Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಅಪರಾಧ ಸುದ್ದಿ

ಕೊಲೆ ಬೆದರಿಕೆ, ಕೊಲೆಯತ್ನ ಇದ್ದರೂ ಕ್ರಮ ಕೈಗೊಳ್ಳದ ಕೌಲ್ ಬಜಾರ್  ಠಾಣೆಯ ಪೊಲೀಸರು : ಹಿರಿಯ ನಾಗರಿಕ ಈರಣ್ಣ ಆರೋಪ

ಬಳ್ಳಾರಿ : ನಮ್ಮ ಕೌಟುಂಬಿಕ ಕಲಹ ಆಸ್ತಿ ಕಲಹವಾಗಿ ಮಾರ್ಪಟ್ಟು ನನ್ನ ಇಬ್ಬರು ಕಿರಿಯ ಮಕ್ಕಳಾದ  ವಾಸುದೇವ ಮತ್ತು ಪುರುಷೋತ್ತಮ ಇವರು ನನ್ನನ್ನು, ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊಡೆದು ಬಡಿದು ಕೊಲೆ ಮಾಡಲು ಯತ್ನಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹಾಕಿರುತ್ತಾರೆ, ಕಳೆದ ಎರಡು ಮೂರು ತಿಂಗಳಿನಿಂದ ನಾವು

ಬಳ್ಳಾರಿಯಲ್ಲಿನ ಕೋಟೆಯ ಪ್ರದೇಶದ ನಿರಾಶ್ರಿತರ ಕೇಂದ್ರದಲ್ಲಿ ವಾಸ ಮಾಡುತ್ತಾ ಇದ್ದೇವೆ.  ಘಟನೆಯ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ  ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳದೆ   ಹಲ್ಲೇಕೊರರ   ಜೊತೆ ಶಾಮೀಲಾಗಿ ದೂರು ನೀಡಲು ಹೋದ ನನ್ನನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿರಿಯ ನಾಗರಿಕರಾದ ನನಗೆ ಕೌಲ್ ಬಜಾರ್ ಠಾಣೆಯ ಅಧಿಕಾರಿಗಳು ಅವಮಾನ ಮಾಡಿರುತ್ತಾರೆ ಎಂದು  ಹಿರಿಯ ನಾಗರಿಕ ಗಾರೆ ಕೆಲಸದ ಈರಣ್ಣ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ತನ್ನ ಹಿರಿಯ  ಮಗ ನರಸಿಂಹಲು ಇಬ್ಬರು ಹೆಣ್ಣು ಮಕ್ಕಳಾದ ನೇತ್ರಾವತಿ ಮತ್ತು ಲಲಿತ ಹಾಗೂ ಸೊಸೆಯಾದ ಲಕ್ಷ್ಮಿ ದೇವಿ ಅವರೊಂದಿಗೆ  ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ
ನಮ್ಮ ಕುಟುಂಬದಲ್ಲಿ ಕುಟುಂಬ ಕಲಹವಾಗಿ ನಂತರ ಅದು ಆಸ್ತಿ ವಿವಾದಕ್ಕೆ ತಿರುಗಿದೆ. ನನ್ನ ಇಬ್ಬರು ಕಿರಿಯ ಗಂಡು ಮಕ್ಕಳಾದ ಪುರುಷೋತ್ತಮ ಮತ್ತು ವಾಸುದೇವ ಎಂಬುವವರು  ನನ್ನ ಮೇಲೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಪದೇಪದೇ ದೈಹಿಕ ಹಲ್ಲೆ ಮಾಡುವುದು ಸೇರಿದಂತೆ ಮಾರಕಾಸ್ತ್ರಗಳಿಂದ ನಮ್ಮ ಮೇಲೆ ಕೊಲೆ ಯತ್ನ ನಡೆಸಿರುತ್ತಾರೆ.

