Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಬಳ್ಳಾರಿಯಲ್ಲಿ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆಗೆ ಚಾಲನೆ ನೀಡಿದ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್

ಬಳ್ಳಾರಿ, ಮಾ.27: ಜನಪ್ರಿಯ ಕಣ್ಣಿನ ಆಸ್ಪತ್ರೆಗಳ ಸರಣಿ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಇತ್ತೀಚೆಗೆ ಪ್ರಥಮ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆಯನ್ನು ಕರ್ನಾಟಕದ ಬಳ್ಳಾರಿಯಲ್ಲಿ ಉದ್ಘಾಟಿಸಿದೆ.

ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಶಾಸಕ ನಾರಾ ಭರತ್ ರೆಡ್ಡಿ, ಡೆಪ್ಯುಟಿ ಕಮಿಷನರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ಪ್ರ ಶಾಂತ್ ಕುಮಾರ್ ಮಿಶ್ರಾ, ಐಎಎಸ್, ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಕೆ. ಪಿ ರವಿ ಕುಮಾರ್ ಹಾಗೂ ಬಳ್ಳಾರಿಯ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವೈ ರಮೇಶ್ ಬಾಬು ಹಾಜರಿದ್ದರು.

ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ಸ್ ಸಮೂಹದ ಹಿರಿಯ ಅಧಿಕಾರಿಗಳಾದ ಕರ್ನಾಟಕ ಕ್ಲಿನಿಕಲ್ ಸರ್ವೀಸಸ್ನ ಪ್ರಾದೇಶಿಕ ಮುಖ್ಯಸ್ಥ ಡಾ. ಶ್ರೀನಿವಾಸ ರಾವ್, ಬಳ್ಳಾರಿ ಕ್ಲಿನಿಕಲ್ ಸರ್ವೀಸಸ್ನ ಮುಖ್ಯಸ್ಥ ಡಾ. ಮಹೇಶ್ ನಾರಾಯಣ್ ಕೂಡಾ ಹಾಜರಿದ್ದರು.

ಬಳ್ಳಾರಿಯ ಕನ್ಣಿನ ಆಸ್ಪತ್ರೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 28 ಕೇಂದ್ರಗಳು ತೆರೆದಂತಾಗಿದೆ. ಅಲ್ಲದೆ, ವಿಶ್ವದೆಲ್ಲೆಡೆ 220 ಕ್ಕೂ ಹೆಚ್ಚು ಸೌಲಭ್ಯಗಳನ್ನು ಆಸ್ಪತ್ರೆ ಸರಣಿಯು ಹೊಂದಿದೆ. ಹೊಸ ಆಸ್ಪತ್ರೆಯು ಉನ್ನತ ಗುಣಮಟ್ಟದ ಮತ್ತು ಬಳ್ಳಾರಿ ಸುತ್ತಮುತ್ತಲಿನ ರೋಗಿಗಳಿಗೆ ಕಣ್ಣಿನ ಆರೈಕೆ ಸೌಲಭ್ಯವನ್ನು ಒದಗಿಸುತ್ತದೆ.ವಿವಿಧ ಕಣ್ಣಿನ ಅನಾರೋಗ್ಯಗಳಿಗೆ ಹೊಸ ಆಸ್ಪತ್ರೆಯು ಒಂದು ಪ್ರಮುಖ ತಾಣವಾಗಿರಲಿದ್ದು, ಸ್ಫರ್ಧಾತ್ಮಕ ದರದಲ್ಲಿ ಅತ್ಯಾಧುನಿಕ ಚಿಕಿತ್ಸೆಗಳನ್ನು ಒದಗಿಸುತ್ತದೆ.

