Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಶಿಕ್ಷಣ ಸುದ್ದಿ

ಬಿಐಟಿಎಂ ಮತ್ತು ಕಿಷ್ಕಿಂದಾ ವಿಶ್ವವಿದ್ಯಾಲಯದಿಂದ 4ನೇ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ

ಬಳ್ಳಾರಿ, ಏಪ್ರಿಲ್. 23: ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಬಿಐಟಿಎಂ), ಕಿಷ್ಕಿಂದ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ, 2025ರ ಏಪ್ರಿಲ್ 25 ಮತ್ತು 26ರಂದು ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿoಗ್, ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಕುರಿತಂತೆ 4ನೇ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ (ಐಸಿಡಿಸಿಸಿಇ,2025) ಆಯೋಜಿಸುತ್ತಿದೆ.

ಈ ಸಮ್ಮೇಳನವು ತಂತ್ರಜ್ಞಾನ, ಸಂವಹನ, ವಿತರಣಾ ಕಂಪ್ಯೂಟಿAಗ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಸರ್ಕ್ಯೂಟುಗಳು, ಸಂವಹನ ತಂತ್ರಜ್ಞಾನಗಳು ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನವೀನ ಸಂಶೋಧನೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ಜಾಗತಿಕ ಮಟ್ಟದ ಸಂಶೋಧಕರು, ತಜ್ಞರು, ಶಿಕ್ಷಣಜ್ಞರು ಹಾಗೂ ಕೈಗಾರಿಕಾ ತಜ್ಞರನ್ನು ಒಂದೇ ವೇದಿಕೆಗೆ ತರುತ್ತದೆ. ಸಮ್ಮೇಳನವು ಪ್ರಮುಖ ಶೋಧ ಪ್ರಬಂಧಗಳ ಪ್ರಸ್ತುತಿ, ಆಳವಾದ ತಾಂತ್ರಿಕ ಅಧಿವೇಶನಗಳು, ಕೀ-ನೋಟ್ ಉಪನ್ಯಾಸಗಳು ಹಾಗೂ ಪ್ಯಾನಲ್ ಚರ್ಚೆಗಳ ಮೂಲಕ ವೃತ್ತಿಪರ ಜಾಲಬಂಧನೆಗೆ ಹಾಗೂ ಸಂಶೋಧನಾ ಸಹಯೋಗಕ್ಕೆ ಪೂರಕವಾಗಲಿದೆ.

ಡಾ. ಉಮ್ಮಿ ಅಜೀಜಾ ರಚ್ಮಾವತಿ, ಯುನಿವರ್ಸಿಟಾಸ್ ಯಾರ್ಸಿ, ಇಂಡೋನೇಷ್ಯಾ, ಡಾ. ಲೀನ್ ಕಾರ್ಲೊ ಸ್ಯಾಂಟೋಸ್ ಟೊಲೆಂಟಿನೊ, ಫಿಲಿಪೈನ್ಸ್ ತಾಂತ್ರಿಕ ವಿಶ್ವವಿದ್ಯಾಲಯ, ಮನಿಲಾ, ಡಾ. ಅಬ್ದುಲ್ ಬಾಸಿತ್ ಎ. ದಾರೆಮ್, ನಾರ್ದರ್ನ್ ಬಾರ್ಡರ್ ಯೂನಿವರ್ಸಿಟಿ, ಸೌದಿ ಅರೇಬಿಯಾ, ಡಾ. ಶ್ರೀಕಂಠ ಪಾಲ್, ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಸ್ರಾ, ಡಾ. ಪರಮೇಶಾಚಾರಿ ಬಿ.ಡಿ., ಉಪಾಧ್ಯಕ್ಷರು, ಐಇಇಇ ಬೆಂಗಳೂರು ವಿಭಾಗ ಮತ್ತು ಪ್ರಾಧ್ಯಾಪಕರು, ಎನ್.ಎಂ.ಐ.ಟಿ, ಬೆಂಗಳೂರು ಇವರುಗಳು ಪ್ರಮುಖ ಅತಿಥಿಗಳು ಮತ್ತು ಭಾಷಣಗಾರರಾಗಿ ಆಗಮಿಸುತ್ತಿದ್ದಾರೆ ಎಂದು ಬಿಐಟಿಎಂ ಅಧ್ಯಕ್ಷರು ಹಾಗೂ ಕಿಷ್ಕಿಂದಾ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಯಶವಂತ್ ಭೂಪಾಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮ್ಮೇಳನದ ಆಯೋಜನಾ ಸಮಿತಿಯಲ್ಲಿ ಶ್ರೀ ವೈ.ಜೆ. ಪೃಥ್ವಿರಾಜ್ ಭೂಪಾಲ್, ನಿರ್ದೇಶಕರು, ಬಿಐಟಿಎಂ ಹಾಗೂ ಸಹ-ಕುಲಪತಿ, ಕಿಷ್ಕಿಂದಾ ವಿಶ್ವವಿದ್ಯಾಲಯ, ಪ್ರೊ. ಟಿ.ಎನ್. ನಾಗಭೂಷಣ, ಉಪಕುಲಪತಿ, ಕಿಷ್ಕಿಂದಾ ವಿಶ್ವವಿದ್ಯಾಲಯ, ಡಾ. ಯು. ಈರಣ್ಣ, ಕುಲಸಚಿವ, ಕಿಷ್ಕಿಂದಾ ವಿಶ್ವವಿದ್ಯಾಲಯ, ಡಾ. ವಿ.ಸಿ. ಪಾಟೀಲ್, ಡೀನ್ (ಎಫ್.ಇ.ಟಿ.) ಹಾಗೂ ಅಧ್ಯಕ್ಷರು, ಇಸಿಇ ವಿಭಾಗ, ಡಾ. ಕೆ.ಎಂ. ಸದ್ಯೋಜಾತಾ, ಮುಖ್ಯಸ್ಥರು, ಇಸಿಇ ವಿಭಾಗ, ಬಿಐಟಿಎಂ, ಈ ಪ್ರಮುಖ ಪದಾಧಿಕಾರಿಗಳು ಸಹಭಾಗಿಯಾಗಿದ್ದಾರೆ:

