Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮದ್ಯ ಮಾರಾಟಗಾರರ ಧರಣಿ !!

ಬಳ್ಳಾರಿ, .04: ರಾಜ್ಯದ ಎಲ್ಲಾ ವರ್ಗದ ಸನ್ನದುದಾರರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸಂಬಂಧಪಟ್ಟು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿ ಎದುರು ಜಿಲ್ಲಾ ಸಂಘದ ನೇತೃತ್ವದಲ್ಲಿ ಎಲ್ಲಾ ವರ್ಗದ ಸನ್ನದುದಾರರು 'ಸಾಂಕೇತಿಕ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.

ಅಂತೆಯೇ ನಮ್ಮ ಜಿಲ್ಲೆಯಲ್ಲೂ ಕೂಡಾ ನಾವು ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದು ಬಳ್ಳಾರಿ ಜಿಲ್ಲಾ ಮಧ್ಯ ಮಾರಾಟಗಾರ ಸಂಘದ ಅಧ್ಯಕ್ಷರಾದ ಎಸ್ ಸತೀಶ್ ಬಾಬು ತಿಳಿಸಿದರು.

ಅವರು ಇಂದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇಕಡ 20 ಲಾಭಾಂಶ ನೀಡಬೇಕು, ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು, ಯಾವುದೇ ಕಾರಣಕ್ಕೂ ಸನ್ನದು ಶುಲ್ಕವನ್ನು ಹೆಚ್ಚಳ ಮಾಡಬಾರದು. ಮತ್ತು ಇತ್ತೀಚಿನ
ವರ್ಷಗಳಲ್ಲಿ ಸನ್ನದುಗಳ ಸಂಖ್ಯೆ ಮಾತ್ರ ಹೆಚ್ಚಳ ಆಗಿರುವುದು ಬಿಟ್ಟರೆ ಮದ್ಯ ಮಾರಾಟ ಗಣನೀಯವಾಗಿ ಹೆಚ್ಚಳ ಮಾಡಬೇಕು
ನೀಡಲು ಅವಕಾಶ ಕೆಲವೊಂದು ಸನ್ನದುಗಳನ್ನು ಏಲಂ ಮಾಡಲಾಗುವುದು ಎಂದು ಇಲಾಖೆ ಸರ್ಕಾರಕ್ಕೆ ನೀಡಿರುವ ಪ್ರಸ್ತಾವನೆಯಲ್ಲೂ ಕೂಡ ಇದೆ.                                                                         

ದಯವಿಟ್ಟು ಯಾವುದೇ ಕಾರಣಕ್ಕೂ ಸನ್ನದುಗಳನ್ನು ಬಲವಂತವಾಗಿ ಏಳ ಮಾಡಬಾರದಾಗಿ, ಸಿ.ಎಲ್-2ಗಳಲ್ಲಿ ಪಾನೀಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಡಬೇಕು ಸಿ.ಎಲ್-9, ಸಿಎಲ್-7 ಅಥವಾ ಇನ್ನಿತರ ದೊಡ್ಡ ಹೋಟೆಲುಗಳಿಗೆ ಹೋಗಿ ಮದ್ಯದೊಂದಿಗೆ ಆಹಾರಪದಾರ್ಥಗಳನ್ನು ತೆಗೆದುಕೊಂಡು ದುಬಾರಿ ಖರ್ಚು ಮಾಡಲು ಸಾಧ್ಯವಿಲ್ಲದ ಬಡ
ವರ್ಗದ ಗ್ರಾಹಕರಿಗೆ ಅನುಕೂಲವಾಗಲು ಸನ್ನದು ಷರತ್ತನ್ನು ಸಡಲಿಸುವ
ಅಗತ್ಯವಿದೆ. ಸನ್ನದು ಆವರಣದಲ್ಲಿ ನಿಗದಿಪಡಿಸಿದ ನಿರ್ಧಿಷ್ಟ ಸ್ಥಳ ಮತ್ತು ಮೊದಲೇ ತಯಾರಿಸಿದ ಆಹಾರಗಳನ್ನು
ಮಾಡಿಕೊಡುವುದರಿಂದ ಬಡ ವರ್ಗದ ಗ್ರಾಹಕರಿಗೆ ಸಹಾಯವಾಗುತ್ತದೆ ಮತ್ತು
ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಮಾಡುವುದನ್ನು ತಡೆಗಟ್ಟುವ ಸಾಧ್ಯತೆ ಇರುತ್ತದೆ. ಹಾಗೂ ಕಾಯ್ದೆ ಉಲ್ಲಂಘನೆ ತಡೆಯಬಹುದು.