ನಾರಾ ಭರತ್ ರೆಡ್ಡಿ ಮಾತನಾಡುತ್ತಾ, “ಇಂದಿನ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಒತ್ತಡದ ಮಟ್ಟದಿಂದಾಗಿ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿದೆ. ಕಣ್ಣಿನ ಆರೈಕೆ ವಿಷಯದಲ್ಲಿ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಒಂದು ವಿಶ್ವಾಸಾರ್ಹ ಹೆಸರಾಗಿದೆ ಮತ್ತು ಈ ಮೈಲಿಗಲ್ಲಿನ ಒಂದು ಭಾಗವಾಗುವುದಕ್ಕೆ ನನಗೆ ಹೆಮ್ಮೆಯಾಗಿದೆ. ಎಲ್ಲರೂ ತಮ್ಮ ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಮತ್ತು ಮೊದಲ ಬಾರಿಗೆ ಅನಾನುಕೂಲ ಕಂಡುಬಂದಾಗಲೇ ವೈದ್ಯಕೀಯ ನೆರವನ್ನು ಪಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ" ಎಂದರು.

ಬಳ್ಳಾರಿಯ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ನ ಕ್ಲಿನಿಕಲ್ ಸರ್ವೀಸಸ್ನ ಮುಖ್ಯಸ್ಥ ಡಾ. ಮಹೇಶ್ ನಾರಾಯಣ್ ಮಾತನಾಡುತ್ತಾ, “ಕ್ಲಿನಿಕಲ್ ಪರಿಣಿತಿಯು ನಮ್ಮ ಸೇವೆಗಳ ಪ್ರಮುಖ ಭಾಗವಾಗಿದೆ. ಹೊಸ ಆಸ್ಪತ್ರೆಯಲ್ಲಿ ಇತ್ತೀಚಿನ ತಂತ್ರಜ್ಞಾನಗಳಿವೆ. ಡಿಜಿಟಲ್ ಸ್ಲಿಟ್ ಲ್ಯಾಂಪ್, ಕ್ಯಾಟರ್ ಯಾಕ್ಟ್ ಫಾಕೋ, ಐಸಿಎಲ್ ಮತ್ತು ಮೆಡಿಕಲ್ ರೆಟಿನಾ ಹಾಗೂ ಮಾಡ್ಯುಲರ್ ಆಪರೇಶನ್ ಥಿಯೇಟರ್ ಕೂಡಾ ಇದರಲ್ಲಿದೆ. ಈ ಆಸ್ಪತ್ರೆಯು ಸರಾಗ ಮತ್ತು ಸುಧಾರಿತ ರೋಗಿ ಅನುಭವವನ್ನು ಒದಗಿಸುತ್ತದೆ. ಇದರಲ್ಲಿ ಅತ್ಯಂತ ಕುಶಲ ನೇತ್ರತಜ್ಞರು ಇರುತ್ತಾರೆ. ಅಲ್ಲದೆ, ಆಪ್ಟೋಮೆಟ್ರಿಸ್ಟ್ಗಳು ಮತ್ತು ರೋಗಿ ಆರೈಕೆ ವೃತ್ತಿಪರರೂ ಕೂಡಾ ಇರುತ್ತಾರೆ. ಬಳ್ಳಾರಿ ಜನರಿಗೆ ಅತ್ಯಾಧುನಿಕ ಅನ್ವೇಷಣೆಗಳನ್ನು ಒದಗಿಸುವುದಕ್ಕೆ ನಾವು ಬದ್ಧವಾಗಿದ್ದೇವೆ" ಎಂದಿದ್ದಾರೆ.

ಕರ್ನಾಟಕ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ನ ಕ್ಲಿನಿಕಲ್ ಸರ್ವೀಸಸ್ ಪ್ರಾದೇಶಿಕ ಮುಖ್ಯಸ್ಥರಾದ ಡಾ. ಶ್ರೀನಿವಾಸ ರಾವ್ ಮಾತನಾಡುತ್ತಾ," ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ, ನಮ್ಮ ರೋಗಿಗಳಿಗೆ ವಿಶ್ವ ದರ್ಜೆಯ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಈ ಹೊಸ ಆಸ್ಪತ್ರೆಯು ಬಳ್ಳಾರಿಯಲ್ಲಿ ಸುಧಾರಿತ ಕಣ್ಣಿನ ಆರೈಕೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದೇ ನಮ್ಮ ಗುರಿ" ಎಂದಿದ್ದಾರೆ.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?