Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಆರೋಗ್ಯ ಮತ್ತು ಫಿಟ್ನೆಸ್

ಬೇಸಿಗೆಯಲ್ಲಿ ನಿಮ್ಮ ಆಹಾರಕ್ರಮ ಹೀಗಿದ್ದರೆ ನೀವೇ ಆರೋಗ್ಯವಂತರು

ಫೆಬ್ರವರಿ ತಿಂಗಳ ಕೊನೆಯಲ್ಲಿ ಬಿಸಿಲಿನ ಝಳ ಜೋರಾಗಿದೆ. ಹೀಗೆ ಮುಂದುವರೆದರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಈ ಸುಡು ಬಿಸಿಲು ಹೆಚ್ಚಳವಾಗುವ ಸಾಧ್ಯತೆಯೇ ಹೆಚ್ಚು. ಉರಿ ಬಿಸಿಲು ಹಾಗೂ ಸೆಕೆಯನ್ನು ತಾಳಲಾರದೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ನೀರು ಹೆಚ್ಚಾಗಿ ಸೇವಿಸುವ ಜೊತೆಗೆ ಆಹಾರ ಪದಾರ್ಥಗಳ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಬೇಸಿಗೆಯ ಸಮಯದಲ್ಲಿ ನಿಮ್ಮ ಆಹಾರ ಕ್ರಮವು ಹೀಗಿದ್ದರೆ ಆರೋಗ್ಯಯುತವಾಗಿರಬಹುದು.

ಬೇಸಿಗೆ ಇನ್ನು ಆರಂಭವಾಗಿಲ್ಲ. ಆದರೆ ಸೂರ್ಯನು ತನ್ನ ಪ್ರಖರತೆಯನ್ನು ತೋರಿಸುತ್ತಿದ್ದಾನೆ. ಬೆಳಗ್ಗೆ ಎಂಟು ಗಂಟೆಯ ಬಳಿಕ ಹೊರಗೆ ಹೋಗುವುದೇ ಬೇಡ ಎನ್ನುವಷ್ಟರ ಮಟ್ಟಿಗೆ ಬಿಸಿಲು ನೆತ್ತಿಯನ್ನು ಸುಡುತ್ತದೆ. ಈ ಸಮಯದಲ್ಲಿ ಆರೋಗ್ಯವು ಕೈ ಕೊಡುವುದು ಸಹಜ. ಸಿಕ್ಕ ಸಿಕ್ಕ ಆಹಾರಗಳನ್ನು ಸೇವಿಸಿದರೆ ಅನಾರೋಗ್ಯಕ್ಕೂ ದಾರಿ ಮಾಡಿಕೊಟ್ಟಂತೆ ಆಗುತ್ತದೆ, ಹೀಗಾಗಿ ದೇಹವನ್ನು ತಂಪಾಗಿಸಿರುವುದು ಮುಖ್ಯ. ಈ ಸಮಯದಲ್ಲಿ ದೇಹಕ್ಕೆ ನೀರಿನ ಅಂಶ ಹೆಚ್ಚಿರುವ ಆಹಾರಗಳು ಅಗತ್ಯವಾಗಿ ಬೇಕಾಗುತ್ತದೆ.

