Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಹಂಪಿ ಐತಿಹ್ಯ, ಗತ ವೈಭವ ಮರುಕಳಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು


ಹೊಸಪೇಟೆ(ವಿಜಯನಗರ).ಫೆಬ್ರವರಿ.02 : ಹಂಪಿ ಉತ್ಸವದ ಇತಿಹಾಸ, ವಿಜಯನಗರ ಸಾಮ್ರಾಜ್ಯದ ಗತವೈಭವ ಹಾಗೂ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಗಾಯಿತ್ರಿ ಪೀಠದ ವೇದಿಕೆಯ ಮೇಲೆ ಮರುಕಳಿಸುವಂತೆ ಹಂಪಿ ಉತ್ಸವ-2024 ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ಉತ್ಸವಕ್ಕೆ ಚಾಲನೆ ದೊರೆತ ನಂತರ, ಶುಕ್ರವಾರ ಮುಖ್ಯವೇದಿಕೆಯಲ್ಲಿ, ಸಂಗೀತ ನಿರ್ದೇಶಕ ಸಾಧುಕೋಕಲ ತಂಡದಿಂದ ರಸಮಂಜರಿ ಪ್ರಸ್ತುತ ಪಡಿಸಿದರು.
ಸಾಧುಕೋಕಿಲ ತಂಡದ ಸಂಗೀತ ಸಂಯೋಜಕ ಪವೀಣ್‌ ಡಿ ರಾವ್ ಸಂಯೋಜಿಸಿದ ಹಂಪಿ ಉತ್ಸವ ಗೀತೆ ಗಾಯನಕ್ಕೆ ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು. ಪ್ರೇಕ್ಷಕರು ಕರತಾಡನದಿಂದ ಸಂತಸ ವ್ಯಕ್ತಪಡಿಸಿದರು. ಸಂಗೀತ ಮಾಂತ್ರಿಕ ಸಾಧು‌ಕೋಕಿಲ ಹಂಪಿ ಉತ್ಸವಕ್ಕೆ ಈ ಗೀತ ಸಂಯೋಜನೆ ರಾಷ್ಟ್ರಗೀತೆ ಇದ್ದಂತೆ ಎಂದು ಪ್ರಶಂಸೆ ವ್ಯಕ್ತಪಿಡಿದರು. ಪವೀಣ್‌ ಡಿ ರಾವ್ ಅನುಪಸ್ಥತಿಯಲ್ಲಿ ಅವರ ಕಲಾತಂಡಕ್ಕೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೇಣು ವಾದ‌ನಗಳ ಸಮ್ಮಿಳನದ ಸಂಗೀತ ಸಂಯೋಜನೆ
ಖ್ಯಾತ ಕೊಳಲು ವಾದಕ ಪಂಡಿತ ಪ್ರವೀಣ್ ಗೋಳ್ಕಿಂಡಿ ನೇತೃತ್ವದ 22 ಕಲಾವಿದರು, ಸಪ್ತ ಸ್ವರಗಳನ್ನು ಪ್ರತಿನಿಧಿಸುವ ವೇಣು ವಾದನದ ಸಮ್ಮಿಳದ ಸಂಗೀತ ಸಂಯೋಜನೆ ಕಾರ್ಯಕ್ರಮವನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು.
ಕೊಳಲು ವಾದಕರ ಶಿಸ್ತುಬದ್ದ ಮಧುರ ವೇಣು ವಾದನದ ಸಂಯೋಜನೆ ಹಾಗೂ ಗಾಯಕರ ಸಪ್ತಸ್ವರದ ಗಾಯನ, ಹಂಪಿಯ ಕಲ್ಲು ಬಂಡೆಗಳಲ್ಲಿ ಪ್ರತಿಧ್ವನಿಸಿ, ತುಂಗಾ ನದಿಯ ಜುಳು ಜುಳು ಕಲರವದಲ್ಲಿ ಮಿಂದು, ಪಂಪಾಪತಿ ವಿರೂಪಾಕ್ಷನ ಪದತಲಕ್ಕೆ ಎರೆಗಿತು. ಸುಂದರ ಲಲನೆಯರು ಸಂಗೀತಕ್ಕೆ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕೂಚುಪುಡಿ, ಯಕ್ಷಗಾನ ಹಾಗೂ ಪಾಶ್ವಿಮಾತ್ಯ ನೃತ್ಯಗಳನ್ನು ಮಾಡಿದರು. ಸಭಿಕರು ಮಂತ್ರಮುಗ್ಧರಾದರು. ಅಪರ ಜಿಲ್ಲಾಧಿಕಾರಿ ಅನುರಾಧ ತಂಡವನ್ನು ಸನ್ಮಾನಿಸಿದರು.
