Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಷ್ಟ್ರೀಯ ಸುದ್ದಿ

ಪಿಎಂ ಕಿಸಾನ್ ಹಣ ಈ ಬಾರಿ ಬಂದಿಲ್ಲವಾ? ಇಲ್ಲಿ ವಿಚಾರಿಸಿ

ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ ಸರ್ಕಾರ 16 ಕಂತುಗಳಲ್ಲಿ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದೆ. ಇಲ್ಲಿಯವರೆಗೆ ರೈತರಿಗೆ ನೀಡಲಾಗಿರುವ ಒಟ್ಟಾರೆ ಮೊತ್ತ 3 ಲಕ್ಷ ಕೋಟಿ ರೂಗೂ ಹೆಚ್ಚು. ಇಕೆವೈಸಿ ಅಪ್​ಡೇಟ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಇಕೆವೈಸಿ ಮಾಡಿಸಿಯೂ ಹಣ ಬಂದಿಲ್ಲದೇ ಇದ್ದರೆ ದೂರು ಕೊಡಲು ಅವಕಾಶಗಳಿವೆ.

ಬೆಂಗಳೂರು, ಫೆಬ್ರುವರಿ 29: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬುಧವಾರ 16ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಮಹಾರಾಷ್ಟ್ರದ ಯವತ್ಮಾಲ್​ನಲ್ಲಿ ರಿಮೋಟ್ ಬಟನ್ ಒತ್ತುವುದರ ಮೂಲಕ ಅವರು (PM Narendra Modi) 21,000 ರೂಗೂ ಹೆಚ್ಚು ಹಣವನ್ನು 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಹೆಚ್ಚಿನ ಮಂದಿಗೆ ನಿನ್ನೆಯೇ 2,000 ರೂ ಹಣ ತಲುಪಿರಬಹುದು. ಕೆಲವರಿಗೆ ತುಸು ವಿಳಂಬವಾಗಬಹುದು. ಒಂದು ವೇಳೆ ನೀವು ಯೋಜನೆಯಲ್ಲಿ ನೊಂದಾಯಿಸಿದ್ದರೂ ಹಣ ಬರುತ್ತಿಲ್ಲ ಎಂದಲ್ಲಿ ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಇಕೆವೈಸಿ ಅಪ್​ಡೇಟ್ ಆಗಿರದಿದ್ದರೆ, ಅಥವಾ ಕೆವೈಸಿ ದಾಖಲೆ ಸರಿಯಾಗಿ ಹೊಂದಾಣಿಕೆ ಆಗಿಲ್ಲದೇ ಇದ್ದರೆ ಹಣ ಬಂದಿಲ್ಲದೇ ಇರಬಹುದು.

ಒಂದು ವೇಳೆ ನೀವು ಯೋಜನೆಯ ಫಲಾನುಭವಿಯಾಗಿ ಇಕೆವೈಸಿ ಮಾಡಿದ್ದರೂ ಹಣ ಬಂದಿಲ್ಲದಿದ್ದರೆ ದೂರು ಸಲ್ಲಿಸಲು ಅವಕಾಶ ಇದೆ. ಹೆಲ್ಪ್ ಡೆಸ್ಕ್ ತೆರೆದಿರುತ್ತದೆ, ಸಹಾಯವಾಣಿ ನಂಬರ್​ಗಳಿವೆ. ಪಿಎಂ ಕಿಸಾನ್ ಪೋರ್ಟಲ್​ಗೆ ಹೋಗಿ (pmkisan.gov.in/) ನೇರವಾಗಿ ದೂರು ಸಲ್ಲಿಸುವ ಅವಕಾಶ ಇದೆ.

ದೂರು ಸಲ್ಲಿಸುವ ಕ್ರಮಗಳು

  • ಇಮೇಲ್ ಐಡಿ: [email protected] ಮತ್ತು [email protected]
  • ಪಿಎಂ ಕಿಸಾನ್ ಹೆಲ್ಪ್​ಲೈನ್ ನಂಬರ್: 155261 / 011-24300606
  • ಪಿಎಂ ಕಿಸಾನ್ ಟೋಲ್ ಫ್ರೀ ನಂಬರ್: 1800-115-526
  • ಪೋರ್ಟಲ್​ನಲ್ಲಿ ನೇರ ಲಿಂಕ್: pmkisan.gov.in/Grievance.aspx

ಇಲ್ಲಿ ಪೋರ್ಟಲ್​ನಲ್ಲಿ ನೀವು ಮೇಲಿನ ದೂರು ಪುಟ ತೆರೆದರೆ, ಅದರಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಅಕೌಂಟ್ ನಂಬರ್, ಅಥವಾ ಮೊಬೈಲ್ ನಂಬರ್ ಅನ್ನು ನಮೂದಿಸಿ, ‘ಗೆಟ್ ಡೀಟೇಲ್ಸ್’ ಕ್ಲಿಕ್ ಮಾಡಿ.

ಪಿಎಂ ಕಿಸಾನ್ ಹಣ ಬರದೇ ಇರುವುದಕ್ಕೆ ಸಂಭಾವ್ಯ ಕಾರಣಗಳೇನು?

  • ಬ್ಯಾಂಕ್ ಖಾತೆ ಸ್ಥಗಿತಗೊಂಡಿರಬಹುದು
  • ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿರಬಹುದು
  • ಖಾತೆದಾರ ಮೃತಪಟ್ಟಿರಬಹುದು
  • ಆಧಾರ್ ನಿಷ್ಕ್ರಿಯಗೊಂಡಿರಬಹುದು
  • ಬ್ಯಾಂಕ್ ಖಾತೆ ತಪ್ಪಾಗಿ ನಮೂದಿಸಿರಬಹುದು
  • ಬ್ಯಾಂಕ್ ಖಾತೆಯ ಐಎಫ್​ಎಸ್​ಸಿ ಕೋಡ್ ತಪ್ಪಾಗಿರಬಹುದು

ಇಕೆವೈಸಿ ಮಾಡುವುದು ಕಡ್ಡಾಯ

ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ಇಕೆವೈಸಿ ಅಪ್​ಡೇಟ್ ಮಾಡಿಲ್ಲದೇ ಇದ್ದರೆ 14, 15 ಮತ್ತು 16ನೇ ಕಂತಿನ ಹಣ ಸಿಕ್ಕಿರುವುದಿಲ್ಲ. ಸರ್ಕಾರ ಈ ಹಿಂದೆಯೇ ಸಾಕಷ್ಟು ಗಡುವು ಕೊಟ್ಟಿತ್ತು. ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ ಸುಲಭವಾಗಿ ಇಕೆವೈಸಿ ಸಲ್ಲಿಸಬಹುದು. ರೈತ ಸಂಪರ್ಕ ಕೇಂದ್ರಕ್ಕೆ ಹೋಗಿಯೂ ಆಧಾರ್ ದಾಖಲೆ ಕೊಟ್ಟು ಕೆವೈಸಿ ಅಪ್​ಡೇಟ್ ಮಾಡಿಸಬಹುದು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?