ಬಳ್ಳಾರಿ,ಮಾ. 15: ತಾಲೂಕಿನ ಸಿಂದವಾಳ ಪ್ರೌಢಶಾಲೆ ಹಾಗೂ ಬಾಣಪುರ ಸರಕಾರಿ ಪ್ರೌಢ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ಮತ್ತು ಪೆನ್ನುಗಳು ವಿತರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಕಷ್ಟಪಟ್ಟು ಅಲ್ಲದೇ, ಇಷ್ಟಪಟ್ಟ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಉತ್ತಮ ಅಭ್ಯಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಜೆ .ಟಿ.ಫೌಂಡೇಶನ್ ಅಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುವುದು ಜೀವನ ಪ್ರಮುಖ ಹಂತವಾಗಿದೆ. ಆತ್ಮವಿಶ್ವಾಸದಿಂದ ಚೆನ್ನಾಗಿ ಓದಿ ಪರೀಕ್ಷೆ ಬರೆಯಲು ಮುಂದಾಗಬೇಕು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಅಂದರೆ ಯಾರು ಸಹ ಮನನೊಂದುಕೊಳ್ಳದೆ ಮುಂದೆ ಸಾಗಬೇಕು. ಜೀವನದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಣಕಲ್ಲು ನಾಗಲಿಂಗ ಸ್ವಾಮೀಜಿ, H.M. ಕೋಟ್ರಯ್ಯಸ್ವಾಮಿ ಕೆ.ಮ್ ಪ್ರಕಾಶ್ ಸ್ವಾಮಿ ಬಾಣಪುರ ಸಣ್ಣ ಶಿವರಾಮರೆಡ್ಡಿ. ಶ್ರೀಧರ ಸ್ವಾಮಿ. ಯರಿಸ್ವಾಮಿ,ಜೋಳದರಾಶಿ ತಿಕ್ಕಣ್ಣ, ಚಂದ್ರು, ಮನೋಜ್,ಶೇಕ್ಷವಲಿ ವಣೆನೂರು ಪೂತಯ್ಯ.ಎರ್ರಿಸ್ವಾಮಿ ಹಾಗೂ ಸಿಂದವಾಳ ಮತ್ತು ಬಾಣಪುರ ಶಾಲೆಯ ಮುಖ್ಯೋಪಾದ್ಯ ಯರುಗಳು ಹಾಗೂ ಶಿಕ್ಷಕರುಗಳು ಹಾಗು ವಿದ್ಯಾರ್ಥಿಗಳು ಇನ್ನಿತರರು ಉಪಸ್ಥಿತರಿದರು.