ಈ ಸಮ್ಮೇಳನವು ವಿಶ್ವದಾದ್ಯಂತ ಸಂಶೋಧನಾ ವಲಯದಲ್ಲಿ ದೊಡ್ಡದಾದ ಪ್ರತಿಸ್ಪಂದನವನ್ನು ಹುಟ್ಟುಹಾಕಿದ್ದು, 2172ಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 132 ಪ್ರಬಂಧಗಳು ತಾಂತ್ರಿಕ ಗುಣಮಟ್ಟದ ಆಧಾರದ ಮೇಲೆ ಆಯ್ಕೆಯಾಗಿ, ಪ್ರಸ್ತುತಿಗೆ ಅಣಿಯಾಗಿದೆ. ಸಮ್ಮೇಳನವು ತಾಂತ್ರಿಕ ಜ್ಞಾನ ವಿಸ್ತರಣೆಯ ಜೊತೆಗೆ, ಅನ್ವಯಾತ್ಮಕ ಸಂಶೋಧನೆ ಮತ್ತು ನಾವೀನ್ಯತೆಯತ್ತ ಒತ್ತುವರಿಯೊಂದಿಗೆ ನಡೆದುಕೊಳ್ಳಲಿದೆ ಎಂದು ಡಾ. ಅಬ್ದುಲ್ ಲತೀಫ್ ಹರೂನ್ ಪಿ.ಎಸ್., ಸಹಾಯಕ ಪ್ರಾಧ್ಯಾಪಕರು, ಇಸಿಇ ವಿಭಾಗ, ಬಿಐಟಿಎಂ ಹಾಗೂ ಪ್ರಕಾಶನ ಸಮಿತಿಯ ಸಹನಿಯೋಜಕರು, ಐಸಿಡಿಸಿಸಿಇ,2025 ತಿಳಿಸಿದ್ದಾರೆ.

ಬಿಐಟಿಎಂ ಮತ್ತು ಕಿಷ್ಕಿಂದಾ ವಿಶ್ವವಿದ್ಯಾಲಯಗಳು, ತಂತ್ರಜ್ಞಾನ ಹಾಗೂ ಸಂಶೋಧನೆಯೊಳಗಿನ ಹೊಸ ಆಯಾಮಗಳನ್ನು ಅನ್ವೇಷಿಸಲು ಉತ್ಸುಕರಾದ ಸಂಶೋಧಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ, ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಹೊಸ ಹಾದಿಗಳನ್ನು ಅನ್ವೇಷಿಸುವ ಈ ಅವಕಾಶದಲ್ಲಿ, ಎಲ್ಲ ಭಾಗವಹಿಸುವವರಿಗೂ ಸಹಕಾರ ಮತ್ತು ಬುದ್ಧಿವಂತಿಕೆಯಿAದ ತೊಡಗಿಸಿಕೊಳ್ಳುವಂತೆ ಆತ್ಮೀಯ ಆಹ್ವಾನ ನೀಡಲಾಗಿದೆ ಎಂದು ಬಿಐಟಿಎಂ ಪ್ರಾಂಶುಪಾಲರಾದ ಡಾ. ಯಡವಳ್ಳಿ ಬಸವರಾಜ್ ತಿಳಿಸಿದ್ದಾರೆ.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?