ಈ ಘಟನೆ ಕುರಿತು ನಾನು ಮತ್ತು ನನ್ನ ಮಕ್ಕಳು ಕೌಲ್ ಬಜಾರ್ ಠಾಣೆಗೆ ದೂರು ನೀಡಲು ಹೋದಾಗ ಅಲ್ಲಿನ ಉನ್ನತ ಅಧಿಕಾರಿಯೊಬ್ಬರು ನಮಗೆ ನ್ಯಾಯ ಕೊಡಿಸದೆ ನಮ್ಮನ್ನೇ ಅವಾಚ್ಯವಾಗಿ ನಿಂದಿಸಿ ಅವಮಾನಕರ ಬೈಗಳನ್ನು ಬೈಯುತ್ತಾ ಹಿರಿಯ ನಾಗರಿಕರೆನ್ನದೆ ನನ್ನನ್ನು ಅವಮಾನಿಸಿರುತ್ತಾರೆ. ಅಷ್ಟೇ ಅಲ್ಲದೆ ನನ್ನನ್ನು ಕುರಿತು ಅವರು, ನಿನ್ನ ಆಸ್ತಿಯನ್ನು ನನಗಾದರೂ ಕೊಡು ನಾನು ಎಲ್ಲರಿಗೂ ಸಮಪಾಲಾಗಿ ಹಂಚಿ ವ್ಯಾಜ್ಯವನ್ನು ಪರಿಹರಿಸುತ್ತೇನೆ ಇಲ್ಲವಾದರೂ ಎಲ್ಲಿಗಾದರೂ ಹೋಗಿ ಸಾಯಿರಿ ನಮ್ಮ ಠಾಣೆಗೆ ಪದೇ ಪದೇ ಬರಬೇಡಿ ಎಂದು ನನ್ನನ್ನು ಗದರಿಸಿ ಕಳುಹಿಸುತ್ತಾರೆ ಎಂದು ಹಿರಿಯ ನಾಗರಿಕ ಈರಣ್ಣ ಗೋಷ್ಠಿಯಲ್ಲಿ ಕಣ್ಣೀರು ಸುರಿಸಿದರು.

ಅಷ್ಟೇ ಅಲ್ಲದೆ ಠಾಣೆಯ ಹೊಂದಿಬ್ಬರು  ಪೇದೆಗಳು ನಮ್ಮ ಸಾಹೇಬರಿಗೆ ಹಣ ಕೊಟ್ಟಲ್ಲಿ ನಿಮ್ಮ ಸಮಸ್ಯೆ ಪರಿಹರಿಸುತ್ತಾರೆ ಹಣ ತೆಗೆದುಕೊಂಡು ಬನ್ನಿ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ನಮಗೆ ಲಂಚದ ಬೇಡಿಕೆ ಇಟ್ಟಿರುತ್ತಾರೆ, ಆದರೆ ನಮ್ಮ ಹತ್ತಿರ ಹಣವಿಲ್ಲದಿದ್ದರಿಂದ ನಾವು ಲಂಚ ಕೊಡಲು ಸಾಧ್ಯವಾಗಿಲ್ಲ. ನಮ್ಮ ಕುಟುಂಬಕ್ಕಾದ ಅನ್ಯಾಯ ಮತ್ತು ಈ ಘಟನೆಯ ಕುರಿತು  ನಾವು ಲೋಕಾಯುಕ್ತ ಅದಾಲತ್ ನಲ್ಲಿ ನಮಗೆ ನ್ಯಾಯ ಕೊಡಿಸುವಂತೆ ಲೋಕಾಯುಕ್ತರಿಗೆ  ದೂರು ಸಲ್ಲಿಸಿದಾಗ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ದೂರು  ದಾಖಲಿಸಿರುತ್ತಾರೆ.

ಆದರೂ ನಮಗೆ ಕೌಲ್ ಬಜಾರ್ ಪೊಲೀಸ್ ಠಾಣೆಯ ಪೊಲೀಸರಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ ಕಾರಣ ನೀವಾದರೂ ನನಗೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಬೇಕೆಂದು ಅಲವತ್ತು ಕೊಂಡರು.

ಈ ಸಂದರ್ಭದಲ್ಲಿ ಈರಣ್ಣ  ಅವರ ಹಿರಿಯ ಮಗ ನರಸಿಂಹಲು ಹೆಣ್ಣು ಮಕ್ಕಳಾದ ನೇತ್ರಾವತಿ ಮತ್ತು ಲಲಿತ ನರಸಿಂಹಲು ಪತ್ನಿ, ಲಕ್ಷ್ಮಿ ದೇವಿ, ಅವರ ಕುಟುಂಬ ಸ್ನೇಹಿತರಾದ ಸ್ವಾಮಿ ರೆಡ್ಡಿ ಅಂದ್ರಾಳ್, ದೊಡ್ಡಬಸಪ್ಪ  ಸೇರಿದಂತೆ ಮತ್ತಿತರರು ಇದ್ದರು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?