ನೆರೆ ರಾಜ್ಯದಲ್ಲಿ ಈ ತೆರನಾದ ವ್ಯವಸ್ಥೆಇರುತ್ತದೆ ಹಾಗೂ ಹೆಚ್ಚುವರಿ ಶುಲ್ಕವನ್ನು ಅಳವಡಿಸುವುದರಿಂದ ಸರಕಾರಕ್ಕೆ ವರಮಾನ ಜಾಸ್ತಿ ಆಗುತ್ತದೆ. ನಿಗದಿತ ಸ್ಥಳಾವಕಾಶದಲ್ಲಿ ಆಹಾರ ತಯಾರಿಕೆಗೆ ಅವಕಾಶ ನೀಡದೆ,ಮದ್ಯವನ್ನು ಮಾತ್ರ ನಿಂತು ಕುಡಿಯಲು ಅವಕಾಶವನ್ನು ನೀಡುವಂತೆ ವಿನಂತಿಸುತ್ತಿದ್ದೇವೆ.

ಕಾನೂನು ಬಾಹಿರವಾಗಿ ವ್ಯವಹರಿಸದಂತೆ ಕಠಿಣ ಕಾನೂನು ರೂಪಿಸಬೇಕು. ಈ ವ್ಯವಸ್ಥೆ
ಬಯಸುವ ಸನ್ನದುದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದರಿಂದ ಸರ್ಕಾರದ ವರಮಾನದ ಹೇಚ್ಚಳಕ್ಕೆ ಸಹಾಯವಾಗುತ್ತದೆ.

ಸಿ.ಎಲ್-9ಗಳಲ್ಲಿ ಮಾತ್ರ ಹೆಚ್ಚುವರಿ ಕೌಂಟ‌ಗಳನ್ನು ಶುಲ್ಕ ವಿಧಿಸಿ ನೀಡುವ ಕುರಿತು ಮಂಜೂರಾದ ಸನ್ನದು ಆವರಣದಲ್ಲಿ ಮೊದಲನೇ ಮಹಡಿ ಇದ್ದಲ್ಲಿ ಇದು ತುಂಬಾ ಸಹಕಾರಿ ಆಗುತ್ತದೆ. ಮತ್ತು ಹೆಚ್ಚುವರಿ ಶುಲ್ಕ ವಿಧಿಸಬಹುದು. ಸಿ.ಎಲ್-9ಗಳಲ್ಲಿ
ಮದ್ಯವನ್ನು ಪಾರ್ಸಲ್ ರೂಪದಲ್ಲಿ ಮಾರಾಟ ಮಾಡುವ ಕುರಿತು ಕಾನೂನು ತಿದ್ದುಪಡಿ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಬಳ್ಳಾರಿ ಮಧ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಸತೀಶ್ ಬಾಬು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಪಿ. ಗುರುನಾಥ, ಉಪಾಧ್ಯಕ್ಷರು ಕೆ.ಪಿ. ರಾಮಿರೆಡ್ಡಿ, ಕಾರ್ಯದರ್ಶಿ ಸಿ. ಹೆಚ್. ಬಸವಲಿಂಗಾರೆಡ್ಡಿ ಸಹ-ಕಾರ್ಯದಶಿ ಕೆ. ಸೂರ್ಯಕುಮಾರ ಶೆಟ್ಟಿ, ಪಿ. ಲಕ್ಷಾರೆಡ್ಡಿ, ಲಿಕ್ಕರ್ ವೇಣು, ಹಗರಿ ಶ್ರೀನಿವಾಸ್ಸೇರಿದಂತೆ ಇತರರಿದ್ದರು.

 

 

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?