ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಫೆ.೨೨: ಮುಂದಿನ ತಿಂಗಳು ೧೭ ರಂದು ನಡೆಯುವ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯತ್ವಕ್ಕೆ ನಡೆಯುವ ಚುನಾವಣೆಗೆ ಫೆ,೨೨ರಂದು ಅಂಗಡಿ ಶರಣಬಸಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ದಿ.ಅಲ್ಲಂ ಕರಿಬಸಪ್ಪ ಮತ್ತು ಎನ್.ತಿಪ್ಪಣ್ಣನವರ “ಹಿರಿಯರ ತಂಡ”ದ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ವ್ಯಾಪರಸ್ಥರಾಗಿರುವ ಇವರು, ಬಸವೇಶ್ವರ ನಗರದ ವಂಕಿ ಮರಿಸಿದ್ದಮ್ಮ ಶಾಲೆಯ ಆಡಳಿತ ಮಂಡಳಿಯ ಹಾಲಿ ಸದಸ್ಯರು, ತಂದೆ ಅಂಗಡಿ ಪಂಪಾಪತಿ (ಕಪ್ಪಗಲ್ಲು) ಇವರು ಈ ಹಿಂದೆ ಸಂಘದ ಹೀರದ ಸೂಗಮ್ಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು.
ಪ್ರಥಮವಾಗಿ ಸ್ಪರ್ಧೆ ಮಾಡಿರುವ ಶರಣಬಸಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಸಂಘದ ಮಾಜಿ ಅಧ್ಯಕ್ಷರಾದ ಉಡೇದ ಬಸವರಾಜ್, ಅಲ್ಲಂ ಬಸವರಾಜ್, ಸಂಘದ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯರಾದ ಜಾನೆಕುಂಟೆ ಬಸವರಾಜ್, ಅಂಗಡಿ ಪಂಪಾಪತಿ, ಶಿವಶಂಕರಗೌಡ, ವಕೀಲ ಪ್ರಭು, ಮೊದಲಾದವರು ಇದ್ದರು.