Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತಾರಾಷ್ಟ್ರೀಯರಾಜಕೀಯಶಿಕ್ಷಣವ್ಯಾಪಾರತಂತ್ರಜ್ಞಾನಮನರಂಜನೆವೈಶಿಷ್ಟ್ಯ ಲೇಖನಆರೋಗ್ಯ ಮತ್ತು ಫಿಟ್ನೆಸ್ಪ್ರಯಾಣ ಸಲಹೆಗಳುಸೌಂದರ್ಯ ಸಲಹೆಗಳು
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಎಫ್‌ಎಸ್‌ಎಲ್ ಮೇಲೆ ನಂಬಿಕೆ ಇಲ್ಲ,ಎನ್‌ಐಎ ತನಿಖೆೆ ಆಗಬೇಕು: ಶ್ರೀರಾಮುಲು

ಬಳ್ಳಾರಿ,ಫೆ.29: ಪಾಕಿಸ್ತಾನಕ್ಕೆ ಜಯಕಾರ ಹಾಕಿರೋ ಪ್ರಕರಣದ ತನಿಖೆ ಬಗ್ಗೆ ಎಫ್‌ಎಸ್‌ಎಲ್ ವರದಿ ಮೇಲೆ ನಮಗೆ ನಂಬಿಕೆ ಇಲ್ಲ ಎನ್.ಐ.ಎ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನಾಸೀರ್ ಹುಸೇನ್ ಅವರು ಬಳ್ಳಾರಿಯಿಂದ ರಾಜ್ಯಸಭೆಗೆ ಎರಡನೇ ಬಾರಿಗೆ ಆಯ್ಕೆಯಾಗಿರುವುದು ಗೌರವವಿದೆ. ಆದರೆ ಗೆದ್ದ ಮೇಲೆ ಅವರ ವರ್ತನೆ ಮಾತ್ರ ಖಂಡನೀಯ ಎಂದು ಅವರು ತಿಳಿಸಿದರು.
ವಿಧಾನ ಸೌಧದಲ್ಲಿ ಪಾಕಿಸ್ತಾನಕ್ಕೆ ಜಯಕಾರ ಹಾಕಿರೋ ಘಟನೆ ನಡೆದ ತಕ್ಷಣ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರು ದೇಶದ ಜನರ ಕ್ಷಮೆ ಕೇಳಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರೆ ಘಟನೆ ಅಲ್ಲಿಗೆ ಮುಗಿದು ಹೋಗುತ್ತಿತ್ತು.
ಎಫ್‌ಎಸ್‌ಎಲ್ ವರದಿ ಬರುವ ಮುನ್ನ ಕ್ಲೀನ್ ಚಿಟ್ ಯಾಕೆ ನೀಡಿದ್ದಾರೆ? ಎಫ್‌ಎಸ್‌ಎಲ್ ವರದಿ ಅವರ ಪರವಾಗಿಯೇ ಬರುತ್ತದೆ. ಹೀಗಾಗಿ ಎನ್‌ಐಎಗೆ ಒಪ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್‌ನವರು ತುಷ್ಠೀಕರಣದ ರಾಜಕೀಯವನ್ನು ಮಾಡ್ತಿದ್ದಾರೆ. ಭಯೋತ್ಪಾದಕರ ಪರ ಸರ್ಕಾರ ಇದೆ ಎನ್ನುವ ಅನುಮಾನವಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಸ್ನೇಹಿತರ ಜೊತೆ ಅವರು ನಡೆದುಕೊಂಡು ರೀತಿಯನ್ನು ಪ್ರಶ್ನೆ ಮಾಡಬೇಕಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ ಎನ್ನುವದು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ, ಪಾಕಿಸ್ತಾನದ ಪರ ಘೋಷಣೆ ಕೂಗುವಾಗ ಓರ್ವ ವ್ಯಕ್ತಿ ಬಾಯಿ ಮುಚ್ಚುತ್ತಾರೆ. ಅದನ್ನು ಮರೆಮಾಚಲು ಸಿಎಂ ಅದನ್ನು ಕೂಗಿಲ್ಲವೆಂದು ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇಂತಹವರು ವಿಧಾನ ಸೌಧಕ್ಕೆ ನುಗ್ಗಿ ಬಾಂಬ್ ಇಡೋದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ. ಇಂದು ಪಾಕಿಸ್ತಾನದ ಪರ ಜಯಘೋಷ ಹಾಕಿದವರು ನಾಳೆ ವಿಧಾನ ಸೌಧದಲ್ಲಿ ಬಾಂಬ್ ಇಡಲುಹಿಂಜರಿಯಲಾರರು ಎಂದು ಆರೋಪಿಸಿದರು.
ಇಲ್ಲಿನ ಬಿರಿಯಾನಿ ತಿಂದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಇವರಿಗೆ ಸರ್ಕಾರ ಬೆಂಬಲಿಸುತ್ತ? ಭಾರತದಲ್ಲಿ ಇರಲು ಇಷ್ಟವಿಲ್ಲ ಅಂದ್ರೆ ನಾನೇ ವಿಮಾನದ ಚಾರ್ಜ್ ಕೊಡ್ತೇನೆ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಅವರು ಆಗ್ರಹಿಸಿದರು.
