ಕಾರಟಗಿ : ಪಟ್ಟಣದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಹಳ್ಳಿ ಸೊಗಡು ಮತ್ತು ಆಹಾರಮೇಳ ಕಾರ್ಯಕ್ರಮ ಫೆಬ್ರುವರಿ 23 ಶನಿವಾರದಂದು ನಡೆಯಿತು.
ಈ ಸಂದರ್ಭದಲ್ಲಿ ಪಾಲಕರು ಮಾತನಾಡಿ ವಿಶೇಷವಾಗಿ ತುಂಬಾ ಚೆನ್ನಾಗಿದೆ ಹಳ್ಳಿ ಹೇಗೆ ಇರುತ್ತದೆ ಹಳ್ಳಿಯಲ್ಲಿ ವ್ಯಾಪಾರ ಯಾವತರ ಮಾಡುತ್ತಾರೆ ಮಕ್ಕಳಿಗೆ ವ್ಯಾಪಾರ ಹೇಗೆ ಮಾಡುತ್ತಾರೆ ಮತ್ತು ಹಳ್ಳಿ ಹೇಗೆ ಇರುತ್ತದೆ ಎಂಬುದು ತುಂಬಾ ಚೆನ್ನಾಗಿ ಈ ಶಾಲೆಯಲ್ಲಿ ಕೆಲವೊಂದು ನೋಡಿ ತಿಳ್ಕೊಬೇಕು ಕೆಲವೊಂದು ಮಾಡಿ ತಿಳ್ಕೊಬೇಕು ಎಂಬುವುದು ಈ ಶಾಲೆಯಲ್ಲಿ ಪಾಠದ ಜೊತೆಗೆ ಮಕ್ಕಳಿಗೆ ವ್ಯಾಪಾರ ಮತ್ತೆ ಹಳ್ಳಿ ಎಂದರೇನು ಎಂಬುದು ಬಗ್ಗೆ ಚೆನ್ನಾಗಿ ಕಾರ್ಯಕ್ರಮ ಮಾಡಿದ್ದರೆ ನಮಗಂತೂ ತುಂಬಾ ಖುಷಿಯಾಗಿದೆ ಎಂದು ಹೇಳಿದರು .
ನಂತರ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ಅಂಗಡಿ ಮಾತನಾಡಿ ಹಳ್ಳಿ ಸೊಗಡು ಮತ್ತು ಆಹಾರ ಮೇಳ ಹಮ್ಮಿಕೊಂಡಿದ್ದು ಶಾಲೆಯ ಚಿಕ್ಕ ಮಕ್ಕಳಿಗೆ ಹಳ್ಳಿಯ ವಾತಾವರಣ ಹೇಗಿರುತ್ತೆ ಜೊತೆಗೆ ಈಗಿನ ಆಧುನಿಕ ಪ್ರಪಂಚದಲ್ಲಿ ಹಳ್ಳಿ ಜನರು ಸಿಟಿ ಜೀವನ ಬೇಕು ಎಂದು ಬಯಸಿ ಬರುತ್ತಿದ್ದಾರೆ ಆದರೆ ಹಳ್ಳಿಯಲ್ಲಿ ನೇಗಿಲ, ಬಾವಿ, ಬತ್ತ ಯಾವ ತರ ನಾಟಿ, ಮಿಕ್ಸಿ, ಗ್ರೈಂಡರ್ ,ಒಣಕೆ ಕುಟ್ಟುವುದು ಬಾವಿ ನೀರು ಸೇದೋದು ಮನೆಗಳು ಹೇಗಿರುತ್ತದೆ ಎಂಬುದು ಮರೆಯಾಗಿ ಹೋಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಶಿವಲೀಲಾ ಅಂಗಡಿ, ಕಾರ್ಯದರ್ಶಿಯಾದ ಶರಣಯ್ಯ, ಶಿಕ್ಷಕರಾದ ನಾಗರಾಜ್, ಬಸವರಾಜ್, ಮರಿಸ್ವಾಮಿ, ಆನಂದ್ ,ಮಂಜುನಾಥ್, ಪಾಲಕರು ಅಮರಯ್ಯ ಸ್ವಾಮಿ, ಭವಾನಿ ಸಿಂಗ್, ಮಮ್ಮದ್, ಹುಸೇನ್, ರಜಾಕ್ ಸೇರಿದಂತೆ ಪಾಲಕರು ವಿದ್ಯಾರ್ಥಿಗಳು ವಿದ್ಯ ಸಂಸ್ಥೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಇದ್ದರು.