ಬಳ್ಳಾರಿ:ಅ,09; ಇಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಪ್ರಕಾಶ್ ಅಕಾಲಿಕ ಮರಣ ಹೊಂದಿದ್ದು, ಈವರೆಗೂ ಮೃತನಿಗೆ ಬರಬೇಕಾದ ಪಿಎಫ್ ಇಎಸ್ಐ ಸಿಕ್ಕಿಲ್ಲ ಎಂದು ಆರೋಪಿಸಿ ನಗರದ ವಿಮ್ಸ್ ಆಡಳಿತ ಕಛೇರಿಯ ಮುಂದೆ ಮೃತ ಪ್ರಕಾಶ್ ಕುಟುಂಬಸ್ಥರು ಧರಣಿ ಕುಳಿತದ್ದಾರೆ.
ನನ್ನ ಮಗ ಕಳೆದ ಹಲವು ವರ್ಷಗಳಿಂದ ವಿಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಅಕಾಲಿಕವಾಗಿ ಸಾವನ್ನಪ್ಪಿದ್ದು, ಮಗನಿಗೆ ಬರಬೇಕಾದ ಪಿಎಫ್ ಹಾಗೂ ಇಎಸ್ಐ ಹಣ ಬಂದಿಲ್ಲ, ವಿಮ್ಸ್ ಕಛೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ ಹಾಗಾಗಿ ಬೇಸತ್ತು ಇಂದು ಕುಟುಂಬ ಸಮೇತರಾಗಿ ಬಂದು ವಿಮ್ಸ್ ಕಛೇರಿ ಬಳಿ ಮೌನ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಮೃತ ಪ್ರಕಾಶ್ ನ ತಾಯಿ ವರಲಕ್ಷ್ಮೀ ಹೇಳಿದರು.
ನನ್ನ ಮಗ ದುಡಿದ ಹಣ ನನ್ನ ಮಗನಿಗೆ ಕೊಡಲು ಇವರು ಎರಡು ವರ್ಷದಿಂದ ಸತಾಯಿಸುತ್ತಿದ್ದಾರೆ. ಮಗ ಸತ್ತು ಎರಡು ವರ್ಷವಾಯಿತು. ಎರಡು ವರ್ಷದಿಂದ ವಿಮ್ಸ್ ಕಛೇರಿಗೆ ತಿರುಗಿ ತಿರುಗಿ ಸಾಕಾಗಿದೆ. ವಿಮ್ಸ್ ನಿರ್ದೇಶಕರ ಕಛೇರಿಯಲ್ಲಿ ಕೇಳಿದರೆ, ಪಿಎಫ್ ಕಛೇರಿಯಲ್ಲಿ ಕೇಳಿ ಅಂತಾರೆ ಪಿಎಫ್ ಕಛೇರಿಯಲ್ಲಿ ಕೇಳಿದರೆ ಪಿಎಫ್ ಹಣ ತಿಂಗಳ ತಿಂಗಳು ಕಟ್ಟಿದ್ದರೆ ನಮ್ಮಲ್ಲಿ ಕೊಡ್ತಿವಿ ಹಣ ಕಟ್ಟಿಲ್ಲ ಎಂದು ಪಿಎಫ್ ಕಛೇರಿಯಲ್ಲಿ ಹೇಳ್ತಾರೆ ನಾವು ಯಾರಿಗೆ ಕೇಳಬೇಕೋ ಅರ್ಥವಾಗುತ್ತಿಲ್ಲ ಎಂದು ಮೃತನ ತಾಯಿ ವರಲಕ್ಷ್ಮೀ ತಮ್ಮ ಅಸಹನೆಯನ್ನು ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮೃತ ಪ್ರಕಾಶ್ ನ ತಾಯಿ ವರಲಕ್ಷ್ಮೀ, ರಾಮು, ಜಗನ್, ಮಂಜು, ಪಲ್ಲವಿ, ವೆಂಕಟೇಶ, ಅರುಣಾ, ಲಲಿತಾ, ಹುಸೇನಿ, ಚಂದ್ರಕಳಾ, ರೇಣುಕಮ್ಮ, ಹನುಮಕ್ಕ, ಸಾಯಿ, ಶೇಕ್ಷಾವಲಿ, ಯಶಂತ್, ಪರಶುರಾಮ, ಪ್ರಶಾಂತು, ಶೇಶು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.