ಬೆಂಗಳೂರು (ಜ.26): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಸೇರಿದ್ದು, ಇಂದು ಬಿಜೆಪಿ ಕಚೇರಿಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಹಾಗೂ ಪ್ರೀತಮ್ ಗೌಡ ಸ್ವಾಗತಿಸಿದರು. ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ ಹೂ ಗುಚ್ಛ ನೀಡಿ ಶೆಟ್ಟರ್ ಅವರನ್ನು ನಾಯಕರು ಬರ ಮಾಡಿಕೊಂಡರು.
ಬಿಜೆಪಿ ನಮ್ಮ ಮನೆ. ನಮ್ಮ ತಂದೆಯಿಂದ ಹಿಡಿದು ಎಲ್ಲರೂ ಬಿಜೆಪಿಯಲ್ಲಿ ಇದ್ದೆವು. ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಬರಲು ಮೂಲ ಉದ್ದೇಶ ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಅವರ ನಾಯಕತ್ವಕ್ಕೆ ನಿಷ್ಠೆವಂತರಾಗಿ ಅಳಿಲು ಸೇವೆ ಮಾಡಲು ಬಂದಿದ್ದೇನೆ.
ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ರಾಜೀನಾಮೆ ಪತ್ರ ತಲುಪಿಸಿದರು. ಶೆಟ್ಟರ್ ಆಪ್ತ ಸಹಾಯಕ ಬಂಗೇರಾ ಮೂಲಕ ರಾಜೀನಾಮೆ ಪತ್ರ ತಲುಪಿಸಿದರು. ಕಾಂಗ್ರೆಸ್ ಪ್ರಾಥಮಿಕ ರಾಜೀನಾಮೆ ಸಲ್ಲಿಸಿದ್ದೇನೆ. ದಯವಿಟ್ಟು ರಾಜೀನಾಮೆ ಸ್ವೀಕಾರ ಮಾಡಿ. ಇಲ್ಲಿಯವರೆಗೆ ತಾವು ನನಗೆ ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದರು.