Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಡಿಸಿಸಿ ಅಧ್ಯಕ್ಷ  ಅಲ್ಲಂ ಪ್ರಶಾಂತರಿಗೆ ಜನ್ಮದಿನದ ಶುಭಕೋರಿದ ಕಾಂಗ್ರೆಸ್ ನಾಯಕರು

ಬಳ್ಳಾರಿ,ಅ.21: ನಗರದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್ ಅವರ ನಿವಾಸದ ಕಚೇರಿಯಲ್ಲಿ ತಮ್ಮ ಜನ್ಮದಿನವನ್ನು ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಮುಂಚೂಣಿ ಘಟಕದ ಅಧ್ಯಕ್ಷರು ಕಾರ್ಯಕರ್ತರು ಮತ್ತು ಹಿರಿಯ ಮುಖಂಡರ ಸಮ್ಮುಖದಲ್ಲಿ ಆಚರಿಸಿಕೊಂಡರು.

ಇದೇ ವೇಳೆ ಪಕ್ಷದ ನಾಯಕರು ಅಲ್ಲಂ ಪ್ರಶಾಂತ್ ಅವರ ಕುರಿತು ಮಾತನಾಡಿ ಅಲ್ಲಂ ಕುಟುಂಬ ಎಂದರೆ ಇಡೀ ಬಳ್ಳಾರಿ ಜಿಲ್ಲೆಗೆ ಒಂದು ಮಾದರಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೆಪಿಸಿಸಿ ಮಾಜಿ ಅಧ್ಯಕ್ಷರಾದ ವೀರಭದ್ರಪ್ಪ ಬಳ್ಳಾರಿಯಲ್ಲಿ ಪಕ್ಷದ ಸಂಘಟನೆ ಪಕ್ಷವನ್ನು ಬೆಳೆಸಿದ್ದಾರೆ. ಅಂತ ಒಂದು ಕುಟುಂಬದಲ್ಲಿ ಜನಿಸಿದ ಅಲ್ಲಂ ಪ್ರಶಾಂತವರು ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರಾಗಿ, ರೂಪನಗುಡಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸರ್ವಜನರ ಮತದಿಂದ ಆಯ್ಕೆಯಾಗಿ ಅಲ್ಲಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ನಂತರ ಪ್ರಸ್ತುತ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರಾಗಿ ನೇಮಕವಾದ ಅಲ್ಲಂ ಪ್ರಶಾಂತ್ ಅವರು ಜಿಲ್ಲೆಯಲ್ಲಿ ತನ್ನದೇ ಆದಂತ ಹೆಸರು ಮಾಡಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಮತ್ತು ರಾಜ್ಯದ ಎಲ್ಲಾ ಸಚಿವರ ಶಾಸಕರು ಮತ್ತು ಪಕ್ಷದ ನಾಯಕರ ಅಭಿಮಾನವನ್ನು ಗಳಿಸಿಕೊಂಡು ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷದ ಸಿದ್ಧಾಂತಗಳ ಮೂಲಕ ನಡೆದುಕೊಂಡು ಜಿಲ್ಲೆಯಲ್ಲಿ ಎಲ್ಲಾ ಹಿರಿಯ ಮುಖಂಡರ ಕಾರ್ಯಕರ್ತರ ಪ್ರೀತಿಗೆ ಪಾತ್ರರಾಗಿ ಪ್ರತಿಯೊಬ್ಬರನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಹಿರಿಯ ಮುಖಂಡರ ತನಕ ಪಕ್ಷದ ನಿಷ್ಠಾವಂತರಿಗೆ ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಉತ್ತಮವಾದ ಸ್ಥಾನ ಮಾನಳನ್ನು ದೊರಕಿಸಿಕೊಡುವಲ್ಲಿ ಬೆಂಬಲ ನೀಡುವಂತಹ ನಾಯಕರು ಬಳ್ಳಾರಿ ಜಿಲ್ಲೆಯ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್ ಅವರು ಒಬ್ಬರಾಗಿದ್ದಾರೆ.                                                                                                             

ಅವರ ತಂದೆ ಅಲ್ಲಂ ವೀರಭದ್ರಪ್ಪ ಅವರು ಮಾಡಿದಂತ ಅಪಾರವಾದ ಸೇವೆ, ಜನಪರ ಕೆಲಸ, ಜಿಲ್ಲೆಗಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಅಲ್ಲಂ ವೀರಭದ್ರಪ್ಪ ಅವರ ಆದರ್ಶಗಳನ್ನು ಇಟ್ಟುಕೊಂಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮುಂದಿನ ದಿನದಲ್ಲಿ ಪಕ್ಷಕ್ಕಾಗಿ ದುಡಿದು ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಮುಂದೆ ಸಾಗಬೇಕೆಂದು ಪಕ್ಷದ ಮುಖಂಡರು ಜನಪ್ರೀತಿನಿಧಿಗಳು ಜನ್ಮದಿನದ ಸಂಭ್ರಮದಲ್ಲಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಗರ್ ಹುಕುಂ ಸಮಿತಿ ಅಧ್ಯಕ್ಷ ತಿಮ್ಮನಗೌಡ, ರೈಸ್ ಆಫ್ ಹ್ಯುಮಾನಿಟಿ ಟ್ರಸ್ಟ್ ಅಧ್ಯಕ್ಷರು ಮತ್ತು ಪಾಲಿಕೆಯ ಸದಸ್ಯ ಆಸಿಫ್ ಭಾಷಾ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಈರನಗೌಡ, ಪಂಚ ಗ್ಯಾರಂಟಿಗಳ ತಾಲೂಕು ಅಧ್ಯಕ್ಷ ಗೋನಾಳ ನಾಗಭೂಷಣಗೌಡ, ಜಿಲ್ಲಾ ಉಪಾಧ್ಯಕ್ಷ ಸಂಗನಕಲ್ ವಿಜಯ್ ಕುಮಾರ್, ಡಿಸಿಸಿ ಮಹಿಳಾ ಅಧ್ಯಕ್ಷ ಎಂಎಸ್ ಮಂಜುಳಾ, ಹಿರಿಯ ಮುಖಂಡರಾದ ಪಿ.ಜಗನ್, ವೀರಸೇನ ರೆಡ್ಡಿ, ಮಲ್ಲಿಕಾರ್ಜುನಗೌಡ, ಬಸರಕೋಡು ಗಾದಿಲಿಂಗಪ್ಪ, ಕಾಂಗ್ರೆಸ್ ಮುಖಂಡರುಗಳಾದ ಲೋಕೇಶ್, ಧನಂಜಯ ಹಮಾಲ್, ಉಮೇಶ್ ಗೌಡ ಎಸ್ ಜೆ.ಕೋಟೆ, ಅಸುಂಡಿ ಹನುಮೇಶ್, ಗಂಗಾಧರ, ನರೇಂದ್ರ, ಕಪ್ಪಗಲ್ಲು ಓಂಕಾರಪ್ಪ, ಲಿಂಗಾರೆಡ್ಡಿ, ಅಸುಂಡಿ ಹೊನ್ನೂರ ಸ್ವಾಮಿ, ಮೋಕ ರಾಮಣ್ಣ, ರುದ್ರ, ಮಹಿಳಾ ಮುಖಂಡರಾದ ಬಿಎ ಮಲ್ಲೇಶ್ವರಿ, ಗೌಸಿಯಾ ಬಿ, ರೆಡಿ ಪಾರ್ಕ್ ಮಮತಾ, ನಗರಕೆರೆ ಗೀತಾ, ರೆಹನಾ ಸೇರಿದಂತೆ ಕಾರ್ಯಕರ್ತರು ಅಭಿಮಾನಿ ಬಳಗದವರು ಭಾಗವಹಿಸಿದ್ದರು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?