Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ: 59 ಜನರ ವಿರುದ್ಧ FIR ದಾಖಲು

ಬಾಗಲಕೋಟೆ, ಫೆ.18: ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರುಷರು, ಮಹಿಳೆಯರು ಸೇರಿ 59 ಜನರ ವಿರುದ್ಧ ಬಾಗಲಕೋಟೆ ತಾಲೂಕಿನ ಕಲಾದಗಿ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.​ ರಂಭಾಪುರಿ ಶ್ರೀಗಳ ಭಕ್ತರ ಕಡೆಯಿಂದ ದೂರು ಹಿನ್ನೆಲೆ ಪೊಲೀಸ್​ ಅಧಿಕಾರಿಗಳು ಎಫ್​ಐಆರ್​ ದಾಖಲು ಮಾಡಿದ್ದಾರೆ. ವಿವಾದ ಕೋರ್ಟ್​​ನಲ್ಲಿರುವಾಗ ಕಾನೂನು ಸುವ್ಯವಸ್ಥೆ ಹಾಳು, ಶಾಂತಿ ಕದಡುವ ಉದ್ದೇಶದ ಗಲಾಟೆ ಮತ್ತು ಶ್ರೀಗಳಿಗಾದ ಅವಮಾನ ಎಲ್ಲವನ್ನೂ ಪರಿಗಣಿಸಿ ಎಫ್​​ಐಆರ್​ ದಾಖಲಿಸಲಾಗಿದೆ. ​ಘಟನೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಬಾಗಲಕೋಟೆ ಎಸ್​ಪಿ ಅಮರನಾಥ ರೆಡ್ಡಿ ಹೇಳಿದ್ದಾರೆ.

ಅದು ನೂರಾರು ವರ್ಷಗಳ ಇತಿಹಾಸ ಹೊಂದಿರೋ ಮಠ. ಎಂಟು ವರ್ಷದ ಹಿಂದೆ ಸ್ವಾಮೀಜಿ ಲಿಂಗೈಕ್ಯರಾಗಿದ್ದರು. ತದನಂತರ ರಂಭಾಪುರಿ ಶ್ರೀಗಳು ಓರ್ವ ಸ್ವಾಮೀಜಿಯನ್ನ ಪೀಠಾಧಿಪತಿಯಾಗಿ ನೇಮಿಸಿದ್ದರು. ಆದರೆ ಭಕ್ತರು ವಿರೋಧಿಸಿದ್ದರು. ವಿವಾದ ಕೋರ್ಟ್​​​​ನಲಿದ್ದರೂ ಭಕ್ತರ ಆಕ್ರೋಶ ಸ್ಫೋಟವಾಗಿತ್ತು.

ಜಿಲ್ಲೆಯ ಕಲಾದಗಿಯಲ್ಲಿರುವ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದಲ್ಲಿ ನಿನ್ನೆ ಭಕ್ತರು ಆಕ್ರೋಶಗೊಂಡಿದ್ದರು. ಇದಕ್ಕೆ ಕಾರಣ ಮಠದ ಪೀಠಾಧಿಪತಿ ಆಯ್ಕೆ ವಿವಾದ. ಮಠದ ಪೀಠಾಧಿಪತಿಯಾಗಿ ಗಂಗಾಧರ ಶ್ರೀಗಳನ್ನು ನೇಮಕ ಮಾಡಿದ್ದಕ್ಕೆ ಭಕ್ತರು ರೊಚ್ಚಿಗೆದ್ದಿದ್ದರು.

ಪೀಠಾಧಿಪತಿಯಾಗಿ ಆಯ್ಕೆ ವಿವಾದ ಸದ್ಯ ಕೋರ್ಟ್​​​ನಲ್ಲಿದೆ. ಹೀಗಾಗಿ, ಮಠದ ದುರಸ್ತಿ, ಮಠದ ಆಸ್ತಿ ಸಾಗುವಳಿ‌ ಮಾಡುವಂತಿಲ್ಲ ಅಂತ ಕೋರ್ಟ್ ಆದೇಶಿಸಿತ್ತು. ಆದರೆ ಗಂಗಾಧರ ಸ್ವಾಮೀಜಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಭಕ್ತರು ಆಕ್ರೋಶಗೊಂಡಿದ್ದರು.

ಚಪ್ಪಲಿ ತೂರಿದ ಉದ್ರಿಕ್ತ ಮಹಿಳೆ 

ಸಂಘರ್ಷದ ನಡುವೆ ಉದಗಟ್ಟಿ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಕಾರ್ಯಕ್ರಮವಿತ್ತು. ಇದರಲ್ಲಿ ಪಾಲ್ಗೊಳ್ಳಲು ರಂಭಾಪುರಿ ಶ್ರೀ ಕಲಾದಗಿ ಮಾರ್ಗವಾಗಿ ಹೋಗುತ್ತಿದ್ದರು. ಈ ವೇಳೆ ಭಕ್ತರು ಶ್ರೀ ಕಾರನ್ನ ತಡೆಯಲು ಯತ್ನಿಸಿ, ಧಿಕ್ಕಾರ ಕೂಗಿದ್ದರು. ಉದ್ರಿಕ್ತ ಮಹಿಳೆ ಶ್ರೀಗಳ ಕಾರಿನತ್ತ ಚಪ್ಪಲಿ ತೂರಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಭಕ್ತರು ಚಪ್ಪಲಿ ತೂರಿಲ್ಲ ಎಂದ ರಂಭಾಪುರಿ ಶ್ರೀ

ಕಲಾದಗಿ ಮಠ 50 ಎಕರೆ ಆಸ್ತಿ, ಹೈಸ್ಕೂಲ್, ಕಾಲೇಜು ಸೇರಿ 25 ಕೋಟಿ ರೂ. ಬೆಲೆ ಬಾಳುತ್ತೆ. ಇದನ್ನ ಹೊಡೆಯುವ ಹುನ್ನಾರ ನಡೀತಿದೆ ಅಂತ ಭಕ್ತರು ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರಂಭಾಪುರಿ ಶ್ರೀಗಳು, ವಿವಾದ ಕೋರ್ಟ್​ನಲ್ಲಿದೆ. ಏನನ್ನೂ ಮಾತಾಡಲ್ಲ. ಆದರೆ ನಮ್ಮ ಕಾರಿನ ಭಕ್ತರು ಚಪ್ಪಲಿ ತೂರಿಲ್ಲ. ಹೂ ಹಾಕಿ ಸ್ವಾಗತಿಸಿದ್ದಾರೆ ಎಂದು ಹೇಳಿದ್ದಾರೆ.

 

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?