Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ & ಕಾಲೇಜ್‌ನಲ್ಲಿ ವಾರ್ಷಿಕೋತ್ಸವ ಸಮಾರಂಭ

ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೧: ನಗರದ ಡಾ||ರಾಜ್‌ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನಲ್ಲಿ ೧೮ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಆಚರಣೆಯು ಅತ್ಯಂತ ಸಡಗರ ಸಂಭ್ರಮದಿAದ ಜರುಗಿತು. ಸಾಯಂಕಾಲ ೬.೦೦ ಗಂಟೆಗೆ ಪ್ರಾರಂಭವಾದ ಈ ವಾರ್ಷಿಕೋತ್ಸವದ ಕಾರ್ಯಕ್ರಮವು ನಾಡಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭವಾಗಿ ಬಿ.ಪಿ.ಎಸ್.ಸಿ ಕಿಡ್ಸ್ ಅಕಾಡೆಮಿ (ಪೂರ್ವ ಪ್ರಾಥಮಿಕ) ಮಕ್ಕಳ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಗಿ ಈ ಮಕ್ಕಳ ನೃತ್ಯಗಾನವು ಅತ್ಯಂತ ಮನೋಹರವಾಗಿದ್ದು ನೆರೆದಿದ್ದ ಪ್ರೇಕ್ಷಕರನ್ನೆಲ್ಲ ಸಂತೋಷದ ಕಡಲಲ್ಲಿ ಸೇರಿಸಿತು. ನಂತರ ಶಾಲಾ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭವನ್ನು ದೇವಿ ಸರಸ್ವತಿಯ ಪ್ರಾರ್ಥನೆಯನ್ನು ೧೦ನೇ ತರಗತಿಯ ಕುಮಾರಿ ಭಾವನಾ ತಂಡದವರು ಸುಮಧುರವಾಗಿ ಹಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಳ್ಳಾರಿ ನಗರದ ಮಾನ್ಯ ವಿಧಾನಸಭಾ ಸದಸ್ಯರು ನಾರಾ ಭರತ ರೆಡ್ಡಿಯವರು, ಬಳ್ಳಾರಿಯ ನಗರ ಪಾಲಿಕೆಯ ಮಹಾಪೌರರು ಶ್ವೇತಾ, ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್‌ನ ಹಾಗೂ ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ಅಧ್ಯಕ್ಷರಾದ ಡಾ|| ಎಸ್.ಜೆ.ವಿ.ಮಹಿಪಾಲ್‌ರವರು, ಬಿ.ಐ.ಟಿ.ಎಮ್.ನ ನಿರ್ದೆಶಕರು ಹಾಗೂ ಕುಲಪತಿಗಳು ಕಿಷ್ಕಿಂದ ವಿಶ್ವವಿದ್ಯಾಲಯ ಡಾ|| ಯಶವಂತ್ ಭೂಪಾಲ್‌ರವರು, ಟಿ.ಇ.ಹೆಚ್.ಆರ್.ಡಿ. ಟ್ರಸ್ಟಿಗಳೆಲ್ಲರನ್ನು, ಶಾಲೆಯ ಶಿಕ್ಷಕಿ, ಆಯಾಷಾರವರು ಸ್ವಾಗತಿಸಿದರು. ನೆರೆದ ಗಣ್ಯಮಾನ್ಯರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀ ಜೆ.