ಬಳ್ಳಾರಿ:ಫೆ,27- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕದ 2026-27 ನೇ ಸಾಲಿನ ಸದಸ್ಯತ್ವಕ್ಕೆ ಅರ್ಹ ಸದಸ್ಯರಿಂದ ಅರ್ಜಿ ಆಹ್ವಾನಿಸಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ ತಿಳಿಸಿದ್ದಾರೆ.
ಅರ್ಜಿಗಳನ್ನು ಮಾ.5 ಮತ್ತು 6 ರಂದು ನಗರದ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಅರ್ಜಿ ನೀಡಿ ತೆಗೆದುಕೊಳ್ಳಲಿದೆ.
ಅರ್ಜಿಗಳನ್ನು ಸದಸ್ಯರಾಗಬಯಸುವವರು ಸ್ವತಃ ಭರ್ತಿ ಮಾಡಬೇಕು. ಪ್ರತಿ ಸದಸ್ಯರಿಗೆ 510 ರೂ ಶುಲ್ಕವಿದೆ. ಅರ್ಜಿ ಜೊತೆ್ಎ ಆಧಾರ್, ಈ ವರ್ಷ ಕೆಲಸ ಮಾಡುತ್ತಿರುವ ಸಂಸ್ಥೆಯ ನೇಮಕಾತಿಪತ್ರ. ಅಥವಾ ಐಡಿ ಕಾರ್ಡ್ ಇರಬೇಕು. ಹೊಸದಾಗಿ ಸದಸ್ಯರಾಗಲು ಬಯಸುವವರು ಕನಿಷ್ಟ ಎರೆಡು ವರ್ಷದ ಅನುಭವದ ದಾಖಲಾತಿ. ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಸಹ ನೀಡಬೇಕು. ಅಗತ್ಯ ಬಿದ್ದರೆ ಕಿರು ಪರೀಕ್ಷೆ ನಡೆಸಲಿದೆ.
ಅಪೂರ್ಣ ಅರ್ಜಿಗಳನ್ನು ತಿರಸ್ಕೃತ ಮಾಡಲಿದೆ. ನಿಗಧಿತ ದಿನದ ನಂತರ ಅರ್ಜಿ ಸ್ವೀಕರಿಸಲ್ಲ. ತಾಲೂಕು ಸಂಘಗಳು ಸಭೆ ನಡೆಸಿ ಅರ್ಕಿ ಸ್ವೀಕರಿಸಿ ಅನುಮೋದನೆಗೊಳಿಸಿ ಜಿಲ್ಲಾ ಸಮಿತಿಗೆ ಮಾ.6 ರೊಳಗೆ ನೀಡಬೇಕು.
ಹೆಚ್ಚಿನ ಮಾಹಿತಿಗೆ ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ 9448757765 , ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್. ಬಸವರಾಜ್ 9480536199 ಇವರನ್ನು ಸಂಪರ್ಕಿಸಿ.