Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಶರಣ ಸಂಸ್ಕೃತಿ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಿದ ಗಣ್ಯರು

ಸುವರ್ಣವಾಹಿನಿ ಸುದ್ದಿ
ಕೊಪ್ಪಳ.ಕುಕನೂರ,ಜ,೨೨: ಜಾತಿ ರಹಿತ ಸಮಾಜ ನಿರ್ಮಾಣವಾಗಬೇಕು, ಸರ್ವರನ್ನೂ ಅಪ್ಪಿಕೊಳ್ಳುವ ಹೃದಯ ನಮ್ಮದಾಗಬೇಕು ಅಂದಾಗ ಮಾತ್ರ ಮನುಷ್ಯತ್ವ ಉಳಿಯಲು ಸಾಧ್ಯ ಎಂದು ಯಲಬುರ್ಗಾ ಧಗ್ರಾಯೋ ಅಧಿಕಾರಿ ಸತೀಸ ಎಸ್ ಹೇಳಿದರು
ಅವರು ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಪೂಜ್ಯರ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಪ್ರಥಮ ಶರಣ ಸಂಸ್ಕೃತಿ ಉತ್ಸವ ೨೦೨೪ ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಪೂಜ್ಯರು ಮಹೀಳಾ ಸಮಾವೇಶ ಮೂಲಕ ಮಹೀಳಾ ಕಲ್ಯಾಣದಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ, ಶರಣ ಸಂಸ್ಕೃತಿಯನ್ನ ಎಲ್ಲಾರಲ್ಲೂ ಮೂಡುವಂತೆ ಮಾಡುವ ಮೂಲಕ ಜಾತಿ ಮತ ಪಂಥವೆನ್ನದೆ ಸರ್ವರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುವುದನ್ನ ಕಂಡಾಗ ಅತ್ಯಂತ್ಯ ಸಂತೋಷವೆನಿಸುತ್ತದೆ ಎಂದರು.
ಕರಬಸಯ್ಯ ಬಿನ್ನಾಳ ಮಾತನಾಡಿ ನಮ್ಮಂಥ ಸಾಮಾನ್ಯರನ್ನೂ ಕೂಡ ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಅಧ್ಯಕ್ಷರನ್ನಾಗಿ ಮಾಡಿ ನಮ್ಮಲ್ಲಿ ಕೂಡ ಶರಣರ ಬಗ್ಗೆ ಚಿಂತನೆ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟ ಪೂಜ್ಯರ ಕಾರ್ಯ ಶ್ಲಾಘನೀಯ, ನಾವುಗಳು ಬಸವಾದಿ ಶರಣರ ಸಂದೇಶಗಳನ್ನ ನಮ್ಮಲ್ಲಿ ಅಳವಡಿಸಿಕೊಳ್ಳಬೇಕು, ಬಸವ ಪರಂಪರೆಯನ್ನ ಬೆಳೆಸುವ ಕಾರ್ಯ ನಡೆಯಬೇಕು ಮತ್ತು ನಮ್ಮವರನ್ನ ನಾವುಗಳು ಅಪ್ಪಿಕೊಂಡು ಸಾಗಬೇಕು, ನಮ್ಮೂರಿನ ಮಠ ಎಂಬ ಸ್ವಾಭಿಮಾನ ನಮ್ಮಲ್ಲಿ ಬಂದಾಗ ಮಾತ್ರ ಮಠ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಪೂಜ್ಯ ಡಾ ಮಹಾದೇವ ಮಹಾಸ್ವಾಮಿಗಳು ಮಾತನಾಡಿ ೧೨ ನೇ ಶರಮಾನದಲ್ಲಿ ಗುರು ಬಸವಣ್ಣನವರು ಜಾತಿ, ವರ್ಣ, ವರ್ಗ ಮತ್ತು ಲಿಂಗ ಭೇದವನ್ನ ಅಳಿಸಿ ಸರ್ವ ಸಮಾನತೆಯನ್ನ ಮೂಡಿಸುವ ಕಾರ್ಯ ಮಾಡಿದ್ದಾರೆ, ಆದರೆ ಇಂದಿನ ಕಾಲದಲ್ಲಿ ಒಬ್ಬೋಬ್ಬ ಶರಣರನ್ನ ಜಾತಿಗೆ ಸೀಮಿತ ಮಾಡುತ್ತೀರುವುದು ನೋವಿನ ಸಂಗತಿ, ಬಸವಣ್ಣ ಎಲ್ಲಾ ಶರಣ ಶರಣೆಯರನ್ನ ಒಗ್ಗೂಡಿಸಿಕೊಂಡು ಬದುಕು ನಡೆಸಿದರು, ಅಂತಹ ಬಸವಣ್ಣನವರನ್ನ ಕೂಡ ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ, ಮತ್ತು ಕರ್ನಾಟಕ ಘನ ಸರ್ಕಾರ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷನೆ ಮಾಡಿದ್ದಕ್ಕೆ ಅಭಿನಂದನೆಗಳು ಎಂದರು. ಪ್ರಾಸ್ತವಿಕವಾಗಿ ಉತ್ಸವ ಸಮಿತಿ ಸಂಚಾಲಕ ರಾಮನಗೌಡ ಹುಚನೂರ ಮಾತನಾಡಿದರು.ಶರಣ ಸಂಸ್ಕೃತಿ ಉತ್ಸವ ಅಂಗಾವಾಗಿ ಹಮಾಲರಿಗೆ, ಪೌರ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಹೋಳಿಗೆ ಊಟದ ವ್ಯವಸ್ಥೆಯನ್ನ ಮಾಡಿಸಲಾಗಿತ್ತು.
ಈ ಸಂಧರ್ಭದಲ್ಲಿ ವೀರಯ್ಯ ತೋಂಟದಾರ್ಯಮಠ, ಹನುಂತಪ್ಪ ಹಂಪನಾಳ, ಪ್ರಭು ಶಿವಸಿಂಪರ ಈರಪ್ಪ ಮ್ಯಾಳಿ, ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕಾಳಿ, ನಿರ್ಮಲ ಕಳ್ಳಿಮಠ, ಶಿವಬಾಯಿ ಯಕ್ಲಾಸಪೂರ, ಜಂಭಣ್ಣ ರುದ್ರಾಕ್ಷೀ, ಶಿವಲಿಂಗಯ್ಯ ಶಿರೂರಮಠ, ರಾಮನಗೌಡ ಹುಚನೂರ, ಪ್ರಕಾಶ ಬಂಡಿ, ಮಲ್ಲಯ್ಯ ರ‍್ಯಾವಣಿಕಿ, ಮಲ್ಲಪ್ಪ ಬೆಣಕಲ್, ನಿಂಗಪ್ಪ ಗೋರ್ಲೆಕೊಪ್ಪ ಮತ್ತು ಇತರರು ಇದ್ದರು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?