ಕುರುಗೋಡು.ಅ.21, ಬೆಳಕಿನ ಹಬ್ಬ ದೀಪಾವಳಿ ಹಬ್ಬವು ರೈತರ ಬಾಳಲ್ಲಿ ಬೆಳಕು ನೀಡಲಿ ಎಂದು ಬಳ್ಳಾರಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ದೊಡ್ಡಕೇಶವರೆಡ್ಡಿ ಅವರು ದೀಪಾವಳಿಹಬ್ಬದ ಸಂದೇಶ ನೀಡಿದರು.
ಅವರು ಸಮೀಪದ ಕರ‍್ಲಗುಂದಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘನ ಸರ್ವೋಚ್ಚನ್ಯಾಯಾಲಯದ ನಿರ್ದೆಶನದಂತೆ ಶಬ್ದ, ವಾಯುಮಾಲಿನ್ಯ ಉಂಟುಮಾಡುವ ನಿಷೇಧಿತ ಪಟಾಕಿಗಳನ್ನು ಬಳಕೆ ಮಾಡಬಾರದು.
ಅಲ್ಲದೆ ೧೧೦ ಡೆಸಿಬಲ್‌ಗಳಿಗಿಂತ ಹೆಚ್ಚಿನ ಶಬ್ದ ಮಾಡುವ ಪಟಾಕಿಗಳನ್ನು ಕೂಡ ನಿಷೇಧಿಸಲಾಗಿದೆ. ಹಸಿರುಪಟಾಕಿಗಳನ್ನು ಬಳಸಬೇಕೆಂದು ಎಂದು ನುಡಿದರು. ಆದ್ದರಿಂದ ಹಬ್ಬದ ದಿನದಂದು ಪಟಾಕಿಗಳನ್ನು ಪ್ರತಿಯೊಬ್ಬ ತಂದೆ-ತಾಯAದಿರು ತಮ್ಮ ಚಿಕ್ಕ ಮಕ್ಕಳಿಗೆ ಪಟಾಕಿಗಳನ್ನು ಹಚ್ಚಲು ಕೊಡಬಾರದು.
ಇದರಿಂದ ಎಷ್ಟೋ ಮಕ್ಕಳು ಪಟಾಕಿಹಚ್ಚಿ ತಮ್ಮ ಅಮೂಲ್ಯವಾದ ಕಣ್ಣುಗಳನ್ನು ಕಳೆದುಕೊಂಡ ಹಲವಾರು ಘಟನೆಗಳಿವೆ. ಆದ್ದರಿಂದ ಪಟಾಕಿಗಳನ್ನು ಸುರಕ್ಷಿತ ಸ್ಥಳದಲ್ಲಿ ಬಿಡಬೇಕು, ಇನ್ನೊಬ್ಬರಿಗೆ ತೊಂದರೆ ಮಾಡುತ್ತಾ ಪಟಾಕಿಗಳನ್ನು ಹಚ್ಚಬಾರದು ಎಂದು ತಿಳಿಸಿದರು. ದೀಪಾವಳಿ ಹಬ್ಬದಂದು ಜಾತಿ, ಧರ್ಮ, ಮತ, ಬಿಟ್ಟು ಎಲ್ಲರೂ ದೀಪಗಳನ್ನು ಬೆಳಗುವ ಮೂಲಕ ಸುರಕ್ಷಿತ ಹಾಗು ಪರಿಸರಸ್ನೇಹಿ ಹಬ್ಬವನ್ನು ಆಚರಿಸೋಣ, ದೀಪಾವಳಿಯು ಬೆಳಕಿನ ಹಬ್ಬ ಎಲ್ಲರ ಬಾಳಿನ ಕತ್ತಲೆ ಕಳೆದು ಜ್ಣಾನವೆಂಬ ದೀಪ ನಿತ್ಯ ಜೀವನದಲ್ಲಿ ನಿರಂತರವಾಗಿ ಬೆಳಗಲಿ, ಮತ್ತು ದೀಪಾವಳಿಯು ಎಲ್ಲರಿಗೂ ಸುಖ, ಶಾಂತಿ ನೆಮ್ಮದಿಯನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.