪಾಲಡಾ.ಪ್ರಹ್ಲಾದ್ ಚೌದ್ರಿ.ಜಿ., `ಜ್ಞಾನ ಸಿಂಚನ’ ಹಳೆ ವಿದ್ಯಾರ್ಥಿಗಳ ಸಂಘ (ರಿ)ದ ಪ್ರಧಾನ
ಕಾರ್ಯದರ್ಶಿ ಆರ್.ವೈ.ಹನುಮಂತರೆಡ್ಡಿ, `ಜ್ಞಾನ ಸಿಂಚನ’ ಹಳೆ ವಿದ್ಯಾರ್ಥಿಗಳ ಸಂಘ (ರಿ)ದಕಾರ್ಯಾಧ್ಯಕ್ಷ ಎಂ.ಕಿಶೋರ್ಕುಮಾರ್, `ಜ್ಞಾನ ಸಿಂಚನ’ ಹಳೆ ವಿದ್ಯಾರ್ಥಿಗಳ ಸಂಘ (ರಿ)ದ ಖಜಾಂಚಿ ಎನ್.ವೀರಭದ್ರಗೌಡ, `ಜ್ಞಾನ ಸಿಂಚನ’ ಹಳೆ ವಿದ್ಯಾರ್ಥಿಗಳ ಸಂಘ (ರಿ)ದ ಸಂಚಾಲಕಡಾ.ಗುರುಬಸಪ್ಪ ಎಸ್.ರವರು ಭಾಗವಹಿಸುವರು. `ಜ್ಞಾನ ಸಿಂಚನ’ ಹಳೆ ವಿದ್ಯಾರ್ಥಿಗಳ ಸಂಘ(ರಿ)ದ ಪದಾಧಿಕಾರಿಗಳಾದ ಜಿ.ಆನಂದ್ಕುಮಾರ್, ಶೋಭಾ ಕಾಳಿಂಗ, ಕೆ.ಎಂ.ಮAಜುನಾಥ್, ಕೆ.ಎಂ.ಶಿವಕುಮಾರ್, ವೈ.ಅರುಣಾಚಲಂ, ಚಾನಾಳ್ಶೇಖರ್, ಡಿ.ದೇವರಾಜ, ಕೆ.ಪ್ರಭಾಕರಜೋಷಿ, ಡಾ.ಕೆ.ಗಂಗಾಧರ, ದಿನಕರ್.ಎಸ್., ಹೆಚ್.ಎಸ್.ಶಿವಕುಮಾರ್, ಕನಕಪ್ಪ ಎ.,ತಾತರೆಡ್ಡಿಮಲ್ಲಾರೆಡ್ಡಿ, ಆಂಜನೇಯ ಕೇಶವ ರವರು ಭಾಗವಹಿಸುವರು.
ಈ ಕಾರ್ಯಕ್ರಮದಲ್ಲಿ ಸದರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಹಳೆ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸನ್ಮಾನಿಸಿ, ಸತ್ಕರಿಸಲಾಗುವುದು ಎಂದು `ಜ್ಞಾನ ಸಿಂಚನ’ ಹಳೆ ವಿದ್ಯಾರ್ಥಿಗಳ ಸಂಘ (ರಿ)ದ ಸಂಘದ ಅಧ್ಯಕ್ಷ ವೆಂಕಟೇಶ್ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.