ಯುಗಾದಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ದಿನ ಎಲ್ಲರ ಮನೆಗಳನ್ನು ಅಲಂಕರಿಸುವ ಮೂಲಕ, ಹೊಸ ಬಟ್ಟೆ ಧರಿಸಿ ಹಬ್ಬ ಮಾಡುತ್ತಾರೆ. ಧರ್ಮಗ್ರಂಥಗಳ ಪ್ರಕಾರ, ಹಬ್ಬದ ದಿನ ದೇವರನ್ನು ಭಕ್ತಿಯಿಂದ ಪೂಜಿಸಿ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ, ವರ್ಷಪೂರ್ತಿ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ನೀಡು ಎಂದು ದೇವರ ಆಶೀರ್ವಾದವನ್ನು ಬೇಡುತ್ತಾರೆ. ಆದರೆ ಇದೆಲ್ಲದರ ಜೊತೆಗೆ ಹಬ್ಬದ ದಿನ ಯಾವ ಕಾರ್ಯಗಳನ್ನು ಮಾಡಬೇಕು ಮತ್ತು ಮಾಡಬಾರದು ಎಂಬ ವಿಷಯಗಳನ್ನು ತಿಳಿದುಕೊಂಡಿರಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೊಸ ವರ್ಷದ ಮೊದಲ ದಿನದ ಬೆಳಿಗ್ಗೆ ಪೂಜೆಯನ್ನು ಮುಗಿಸಿ ಬಳಿಕ, ಇಡೀ ಮನೆಗೆ ಗಂಗಾ ಜಲ ಸಿಂಪಡಿಸಿ. ಇದಾದ ಬಳಿಕ ದುರ್ಗಾ ಮಾತೆಯನ್ನು ಧ್ಯಾನಿಸಿ. ಹೀಗೆ ಮಾಡುವುದರಿಂದ, ಮನೆಯಲ್ಲಿ ಸಂತೋಷ, ಸಮೃದ್ಧಿ ಯಾವಾಗಲೂ ಇರುತ್ತದೆ ಜೊತೆಗೆ ನಿಮ್ಮ ಇಡೀ ವರ್ಷ ಉತ್ತಮವಾಗಿರುತ್ತದೆ. ಹಬ್ಬದ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ನಿತ್ಯಕ್ರಮಗಳನ್ನು ಪಾಲಿಸಿ. ದೇವರ ಬಳಿ ಹೂವು, ಧೂಪದ್ರವ್ಯ, ತುಪ್ಪದ ದೀಪ ಇತ್ಯಾದಿ ವಸ್ತುಗಳಿಂದ ದೇವರ ಮನೆಯನ್ನು ಸಿಂಗರಿಸಿ. ಮೊದಲು ಗಣೇಶನನ್ನು ಪೂಜಿಸಿ. ನಂತರ ‘ಓಂ ಬ್ರಹ್ಮನೇ ನಮಃ’ ಮಂತ್ರವನ್ನು 108 ಬಾರಿ ಪಠಿಸಿ. ಈ ದಿನ ಬೇವಿನ ಎಲೆಗಳನ್ನು ಪುಡಿ ಮಾಡಿ, ಅದಕ್ಕೆ ಬೆಲ್ಲವನ್ನು ಸೇರಿಸಿ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ, ವ್ಯಕ್ತಿಯ ಆರೋಗ್ಯವು ವರ್ಷಪೂರ್ತಿ ಉತ್ತಮವಾಗಿರುತ್ತದೆ ಮತ್ತು ದೈಹಿಕ ನೋವಿದ್ದರೂ ಸಹ ದೂರವಾಗುತ್ತದೆ.
ಹಬ್ಬದ ದಿನ ತಪ್ಪಾಗಿಯೂ ಈ ಕೆಲಸಗಳನ್ನು ಮಾಡಬೇಡಿ;
ಯುಗಾದಿ ಹಬ್ಬದ ದಿನವನ್ನು ಅತ್ಯಂತ ಪವಿತ್ರ ದಿನವೆಂದು ಹೇಳಲಾಗುತ್ತದೆ. ಈ ದಿನ ಯಾವುದೇ ರೀತಿಯ ಮಾಂಸಾಹಾರಗಳನ್ನು ಸೇವನೆ ಮಾಡಬೇಡಿ. ಈ ದಿನ ನಿಮ್ಮ ಉಗುರುಗಳನ್ನು ಕತ್ತರಿಸಬೇಡಿ ಅಥವಾ ನಿಮ್ಮ ಗಡ್ಡ, ಮೀಸೆ ಅಥವಾ ಕೂದಲನ್ನು ಕತ್ತರಿಸಬೇಡಿ. ಯುಗಾದಿ ಹಬ್ಬದ ಪೂಜೆಯ ಸಮಯದಲ್ಲಿ ಮಲಗಬೇಡಿ. ಈ ಕೆಲಸಗಳನ್ನು ತಪ್ಪಿ, ಮಾಡಿದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ, ನಿಮ್ಮ ಆಸೆಗಳು ಸಹ ಈಡೇರದೆಯೇ ಉಳಿಯಬಹುದು. ಹಾಗಾಗಿ ಈ ತಪ್ಪುಗಳನ್ನು ಮಾಡಬೇಡಿ.