Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

 ಜಗತ್ತಿಗೆ ಆತ್ಮ ಜ್ಞಾನವನ್ನು ನೀಡಿದ ಆದ್ಯ ಸೂತ್ರಕಾರ ಶ್ರೀ ಜಗದ್ಗುರು ರೇಣುಕಾಚಾರ್ಯರು : ತಹಸಿಲ್ದಾರ್ ಹೆಚ್.ವಿಶ್ವನಾಥ್

ಸಿರುಗುಪ್ಪ,ಮಾ.13 : ಜಾತಿ ಮತ ಭಾಷೆ ಪ್ರದೇಶ ಎಂಬ ಎಲ್ಲಾ ಸಂಕುಚಿತ ಸಂಕೋಲೆಗಳನ್ನು ಮೀರಿ ಮಾನವ ಧರ್ಮದ ಉನ್ನತಿಗೆ ಬೇಕಾದ ಸೈದ್ದಾಂತಿಕ ತಳಹದಿಯನ್ನು ಭದ್ರವಾಗಿ ಕಟ್ಟಿಕೊಟ್ಟ ಯಾವುದೇ ಜಾತಿ ಜನಾಂಗಗಳಲ್ಲಿ ಹುಟ್ಟಿದ ವ್ಯಕ್ತಿ ತನ್ನ ಸತ್ಯ ಶುದ್ಧ ಆಚರಣೆಯಿಂದ ಸದ್ಗುರುವಿಗೆ ಶರಣಾಗಿ ಗುರು ನೀಡಿದ ಸಿದ್ಧಾಂತ ಶಿಖಾಮಣಿಯ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ತಹಸಿಲ್ದಾರ್ ಹೆಚ್.ವಿಶ್ವನಾಥ ಅವರು ಅಭಿಪ್ರಾಯಪಟ್ಟರು.

ಸಿರುಗುಪ್ಪ ನಗರದಲ್ಲಿ ಕರ್ನಾಟಕ ಸರ್ಕಾರ ತಾಲೂಕು ಆಡಳಿತ ತಾಲೂಕು ಪಂಚಾಯತ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಗರಸಭೆ ತಾಲೂಕು ವೀರಶೈವ ಲಿಂಗಾಯತ ಸಮಾಜದ ಸಹಭಾಗಿತ್ವದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ಕಾರ್ಯಕ್ರಮವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿ ಸ್ಮರಿಸಿ ನಮಿಸಿ ಅವರು ಮಾತನಾಡುತ್ತಾ ಶ್ರೀ ಜಗದ್ಗುರು ರೇಣುಕಾಚಾರ್ಯರು ನಮ್ಮ ನೆರೆಯ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಕೊಲ್ಲಿ ಪಾಕಿಯ ಸ್ವಯಂ ಭು ಸೋಮೇಶ್ವರ ಲಿಂಗದಿಂದ ಇಂದು ಅವತರಿಸಿದ್ದಾರೆ.

ಆ ದಿನವನ್ನೇ ಪ್ರತಿ ವರ್ಷ ಎಲ್ಲಡೆ ರೇಣುಕಾಚಾರ್ಯರ ಜಯಂತಿ ಯುಗ ಮನೋತ್ಸವವಾಗಿ ಆಚರಿಸಲಾಗುತ್ತದೆ. ಆಧುನಿಕತೆ ವಿಜ್ಞಾನ ಪರಿವರ್ತನೆ ಹೆಸರಿನಲ್ಲಿ ಏನೆಲ್ಲಾ ಬದಲಾವಣೆಗಳಾದರೂ ಮನುಷ್ಯನ ಆತ್ಮ ಜ್ಞಾನವನ್ನು ಹೆಚ್ಚಿಸುವುದಕ್ಕೆ ಇರುವ ಏಕೈಕ ಮಾರ್ಗದರ್ಶನ ಅಂತಹ ದಾರ್ಶನಿಕ ಜಗತ್ತಿನಲ್ಲಿ ಜೀವಾತ್ಮ ಪರಮಾತ್ಮ ಜಗತ್ತು ಪರಶಿವನ ಸರ್ವಜನಾಗಕ್ಕೂ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಕ್ರಾಂತಿಪುರುಷ ರೇಣುಕಾಚಾರ್ಯ ಎಂದು ಅವರು ಕರೆ ನೀಡಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಯನ್ನು ಪ್ಯಾಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬಸವಭೂಷಣ ಸ್ವಾಮಿಗಳು ಸಿರುಗುಪ್ಪ ಹಾಗೂ ಹಳೆಕೋಟೆ ಸಿದ್ಧ ಬಸವ ಸ್ವಾಮಿಗಳು ಅವರ ದಿವ್ಯ ಸಾನಿಧ್ಯದಲ್ಲಿ ನಗರದ ಪ್ರಮುಖ ರಸ್ತೆ ಬೀದಿಗಳಲ್ಲಿ ಸಾಗಿ ಭವ್ಯವಾದ ವಾದ್ಯಗಳೊಂದಿಗೆ ಮೆರವಣಿಗೆ ಶ್ರೀ ರೇಣುಕಾಚಾರ್ಯ ಆಶ್ರಮಕ್ಕೆ ತಲುಪಿತು. ವೇದಿಕೆ ಕಾರ್ಯಕ್ರಮದಲ್ಲಿ ಸ್ವಾಮಿಗಳು ಆಶೀರ್ವಚನ ನೀಡಿದರು.

