Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಒಳಮೀಸಲಾತಿಗಾಗಿ ದಲಿತರ ವಿಂಗಡಣೆ !! ಎಡಗೈ, ಬಲಗೈ ಸಮುದಾಯಗಳಿಗೆ ಸಮಾನ ಮೀಸಲು - ಯಾವ ವರ್ಗಕ್ಕೆ ಏನು ಲಾಭ?

ಬೆಂಗಳೂರುಪರಿಶಿಷ್ಟ ಜಾತಿಗಳ (ಎಸ್‌ಸಿ) ಸುಮಾರು ಮೂರು ದಶಕಗಳ ಒಳ ಮೀಸಲು ಹಕ್ಕೊತ್ತಾಯ, ನಿರೀಕ್ಷೆ ಕೊನೆಗೂ ಸಾಕಾರಗೊಂಡಿದೆ. ಪರಿಶಿಷ್ಟ ಜಾತಿಗಳನ್ನು ಮೂರು ವರ್ಗೀಕರಣ ಮಾಡಿ ಲಭ್ಯವಿರುವ ಒಟ್ಟು ಶೇ.17 ಎಸ್‌ಸಿ ಮೀಸಲು ಪ್ರಮಾಣವನ್ನು ಬಲಗೈ (ಛಲವಾದಿ) ಶೇ.6, ಎಡಗೈ (ಮಾದಿಗ) ಶೇ.6 ಹಾಗೂ ಸ್ಪೃಶ್ಯ ಜಾತಿಗಳಿಗೆ ಶೇ.5 ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ತೆಲಂಗಾಣ ಬಳಿಕ ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಜಾರಿ ಮಾಡಿದ 2ನೇ ರಾಜ್ಯ ಕರ್ನಾಟಕವಾಗಿದೆ. ಜತೆಗೆ ಪರಿಶಿಷ್ಟರಿಗೆ ‘ಒಳ ಮೀಸಲು ಗ್ಯಾರಂಟಿ’ಯನ್ನೂ ನೀಡಿದಂತಾಗಿದೆ.

ನ್ಯಾ.ನಾಗಮೋಹನದಾಸ್‌ ಏಕಸದಸ್ಯ ಆಯೋಗವು ಕಳೆದ ಆ.4 ರಂದು ಸಲ್ಲಿಸಿದ್ದ ವರದಿಯಲ್ಲಿಪರಿಶಿಷ್ಟ 101 ಜಾತಿಗಳನ್ನು 5 ವರ್ಗೀಕರಣ ಮಾಡಿ ಮೀಸಲು ಹಂಚಿಕೆ ಮಾಡಿತ್ತು. ಈ ವರದಿ ಶಿಫಾರಸು ಆಧರಿಸಿ ಮಂಗಳವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿವಿಶೇಷ ಸಂಪುಟ ಸಭೆಯಲ್ಲಿಸುದೀರ್ಘವಾಗಿ ಚರ್ಚಿಸಿ, ಜಾತಿಗಳ ವರ್ಗೀಕರಣವನ್ನು ಮೂರಕ್ಕೆ ಕುಗ್ಗಿಸಲಾಯಿತು.

ಯಾವ ವರ್ಗಕ್ಕೆ ಏನು ಲಾಭ?

- ಮೂರು ವರ್ಗೀಕರಣದಿಂದ ಎಡಗೈಗೆ ಬಲ

ಒಳಮೀಸಲಿಗೆ ಪ್ರಮುಖ ಹಕ್ಕುದಾರರಾಗಿದ್ದ ಪರಿಶಿಷ್ಟ ಎಡಗೈ (ಮಾದಿಗ) ವರ್ಗೀಕರಣದಲ್ಲಿ18 ಜಾತಿಗಳನ್ನು ತರಲಾಗಿದೆ. ಈ ವರ್ಗೀಕರಣದಲ್ಲಿಒಟ್ಟು ಜನಸಂಖ್ಯೆ 36,69,246 (ಶೇ.34.91). ಈ ವರ್ಗಕ್ಕೆ ನ್ಯಾ. ನಾಗಮೋಹನದಾಸ್‌ ಆಯೋಗದ ಶಿಫಾರಸ್ಸಿನಂತೆ ಶೇ.6 ಮೀಸಲು ಪ್ರಮಾಣವನ್ನು ಕಲ್ಪಿಸಲಾಗಿದೆ.