  1. ನೀರು ಕುಡಿಯಿರಿ : ಬೇಸಿಗೆಯಲ್ಲಿ ಬಿಸಿಲಿನ ಝಳವನ್ನು ಸಹಿಸಿಕೊಳ್ಳುವುದು ಕಷ್ಟ. ಹೊರಗಡೆ ಸುತ್ತಾಡಿಕೊಂಡು ಬಂದರೆ ಸಾಕು ಬಾಯಾರಿಕೆಯಾಗುತ್ತದೆ. ಬಿಸಿಲಿನ ತಾಪಕ್ಕೆ ದೇಹವು ನೀರು ಬೇಕಾಗುತ್ತದೆ. ಈ ಸಮಯದಲ್ಲಿ ತಣ್ಣನೆಯ ನೀರು ಅಥವಾ ತಂಪು ಪಾನೀಯಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
  2. ಟೊಮೆಟೊ : ವಿಟಮಿನ್ ಸಿ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿರುವ ಈ ಟೊಮೊಟೊ ಬೇಸಿಗೆಗಾಲಕ್ಕೆ ಉತ್ತಮ ಆಹಾರವಾಗಿದೆ. ನಿಯಮಿತವಾಗಿ ಸೇವಿಸುವುದರಿಂದ ಅನಾರೋಗ್ಯ ಸಮಸ್ಯೆಯಿಂದ ದೂರವಿಡುತ್ತದೆ.
  3. ಕಲ್ಲಂಗಡಿ : ಇದು ಬೇಸಿಗೆ ಕಾಲದಲ್ಲಿ ಹೆಚ್ಚು ಜನರು ಸೇವಿಸುವ ಹಣ್ಣುಗಳಲ್ಲಿ ಒಂದು. ನೀರಿನ ಅಂಶ ಹೆಚ್ಚಾಗಿರುವ ಕಾರಣ ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ಚರ್ಮ ಸಂಬಂಧಿ ರೋಗಗಳನ್ನೂ ದೂರ ಮಾಡಿ ನಿಮ್ಮನ್ನು ಸದಾ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.
  4. ಕಿತ್ತಳೆ : ಕಿತ್ತಳೆಹಣ್ಣಿನಲ್ಲಿ ಸಿಹಿ ಸಿಟ್ರಸ್ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು ನೀರಿನ ಪ್ರಮಾಣವು ಹೇರಳವಾಗಿದೆ. ಇದು ದೇಹದಲ್ಲಿನ ನಿರ್ಜಲೀಕರಣ ನಿವಾರಣೆ ಮಾಡಿ ಅನಾರೋಗ್ಯ ಸಮಸ್ಯೆಯಿಂದ ಕಾಪಾಡುತ್ತದೆ.
  5.  ಮೊಸರು : ದೇಹವನ್ನು ತಂಪಾಗಿರಿಸಲು ಬೇಸಿಗೆಯ ಉತ್ತಮ ಆಹಾರ ಪದಾರ್ಥಗಳಲ್ಲಿ ಮೊಸರು ಕೂಡ ಒಂದು. ಹೆಚ್ಚಿನವರು ಮಧ್ಯಾಹ್ನದ ಊಟಕ್ಕೆ ಮೊಸರನ್ನು ಸೇವಿಸುತ್ತಾರೆ. ಇದು ದೇಹದ ಉಷ್ಟಾಂಶ ಸಮತೋಲನದಲ್ಲಿರಿಸಲು ಸಹಾಯಕವಾಗಿದೆ.
  6. ಎಳ ನೀರು : ಬಿಸಿಲಿನ ಝಳ ತಾಳಲಾರದೆ ತಂಪು ಪಾನೀಯವನ್ನು ಹೆಚ್ಚು ಸೇವಿಸಲು ಇಷ್ಟ ಪಡುತ್ತಾರೆ. ಆದರೆ ರಾಸಾಯನಿಕಗಳಿಂದ ಕೂಡಿದ ತಂಪು ಪಾನೀಯಗಳಿಗಿಂತ ಈ ಎಳನೀರನ್ನು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಬಹುದು.
  7. ಪುದೀನಾ : ದೇಹವನ್ನು ತಂಪಾಗಿಸುವ ಮತ್ತು ರಿಫ್ರೆಶ್ ಮಾಡುವ ಗುಣಗಳನ್ನು ಹೊಂದಿರುವ ಪುದೀನಾ ಬೇಸಿಗೆಯ ಹೇಳಿ ಮಾಡಿಸಿದ ಆಹಾರವಾಗಿದೆ. ಪುದೀನಾ ನಿಂಬು ಜ್ಯೂಸ್ ಅಥವಾ ಪುದೀನಾ ಚಹಾವನ್ನು ಮಾಡಿ ತಣ್ಣಗಾದ ಬಳಿಕ ಕುಡಿಯುವುದರಿಂದ ಆರೋಗ್ಯ ಲಾಭವನ್ನು ಪಡೆಯಬಹುದು.
  8. ಹಸಿರು ತರಕಾರಿ : ಹಸಿರು ತರಕಾರಿಗಳು ದೇಹಕ್ಕೆ ಅಗತ್ಯವಾಗಿ ಬೇಕು. ಬೇಸಿಗೆಯಲ್ಲಿ ಇದರ ನಿಯಮಿತ ಸೇವನೆಯಿಂದ ಆರೋಗ್ಯಯುತರಾಗಿರಬಹುದು. ಮೂಲಂಗಿ, ಕ್ಯಾರೆಟ್, ಸೌತೆಕಾಯಿ ಇನ್ನಿತ್ತರ ತರಕಾರಿಗಳನ್ನು ಸೇರಿಸಿ ಸಲಾಡ್ ತಯಾರಿಸಿ ಸೇವಿಸಿದರೆ ದೇಹವನ್ನು ತಂಪಾಗಿರಿಸಬಹುದು. ಅದಲ್ಲದೇ ದೇಹದ ನಿರ್ಜಲೀಕರಣವನ್ನು ಕಡಿಮೆ ಮಾಡುವ ಶಕ್ತಿ ಈ ಆಹಾರಕ್ಕಿದೆ.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?