ಹೊಸಪೇಟೆ (ವಿಜಯನಗರ )ಮೇ.22: ನಗರದ ಅಮರಾವತಿಯ,ಗೀತಾ ಟೈಲರ್ ಹಿಂಭಾಗದಲ್ಲಿರುವ ಶರನಂ ಆಸ್ಪತ್ರೆ ಕೆ.ಪಿ.ಎಮ್.ಇ ಕಾಯ್ದೆ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ತಾತ್ಕಾಲಿಕವಾಗಿ ಮುಚ್ಚಲು ತಾಲ್ಲೂಕು ಅರೋಗ್ಯಧಿಕಾರಿಗಳು ಆದೇಶ ಹೋರಡಸಿದ್ದಾರೆ.
ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಪತ್ರದ ಮೇರೆಗೆ
ಗೌತಮ ಎನ್ನುವ 09 ವರ್ಷದ ಬಾಲಕನ ಅನುಮಾನಸ್ಪದ ಸಾವಿಗೆ ಕಾರಣವಾದ ಶರನಂ ಆಸ್ಪತ್ರೆಯನ್ನು ಕೆ.ಪಿ.ಎಮ್.ಇ ಕಾಯ್ದೆ 8.4.2.2 5 2007-2008-2017-2018 ಕಾಲಂ : 09, 10, 11(iii) ಮತ್ತು 7(B) 2018ರ ಉಲ್ಲಂಘನೆಯಾಗಿರುವುದರಿಂದ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚಿಸಿರುವುದರಿಂದ ಈ ಕ್ರಿಯೆಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಯಾವುದಾದರು ಒಳ ರೋಗಿಗಳು ತಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದಲ್ಲಿ ತಕ್ಷಣವೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿ ನಂತರ ಆಸ್ಪತ್ರೆಯನ್ನು ಮುಚ್ಚಲಾಗುವುದು ಎಂದು ಆದೇಶದಲ್ಲಿ ತಾಲೂಕು ವೈಧ್ಯಾಧಿಕಾರಿಗಳು ಸೂಚಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಪತ್ರದ ಸೂಚನೆಯಂತೆ ಶರಣಂ ಆಸ್ಪತ್ರೆಯ ವೈದ್ಯರಾದ ಡಾ. ವಿನಯರಾಘವೇಂದ್ರ ಹೆಚ್ ಇವರಿಗೆ ತಾತ್ಕಾಲಿಕವಾಗಿ ಆಸ್ಪತ್ರೆ ಮುಚ್ಚಲು ನೋಟಿಸ್ ನೀಡಲಾಗಿದೆ ಅವರು 24ಘಂಟೆಗಳ ಕಾಲಾವದಿಕೇಳಿದ್ದಾರೆ ನಂತರ ನಿಯಮಗಳ ಪ್ರಕಾರ ಮುಚ್ಚಲಾಗುವುದು.
–ಡಾ. ಭಾಸ್ಕರ್ ತಾಲೂಕು ವೈದ್ಯಧಿಕಾರಿಗಳು ಹೊಸಪೇಟೆ.