- ಬಲಗೈಗೆ ಸಮಾಧಾನ

ಪರಿಶಿಷ್ಟ ಬಲಗೈ (ಛಲವಾದಿ) ಸಮುದಾಯಕ್ಕೆ ನ್ಯಾ.ನಾಗಮೋಹನದಾಸ್‌ ಆಯೋಗ ಶಿಫಾರಸ್ಸು ಮಾಡಿದ್ದ ಶೇ.5 ಮೀಸಲನ್ನು ಶೇ.6 ಕ್ಕೆ ಏರಿಕೆ ಮಾಡಲಾಗಿದೆ. ಅಂದರೆ, ಆಯೋಗವು ಶೇ.1 ಮೀಸಲು ಪ್ರಮಾಣ ನಿಗದಿಯೊಂದಿಗೆ 5ನೇ ಪ್ರವರ್ಗದಲ್ಲಿಗುರುತಿಸಿದ್ದ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಈ ಮೂರು ಜಾತಿಗಳನ್ನು ಬಲಗೈ ವರ್ಗೀಕರಣಕ್ಕೆ ಸೇರ್ಪಡೆ ಮಾಡಲಾಗಿದೆ. ಬಲಗೈ ಪ್ರವರ್ಗದಲ್ಲಿಗುರುತಿಸಲಾಗಿರುವ 17 ಉಪಜಾತಿಗಳ ಗುಂಪಿಗೆ ಈ ಮೂರು ಜಾತಿಗಳನ್ನೂ ತರಲಾಗಿದೆ.

- ಸ್ಪೃಶ್ಯ ಜಾತಿಗಳಿಗೆ ತುಸು ಕಡಿಮೆ

ಪರಿಶಿಷ್ಟರಲ್ಲೇ ಸ್ಪೃಶ್ಯ ಜಾತಿಗಳಾಗಿ ಗುರುತಿಸಿಕೊಂಡಿರುವ ಲಂಬಾಣಿ, ಭೋವಿ, ಕೊರಮ, ಕೊರಚ ಈ ನಾಲ್ಕು ಜಾತಿಗಳಿಗೆ ಶೇ.4 ಮೀಸಲು ಪ್ರಮಾಣವನ್ನು ನ್ಯಾ. ನಾಗಮೋಹನದಾಸ್‌ ಆಯೋಗ ಶಿಫಾರಸ್ಸು ಮಾಡಿತ್ತು. ಪರಿಶಿಷ್ಟರಲ್ಲಿ28,34,939 ಜನಸಂಖ್ಯೆ (ಶೇ.26.97) ಇದೆ ಎಂದು ಗುರುತಿಸಲಾದ ಈ ಪ್ರವರ್ಗಕ್ಕೆ 59 ಸಣ್ಣ ಜಾತಿಗಳನ್ನು ಸೇರ್ಪಡೆ ಮಾಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ. ಅಂದರೆ, ಒಟ್ಟು 5,22,099 (ಶೇ.4.97) ಜನಸಂಖ್ಯೆ ಇರುವ ಈ ಸಮುದಾಯಗಳಿಗೆ ನ್ಯಾ.ನಾಗಮೋಹನದಾಸ್‌ ನಿಗದಿ ಮಾಡಿದ್ದ ಶೇ.1 ಮೀಸಲನ್ನು ಇದಕ್ಕೆ ಸೇರಿಸಿ ಶೇ.5 ನಿಗದಿ ಮಾಡಲಾಗಿದೆ.

ಸಂಪುಟಕ್ಕೆ ಇಲಾಖೆ ಪ್ರಸ್ತಾವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ಜಾತಿವಾರು ವರ್ಗೀಕರಣವನ್ನು ಪರಿಷ್ಕರಿಸಿ, ಪರಿಶಿಷ್ಟ ಜಾತಿಯಲ್ಲಿಒಳ ಮೀಸಲಾತಿ ಕಲ್ಪಿಸುವುದು ಸೂಕ್ತ ಎಂದು ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆಯೋಗ ಸಲ್ಲಿಸಿರುವ ವರದಿಯ ಕುರಿತು ಚರ್ಚಿಸಲು ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಗೆ ಇಲಾಖೆ ಸಲ್ಲಿಸಿರುವ ರಹಸ್ಯ ಟಿಪ್ಪಣಿಯಲ್ಲಿಈ ಬಗ್ಗೆ ಉಲ್ಲೇಖವಿತ್ತುಎಂದು ತಿಳಿದುಬಂದಿದೆ.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?