ಚುಮುಚಮು ಚಳಿಗೆ ಗಿಚ್ಚಿಗಿಲಿ ಕಚಗುಳಿ
ಕನ್ನಡ ಪ್ರಖ್ಯಾತ ವಾಹಿನಿ‌ ಕಲರ್ಸ್ ಕನ್ನಡದ ಗಿಚ್ಚಿಗಿಲಿ ತಂಡ ಹಂಪಿ ಉತ್ಸವ ಕಂಣ್ತುಂಬಿಕೊಳ್ಳಲು ನೆರದ ಪ್ರಕ್ಷಕರಿಗೆ ಚುಮುಚಮು ಚಳಿಯ ನುಡುವೆ ಹಾಸ್ಯದ ಕಚಗುಳಿ ನೀಡಿತು.
ಬೆಂಗಳೂರಿನ ಡ್ರೀಮ್ಸ್ ಈವೆಟ್ಸ್ ಅ್ಯಂಡ್ ಫಾಷನ್ ತಂಡ ರಂಗಿತರಂಗ, ಉಳಿದವರು ಕಂಡಂತೆ ಹಾಗೂ ಕಾಂತಾರ ಚಲನಚಿತ್ರ ಗೀತೆಗಳ ಒಟ್ಟು ಸಮ್ಮಿಳನದ ನೃತ್ಯವನ್ನು ಪ್ರಸ್ತುತ ಪಡಿಸಿ, ಕ್ಷಣಕಾಲ ಪ್ರೇಕ್ಷಕರಿಗೆ ಮಧ್ಯರಾತ್ರಿ ಕತ್ತಲ್ಲಿನಲ್ಲಿ ರೋಮಾಂಚನ ಉಂಟುಮಾಡಿದರು. ತಹಶೀಲ್ದಾರ್ ವಿಶ್ವಜಿತ್ ಮೆಹ್ತಾ ಹಾಗೂ ಶ್ವೇತ ಕಲಾವಿದರನ್ನು ಸನ್ಮಾನಿಸಿದರು.

ಸಂದೀಪ್ ವಶಿಷ್ಠ ತಂಡ ವೀಣಾ ( ಸಿತಾರ) ವಾದನ ಸಿಂಪೋನಿ ರಾತ್ರಿ ತಂಗಾಳಿಯಂತೆ ಪ್ರೇಕ್ಷರ ಕವಿಯಲ್ಲಿ ನುಸುಳಿ ಮಿಡಿಯಿತು. ವೀಣಾ ವಾದನದ ಜೊತೆಗೆ ಆರಂಭದಲ್ಲಿ ಕಲಾವಿದರು ದೈವಭಕ್ತಿ ಮೇಳಿಸುವಂತೆ ನೃತ್ಯ ಪ್ರದರ್ಶಸಿದರು. ನಂತರ ವಿಜಯನಗರ ಅರಸರ ಆಸ್ಥಾನದ ಗಾಂಭೀರ್ಯತೆ ಸಭಿಕರಲ್ಲಿ ಮೂಡುವಂತೆ ಭರತನಾಟ್ಯದೊಂದಿಗೆ ವೀಣಾ ವಾದನ ಮೂಡಿಬಂದಿತು. ಇದಕ್ಕೆ ತಬಲ, ಕೊಳಲು, ಕೀಬೋರ್ಡ್‌, ವೈಯಲಿನ್ ಕಲಾವಿದರು ಸಾಥ್ ನೀಡಿದರು. ಕೊನೆಯಲ್ಲಿ ಬಣ್ಣದ ಹಬ್ಬ ಹೋಳಿ ಸಡಗರ ವೀಣೆಗಳ ತಂತಿಗಳಲ್ಲಿ ಕಂಪಿಸಿತು. ಕಲಾವಿದರಿಗೆ ಉಪವಿಭಾಗಧಿಕಾರಿ ಮಹಮದ್ ಅಕ್ರಂ ಷಾ ಸನ್ಮಾನಿಸಿದರು. ಭಾನುಮತಿ ಹಾಗೂ ಬಸವರಾಜ್.ಕೆ ನಿರೂಪಿಸಿದರು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?