ಗ್ರೇಡ್- 2 ತಹಶೀಲ್ದಾರ್ ಕುಮಾರಿ ಸತ್ಯಮ್ಮ, ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ. ಮಲ್ಲಿಕಾರ್ಜುನ, ತಾಲೂಕು ಪಂಚಾಯತ್ ವ್ಯವಸ್ಥಾಪಕಿ ಸುಜಾತ ಕೋರಿ, ಕಂದಾಯ ಪರಿವೀಕ್ಷಕ ಮಂಜುನಾಥ, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ರಾಷ್ಟ್ರೀಯ ಸಾಕ್ಷರತಾ ಸದಸ್ಯರು ಸಮಾಜ ಸುಧಾರಕರಾದ ಅಬ್ದುಲ್ ನಬಿ, ನಗರಸಭೆ ಅಧ್ಯಕ್ಷರು ಬಿ. ರೇಣುಕಮ್ಮ ವೆಂಕಟೇಶ್, ಉಪಾಧ್ಯಕ್ಷ ಯಶೋಧ ಚಿದಾನಂದಮೂರ್ತಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಸಹಕಾರಿ ಧುರೀಣ ಚೊಕ್ಕ ಬಸವನ ಗೌಡ, ಹಿರಿಯ ವಕೀಲರು ಬಳ್ಳಾರಿ ಜಿಲ್ಲಾ ಪರಿಷತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಹೆಚ್. ಕೆ. ಮಲ್ಲಿಕಾರ್ಜುನ ಸ್ವಾಮಿ, ವೀರಶೈವ ಮಹಾಸಭಾ ಅಧ್ಯಕ್ಷರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಚನ್ನಬಸವನಗೌಡ, ತಾಲೂಕ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರು ಎನ್.ಜಿ. ಬಸವರಾಜಪ್ಪ,ವೀರಶೈವ ನೌಕರರ ಸಂಘದ ಅಧ್ಯಕ್ಷ ಎಂ ಬಸವನಗೌಡ ,ಕಾರ್ಯದರ್ಶಿ ಎಂ ಬಸವರಾಜಯ್ಯ ಸ್ವಾಮಿ ,ನಗರ ಸಭೆ ಮಾಜಿ ಸದಸ್ಯ ಸುಳವಾಯಿ ಮಲ್ಲಿಕಾರ್ಜುನ, ತೆಕ್ಕಲಕೋಟೆ ಟಿ.ಎಂ.ಕಿರಣ್ ಕುಮಾರ್ ಸ್ವಾಮಿ ಕೋರಿ, ಚನ್ನಬಸಪ್ಪ ಬಳ್ಳಾರಿ ಸಮಾಜ ಮುಖಂಡರು ಕೆ ಎಂ ಪಿ ಪುಟ್ಟಸ್ವಾಮಿ ಎ. ಗುರುಸಿದ್ಧನಗೌಡ ಶಿವ ಕುಮಾರಸ್ವಾಮಿ ಶಾಬಾದಿ ವೀರೇಶಪ್ಪ ಬೆಳಗಲ್ ಮಲ್ಲಿಕಾರ್ಜುನ, ಕುಂಟನಾಳ್ ಶಿವಕುಮಾರಸ್ವಾಮಿ, ತೆಕ್ಕಲಕೋಟೆ ಬಳಿಗಾರು ವೀರೇಶ ಗೌಡ ,ನಗರ ಸಭೆ ನಿವೃತ್ತ ವ್ಯವಸ್ಥಾಪಕ ಎಚ್. ಚಂದ್ರ ಶೇಖರ್, ಶಂಭುಲಿಂಗಯ್ಯ,ಗಾಣದಾಳ್ ಮಠ ,ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು .

 

 

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?