Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸಿ; ಚಿತ್ರನಟ ದೊಡ್ಡಣ್ಣ

ಕಾರಟಗಿ : ಮಕ್ಕಳಿಗೆ ವಿದ್ಯೆ ಎಲ್ಲರೂ ಕಲಿಸುತ್ತಾರೆ ಪ್ರಮುಖವಾಗಿ ಪಾಲಕರು ಪೋಷಕರು ಶಾಲಾ ಶಿಕ್ಷಕರು ಸಂಸ್ಕಾರವನ್ನು ಕಲಿಸಬೇಕು. ವ್ಯವಹಾರಕ್ಕೆ ಆಂಗ್ಲಭಾಷೆಯನ್ನು ಬಳಸಿ, ಮಾತೃಭಾಷೆ ಕನ್ನಡವನ್ನು ಬೆಳೆಸಿ ಎಂದು ಚಲನಚಿತ್ರ ಹಿರಿಯ ನಟ ದೊಡ್ಡಣ್ಣ ಅವರು ಹೇಳಿದರು.

ಪಟ್ಟಣದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದಾದ ಶ್ರೀ ಶಾರದಾ ಇಂಟರ್ನ್ಯಾಷನಲ್ ಶಾಲೆಯ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳ ಕೈಗೆ ಮೊಬೈಲ್ ನೀಡಬೇಡಿ, ಜ್ಞಾನವನ್ನು ತುಂಬುವ ಸಂಸ್ಕಾರವನ್ನು ಬೆಳೆಸುವ ಹಿರಿಯರಿಗೆ ಗೌರವಿಸುವ ಪುಸ್ತಕವನ್ನು ನೀಡಿ ಮಕ್ಕಳನ್ನು ಸಂಸ್ಕೃತ ರನ್ನಾಗಿ ಮಾಡಿ ಎಂದರು.

ಪ್ರಪಂಚದಲ್ಲಿಯೇ ಇತಿಹಾಸವನ್ನು ಹೊಂದಿರುವ ಏಕೈಕ ಭಾಷೆ ಕನ್ನಡವಾಗಿದೆ. ಕನ್ನಡವನ್ನು ಕಲಿಯಬೇಕು ಕಲಿಸಬೇಕು, ಬೆಳೆಸಬೇಕು. ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಶಿಕ್ಷಣ ಸಂಸ್ಥೆಯು ಜ್ಞಾನವನ್ನು ತುಂಬುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರವನ್ನು ತುಂಬುತ್ತಿದೆ ವಿದ್ಯಾಸಂಸ್ಥೆಗೂ ಮುದ್ದು ಮಕ್ಕಳಿಗೂ ಆ ದೇವರು ಒಳ್ಳೆಯದನ್ನು ಕರುಣಿಸಲಿ ಇನ್ನೂ ದೊಡ್ಡ ಮಟ್ಟಕ್ಕೆ ಸಂಸ್ಥೆಯನ್ನು ಕೊಂಡೊಯ್ಯಲಿ ಎಂದರು.

ಅಂಕಲಿಮಠದ ಮಹಾಶರಣ ವೀರಭದ್ರೇಶ್ವರ ಸ್ವಾಮಿಗಳು ಮಾತನಾಡಿ ವಿದ್ಯಾ ಸಂಸ್ಥೆ ವಿಧಿಯನ್ನು ನೀಡಿದರೆ ತಂದೆ-ತಾಯಿಗಳಾದ ತಾವು ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಹಿರಿಯರಿಗೆ ಗೌರವಿಸುವ ಗುಣವನ್ನು ಭಕ್ತಿ ಮತ್ತು ಶ್ರದ್ಧೆಯನ್ನು ಕಲಿಸಬೇಕಿದೆ. ಮಮ್ಮಿ ಡ್ಯಾಡಿ ಎನ್ನುವ ಪರಿಸ್ಥಿತಿಯಲ್ಲಿ ಅಪ್ಪ ಅವ್ವ ಎನ್ನುವ ಪದಗಳು ಮರೆಯಾಗುತ್ತಿವೆ. ಹಿರಿಯರಿಂದ ದೊರಿತ ಸಂಸ್ಕೃತಿ ಸಂಸ್ಕಾರ ಮಕ್ಕಳಲ್ಲೂ ಕಲಿಸುವುದು ಪಾಲಕರಿಗೆ ಅಗತ್ಯವಾಗಿದೆ. ಕನ್ನಡ ಭಾಷೆ ಸುಂದರವಾದ ಕೇಳಲು ಮಾತನಾಡಲು ಇಂಪಾದ ಪದಗಳನ್ನು ಹೊಂದಿದ ಏಕೈಕ ಭಾಷೆ. ಕಾವೇರಿಯಿಂದ ಗೋದಾವರಿ ವರೆಗೂ ವಿಶಾಲವಾದ ಪ್ರಾಂತ್ಯವನ್ನು ಹೊಂದಿದೆ. ಅನ್ಯ ಭಾಷೆಗಳು ವ್ಯವಹಾರಕ್ಯಾದರೆ ತಾಯಿ ಭಾಷೆ ಶಾಶ್ವತವಾಗಿರುತ್ತದೆ ಎಂದು ಹಿತ ನುಡಿಗಳ ನುಡಿದರು.

ಈ ಸಂದರ್ಭದಲ್ಲಿ ಶ್ರೀ ಶಾರದಾ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶಾರದಾ ಮಲ್ಲಿಕಾರ್ಜುನ, ಕಾರ್ಯದರ್ಶಿ ಮಲ್ಲಿಕಾರ್ಜುನ ತೊಂಡಿಹಾಳ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಪ್ಪ ಉಪ್ಪನಾಳ, ಉಪಾಧ್ಯಕ್ಷರಾದ ಪ್ರಬಣ್ಣ ಉಪ್ಪನಾಳ, ಮುಖಂಡರಾದ ಶಿವರೆಡ್ಡಿ ನಾಯಕ, ಬಸವರಾಜ ಪಗಡದಿನ್ನಿ, ಬಸವರಾಜ ನೀರಗಂಟಿ, ಅಮರೇಶ ಕುಳಗಿ, ಶಿವಶರಣೇಗೌಡ, ಬಾಪುಗೌಡ, ಗಂಗಾಧರಗೌಡ, ಶರಣಪ್ಪ ಪರ್ಕಿ, ಪಾಲಾಕ್ಷಪ್ಪ ಕೆಂಡದ್, ಪಾಲಕ ಪೋಷಕರು, ವಿದ್ಯಾರ್ಥಿಗಳು, ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವರ್ಗ, ವಾಹನ ಚಾಲಕರು, ಸಿಬ್ಬಂದಿ ವರ್ಗ ಇದ್ದರು.

 

 

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?