ಅನೀಲ್ ಕುಮಾರ್‌ರವರು ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸುತ್ತಾ ಶಾಲೆಯ ೧೮ ವರ್ಷಗಳ ಸಾಧನೆಗಳನ್ನು ವಿವರಿಸುತ್ತಾ ಸತತವಾಗಿ ೧೨ ವರ್ಷಗಳಿಂದ ೧೦ನೇ ತರಗತಿಯ ಪರೀಕ್ಷೆಯಲ್ಲಿ ೧೦೦% ಫಲಿತಾಂಶ ಬರುತ್ತಿರುವುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಾರಾ ಭರತ್ ರೆಡ್ಡಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾ ಭರತ ರೆಡ್ಡಿಯವರು ತಮ್ಮ ಬಾಲ್ಯದ ಸವಿ ನೆನಪು ಮಾಡಿಕೊಳ್ಳುತ್ತ, ಶಿಕ್ಷಣದ ಮಹತ್ವದ ಬಗ್ಗೆತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ|| ಯಶವಂತ್ ಭೂಪಾಲ್‌ರವರು ಉನ್ನತ ವಿಧ್ಯಭ್ಯಾಸಕ್ಕಾಗಿ ವಿಧ್ಯಾರ್ಥಿಗಳು ಆಯ್ಕೆ ಮಾಡಬಹುದಾದ ವಿವಿಧ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ಹಾಗೂ ಬಿಪಿಎಸ್‌ಸಿ ಶಾಲೆಯ ಅಧ್ಯಕ್ಷರಾದ ಡಾ||ಎಸ್.ಜೆ.ವಿ.ಮಹಿಪಾಲ್‌ರವರು ಮಾತನಾಡುತ್ತಾ ವಿಧ್ಯಾರ್ಥಿಗಳು ಚೆನ್ನಾಗಿ ಓದಿ ಶಾಲೆಗೆ ಹೆಸರು ತರಬೇಕೆಂದು ಹಾರೈಸಿದರು.
ನಂತರ ೨೦೨೦ ರಿಂದ ೨೦೨೩ ರವರೆಗೆ ೧೦ ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಟಿ.ಭುವನ ಚಂದಿರ ೯೮%, ಶರಣ್ಯ ಕೆ.ಎಸ್. ೯೪%, ಶ್ರೇಯಾ.ಎಮ್ ೯೬% ಹಾಗೂ ಸಹನಾ ಶೇಕಡಾ ೯೬% ಅಂಕಗಳಿಸಿ ವಿಧ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು. ಕಳೆದ ವರ್ಷದ ಶಾಲೆಯ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ತರಗಾತಿವಾರು ವಿಧ್ಯಾರ್ಥಿಗಳಿಗೆ ಅಕಾಡೆಮಿಕ್ ಎಕ್ಸೆಲೆನ್ಸ್ ಪಾರಿತೋಷಕವನ್ನು ವಿತರಿಸಲಾಯಿತು. ತದನಂತರ ಶಾಲೆಯ ಮಕ್ಕಳಿಂದ ನಡೆದ ಸಾಂಸ್ಕöÈತಿಕ ಕಾರ್ಯಕ್ರಮಗಳು ಅತ್ಯಂತ ಮನೋರಂಜನೆಯಿAದ ಕೂಡಿದ್ದು, ಈ ವಾರ್ಷಿಕೋತ್ಸವದಲ್ಲಿ ‘ವಸುದೈವ ಕುಟುಂಬಕA’ ಎಂಬ ವಿಷಯದ ಅಧಾರದ ಮೇಲೆ ವಿವಿಧ ದೇಶ,ಭಾಷೆ, ಉಡುಗೆ-ತೊಡುಗೆ,ಸಂಸ್ಕöÈತಿಯನ್ನು ವ್ಯಕ್ತಪಡಿಸುತ್ತಾ ನಾವೆಲ್ಲ ಒಂದೇ ಭೂಮಿ, ಒಂದೇ ಭವಿಷ್ಯ, ಒಂದೇ ಪ್ರಕೃತಿ ವಿಷಯಾಧಾರಿತ ನೃತ್ಯವನ್ನು, ನಾಟಕಗಳನ್ನು, ಹಾಡುಗಳನ್ನು ಅಧ್ಭುತವಾಗಿ ಪ್ರದರ್ಶಸಿದರು. ಕೊನೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿಯರಾದ ಶಿಲ್ಪಾರವರು ವಂದನಾರ್ಪಣೆಯನ್ನು ನೆರವೇರಿಸಿದರು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?