ಎಲ್ಲರೂ ಸ್ಪೀಕರ್‌ಗೆ ಗೌರವ ನೀಡಿದ್ರೆ. ಸಚಿವ ಜಮೀರ್ ವ್ಯಂಗ್ಯವಾದ ರೀತಿಯಲ್ಲಿ ಖಾದರ್‌ಗೆ ಎಲ್ಲರೂ ನಮಸ್ಕಾರ ಮಾಡೋ ರೀತಿ ಮಾಡಿದ್ದೇವೆ ಎನ್ನುತ್ತಾರೆ.
ಕೆಜಿ ಹಳ್ಳಿ ಡಿಜಿ ಹಳ್ಳಿ ಪ್ರಕರಣದಲ್ಲಿ ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ದಾಳಿಕೋರರನ್ನು ಡಿಕೆಶಿವಕುಮಾರ್ ಅಮಾಯಕರು ಎನ್ನುತ್ತಾರೆ,
ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ತನಿಖಾ ಅಧಿಕಾರಿಗಳನ್ನು ತಮಗೆ ಬೇಕಾದವರನ್ನು ನೇಮಕ ಮಾಡುತ್ತಾರೆ ಎಂದು ಶ್ರೀರಾಮುಲು ಆರೋಪಿಸಿದರು.
ಪ್ರಧಾನಿ ಮೋದಿ ಅವರ ಬಗ್ಗೆ ಬಿ.ಕೆ.ಹರಿಪ್ರಸಾದ್ ಅವಹೇಳನಕಾರಿಯಾಗಿ ಮಾತನಾಡಿರೋದು ಸರಿಯಲ್ಲ. ಹರಿಪ್ರಸಾದ್ ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲೋಕೆ ಆಗಲ್ಲ, ಬ್ಯಾಕ್‌ಡೋರ್ ರಾಜಕಾರಣಿ ಎಂದರು.
ನನಗೆ ಹಿಂದೂ ಮುಸ್ಲಿಂ ಬೇದಭಾವ ಇಲ್ಲ. ಆದರೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದ್ರೇ ಒಪ್ಪೋದಿಲ್ಲ ಎಂದು ಅವರು ತಿಳಿಸಿದರು.

Author
Suvarna Vaahini
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಬಲದಂಡೆ ಕಾಲುವೆ ಕೇವಲ 10 ದಿನ ನೀರನ್ನು ಹರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ : ಮಾಜಿ ಶಾಸಕ ಟಿ.ಎಚ್.ಸುರೇಶಬಾಬುಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ. 1ರಿಂದ ‘ಬಳ್ಳಾರಿ ಚಲೋ’ಅಮರಾವತಿ ಎಕ್ಸ್‌ಪ್ರೆಸ್‌ನ ರೈಲುಗಳನ್ನು ಕಾಕಿನಾಡುವರೆಗೆ ವಿಸ್ತರಿಸಲು ಮನವಿಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟ; ಮತದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ - ಮತದಾರರ ಪಟ್ಟಿಗೆ ಅರ್ಹರ ಸೇರ್ಪಡೆಗೆ ರಾಜಕೀಯ ಪ್ರತಿನಿಧಿಗಳ ಸಹಕಾರ ಅಗತ್ಯ: ಡಿಸಿ ನಾಗೇಂದ್ರ ಪ್ರಸಾದ್.ಕೆಸಚಿವ ನಾಗೇಂದ್ರಗೆ ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರಿಗೆ ಕೋರಿ ಸಿಬಿಐ ಪತ್ರ !?ಸಚಿವ ನಾಗೇಂದ್ರ ಹೆಗಲಿಗೆ ಹೆಚ್ಚುವರಿ ಜವಾಬ್ದಾರಿ: ವಿರೋಧದ ನಡುವೆಯೇ ಮತ್ತೊಂದು ಖಾತೆ  !ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ - ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಬೇಕು: ಜಿಲ್ಲಾ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆನಾನೊಬ್ಬ ದಲಿತ, ಆದಿವಾಸಿ ಎಂದು ಬಿಜೆಪಿ ಟಾರ್ಗೆಟ್ - ಮೊದಲ ಬಾರಿ ಮೌನ ಮುರಿದ ಸಚಿವ ಬಿ.ನಾಗೇಂದ್ರಮಹಿಳೆಯರ ಪ್ರತಿಭೆಗೆ ಹುಮ್ಮಸ್ಸು ತುಂಬಬೇಕು: ನಾರಾ ವೈಜಯಂತಿ ರೆಡ್ಡಿಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ದೇವದುರ್ಗದಿಂದ ಬಳ್ಳಾರಿಯವರೆಗೆ ಬಿಜೆಪಿ ನಾಯಕರ ಪಾದಯಾತ್ರೆ ಕ್ಯಾನ್ಸಲ್!?